ಸುದ್ದಿಲೈವ್/ಭದ್ರಾವತಿ
ಭದ್ರಾವತಿಯಲ್ಲಿ ಏನೇ ನಡೆದರೂ ರಾಜಕೀಯ ಮತ್ತು ರಾಜಕಾರಣಗಳ ಮೇಲಾಟ ಹೆಚ್ಚಾಗಿ ನಡೆಯುತ್ತದೆ. ಇದು ಎಷ್ಟರ ಮಟ್ಟಿಗೆ ಎಂದರೆ ಆರೋಪಿಗಳ ವಿರುದ್ಧ ಒಂದು ಎಫ್ಐಆರ್ ದಾಖಲಾಗದಂತೆ ನೀಡಿಕೊಳ್ಳುವುದೇ ರಾಜಕೀಯ ಮೇಲಾಟವಾಗಲಿದೆ.
ಆದರೆ ನಾಟ ಸಾಗಿಸುವ ಟ್ರ್ಯಾಕ್ಟರ್ ಗಳು ಮಾಲು ಸಮೇತ ಪತ್ತೆಯಾದರೂ ಅರಣ್ಯ ಇಲಾಖೆಯವರು ಆರೋಪಿಗಳ ವಿರುದ್ಧ ಕ್ರಮಕ್ಕೆ ಪರದಾಡುವಂತಾಗಿದೆ. ಕಾರಣ ರಾಜಕಾರಣಿಗಳ ಹಸ್ತಕ್ಷೇಪಗಳು ಕಂಡು ಬರುತ್ತಿದೆ. ಇಲ್ಲಿ ಕಾನೂನು ಪಾಲನೆ ಎಂಬುದು ಮರಿಚಿಕೆಯಾಗಿ ಕಾನೂನು ಮುರಿಯುವುದೇ ಹೆಚ್ಚಾಗಿದೆ.
ಭದ್ರಾವತಿ ತಾಲೂಕು ಎಮ್ಮೆದೊಡ್ಡಿಯಲ್ಲಿ ಅರಣ್ಯಾಧಿಕಾರಿಗಳಿಂದ ನಾಟ ತುಂಬಿದ ಟ್ರ್ಯಾಕ್ಟರ್ ವಶಪಡೆದಿದ್ದಾರೆ. ಅರಣ್ಯಾಧಿಕಾರಿಗಳು ಮತ್ತು ಮರಗಳ್ಳರ ನಡುವೆ ಮಾತಿನ ಚಕಮಕಿ ನಡೆದಿದೆ. ಪ್ರಭಾವಿಗಳಿಂದ ಕರೆ ಮಾಡಿಸಿ ಟ್ರ್ಯಾಕ್ಟರ್ ಬಿಡಿಸುವ ಪ್ರಯತ್ನ ಮುಂದುವರೆದಿದೆ.