ಚೋಟು ಮೋಟು ಬಿಜೆಪಿ ನಾಯಕರಿಗೆ ಉತ್ತರಿಸೊಲ್ಲ, ಮೊದಲು ನಿಮ್ಮ‌ಮನೆ ಸರಿ‌ಮಾಡಿಕೊಳ್ಳಲಿ-ಮಧು ಬಂಗಾರಪ್ಪ

Minister Madhu Bangarappa informed that on February 04 Mamcos election is being held and the election is being held in 17 districts and Congress supporters are contesting under Rashtriya Sahakari Pratishtha.

ಸುದ್ದಿಲೈವ್/ಶಿವಮೊಗ್ಗ

ಫೆ.04 ರಂದು ಮ್ಯಾಮ್ ಕೋಸ್ ಚುನಾವಣೆ ನಡೆಯುತ್ತಿದ್ದು 17 ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಯಯುತ್ತಿದೆ. ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ಅಡಿ ಕಾಂಗ್ರೆಸ್ ಬೆಂಬಲಿಗರು ಸ್ಪರ್ಧಿಸುತ್ತಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇಲಿನಿಂದ ನಮಗೆ ನಿರ್ದೇಶನವಿದೆ. ಗಂಭೀರವಾಗಿ ಪರಿಗಣಿಸಲು ಸೂಚಿಸಲಾಗಿದೆ. ಹಾಗಾಗಿ ಇಂದು ಎರಡು ಕಡೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಭೆಯಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಪ್ರಚಾರಕ್ಕೆ ಇಳಿಯಲಿದ್ದೇವೆ ಎಂದರು. 

ಮ್ಯಾಮ್ ಕೋಸ್ ವ್ಯವಸ್ಥೆಯೇ ಹದಗೆಟ್ಟಿದೆ. ಮತದಾರರು ಮತಹಾಕಲು ಬರ್ತಾಯಿಲ್ಲ. ಬರುವಂತೆ ಮಾಡಬೇಕಿದೆ ಎಂದ ಸಚಿವರು 2000 ಕೋಟಿ ಕೆಪಿಎಸ್ ಎಷಿಯನ್ ಡೆವೆಲಪ್ ಮೆಂಟ್ ಬ್ಯಾಂಕ್ ಸಾಲದ ಹಣ ನೀಡಿದೆ ಎಂದರು. 

ಎಡಿಬಿಯಿಂದ 400 ಕೆಪಿ ಎಸ್ ಸಿ ಶಾಲೆ ನಿರ್ಮಾಣ

ಪಾರಂಪರಿಕವಾಗಿ ಶಿಕ್ಷಣ ಇಲಾಖೆಯಲ್ಲಿ ಸಮಸ್ಯೆಗಳು ಮುಂದುವರೆದಿದೆ. ಶಿಕ್ಷಣ ವ್ಯವಸ್ಥೆ ಬ್ರೈಟ್ ಆಗಿ ಕಾಣಿಸುತ್ತಿದೆ. 2500 ಕೋಟಿ ವೆಚ್ಚದಲ್ಲಿ 400 ಕೆಪಿಎಸ್ ಸಿ ಶಾಲೆ ಆರಂಭಿಸಲಾಗುವುದು. 

ನೀಟ್ ಮತ್ತು ಸೀಟ್ ಪರೀಕ್ಷೆಗೆ 25000 ಜನಕ್ಕೆ ಸೀಮಿತಗೊಳಿಸಲಾಗಿದೆ. ಎ ಫಾರ್ ಆಪಲ್ ಬದಲು ಹತ್ತು ಉದಾಹರಣೆ ನೀಡಿ ಪಾಠ ನೀಡುವ ವ್ಯವಸ್ಥೆ ಎಐ ಶಿಕ್ಷದ ಕಡೆ ಹೋಗಲಾಗುತ್ತಿದೆ. ಕಂಪ್ಯೂಟರ್ ಜೊತೆ ಸಂವಾದ. ಖಾಸಗಿಯವರ ಜೊತೆ ಟೈ ಅಪ್ ಮಾಡಿಕೊಂಡು ಪಾಠ ನಾಡುವ ವ್ಯವಸ್ಥೆ ಮಾಡಲಾಗಿದೆ.

ಗಣಿತ ಗಣಕ, ಶಿಕ್ಷಕರು ತಂದೆ ತಾಯಿಗೆ ಕರೆ ಮಾಡಿ ಮಕ್ಕಳಿಗೆ ಪಾಠ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಇದನ್ನ ಸಿಎಂ ಸಿದ್ದರಾಮಯ್ಯ ಫೆ.4 ರಂದು ನಡೆಯುವ ಬಜೆಟ್ ನಲ್ಲಿ ಪ್ರಸ್ತಾಪಿಸಲಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಎಲ್ ಕೆಜಿ ಮತ್ತು ಯುಕೆಜಿ ವ್ಯವಸ್ಥೆಯನ್ನ ತರುವ ಪ್ರಯತ್ನ ನಡೆಯುತ್ತಿದೆ ಎಂದರು. 

17 ಜಿಲ್ಲೆಯಲ್ಲಿ ಮಾಕ್ ಎಕ್ಸಾಮ್ ನಡೆಸಲಾಗುತ್ತಿದೆ. ಸಿಇಒ ನೇತೃತ್ವದಲ್ಲಿ ನಡೆಸಲಾಗುತ್ತಿದೆ ಎಜುಕೇಷನ್ ಕಮಿಟಿ ರಚಿಸಲಾಗಿದೆ. ಇದರ ವರದಿ ತರಿಸಿಕೊಂಡು ಸಾಧಕ ಬಾಧಕ ನೋಡಿ ರಾಜ್ಯಾದ್ಯಂತ ಜಾರಿಗೆ ತರಲಾಗುವುದು ಎಂದರು. 

ಸರ್ಕಾರಿ ಶಾಲೆಗಳಲ್ಲಿ ಸಮಸ್ಯೆಗಳಿರುವುದು ನಿಜ. ಆದರೆ ಈ ಬದಲಾವಣೆಗಳು ಮಕ್ಕಳ ಕಲಿಕೆಗೆ ಅನುಕೂಲವಾಗಲಿದೆ. ಕಾಂಗ್ರೆಸ್ ಸರ್ಕಾರವೆಲ್ಲಿದೆ ಅಲ್ಲಿ ಕೇಂದ್ರ ಸರ್ಕಾರ ಅನುದಾನ ಕಡಿನೆ ಕೊಡುತ್ತೆ‌. ಶಾಕೆಯಿಂದ ಹೊರ ಉಳಿದಿರುವ ಮಕ್ಕಳನ್ನ ಶಾಲೆಗೆ ಸೇರಿಸಲು ತಾಲೂಕ ಎಜುಕೇಷನ್ ಕಮಿಟಿಯನ್ನ ಶಾಸಕರ ನೇತೃತ್ವದಲ್ಲಿ ರಚಿಸಲಾಗುತ್ತಿದೆ. ಅದಕ್ಕೆ ಜವಬ್ದಾರಿ ನೀಡಲಾಗುತ್ತಿದೆ ಎಂದರು. 

ಖಾಸಗಿಯವರ ಸಹ ಭಾಗಿತ್ವ

ವಿಮಾನ ನಿಲ್ದಾಣವನ್ನ ಖಾಸಗಿಯವರಿಗೆ ನಿರ್ವಹಣೆಗೆ ನೀಡಲು ಚಿಂತಿಸಲಾಗಿದೆ. ಓವರ್ ಬಜೆಟ್ ಆಗಿದೆ. ಹಣ ರಾಜದಯ ಸರ್ಕಾರದಿಂದ ಹೋಗುತ್ತಿದೆ. 600 ಕೋಟಿ ಹಣ ವೆಚ್ಚದಲ್ಲಿ ಆದ ವಿಮಾನ ನಿಲ್ದಾಣಕ್ಕೆ ನಿರ್ವಹಣೆಗೆ ಹಣ ತೆಗೆದಿಡದೆ ಆರಂಭಿಸಲಾಗಿದೆ. ಬರ್ಡನ್ ನೀಗಿಸಲು ಸಚಿವ ಎಂಪಿಪಾಟೀಲ್  ಗೆ ಜವಬ್ದಾರಿಯಿದೆ. 

ಶೀಘ್ರದಲ್ಲಿಯೇ ತನಿಖೆ ಬಗ್ಗೆ ಕ್ರಮ

ವಿಮಾನ ನಿಲ್ದಾಣ ಮತ್ತು ಸ್ಮಾರ್ಟ್ ಸಿಟಿ ಕಾಮಗಾರಿ ಸೇರಿದಂತೆ ತನಿಖೆಗೆ ಸಿಎಂ ಆಸಕ್ತರಿದ್ದಾರೆ. ಇದರ ಬಗ್ಗೆ ಸೂಕ್ತ ನಿರ್ಧಾರ ಹೊರಬೀಳಲಿದೆ ಎಂದರು. 

ಬಹುಮಹಡಿ ಕಟ್ಟಡ ಆರಂಭ ವಿಳಂಭದ ಕುರಿತು ನಗೆ ಬೀರಿದ ಸಚಿವರು ಸೂಕ್ತ ಉತ್ತರ ನೀಡಲಿಲ್ಲ. ನಿನ್ನೆ ಎಂಎಲ್ ಸಿ ಅರುಣ ಅವರ ಹೇಳಿಕೆಗೆ ಟಾಂಗ್ ನೀಡಿದ ಸಚಿವರು. ಕುವೆಂಪು ವಿಶ್ವ ವಿದ್ಯಾಲಯ ಮುಚ್ಚುವ ಹಂತಕ್ಕೆ ತಲುಪಿರುವುದು ಬಿಜೆಪಿ ಸರ್ಕಾರದ್ದೇ ಕೊಡುಗೆ ಎಂದರು. ವಿವಿಯನ್ನ ಉಳಿಸುವ ಪ್ರಯತ್ನ ನನ್ನದಿದೆ ಎಂದರು.‌

ಅರುಣ್ ಗೆ ಕಾಮನ್ ಸೆನ್ಸ್ ಇಲ್ಲ

ಅರುಣ್ ಗೆ ಕಾಮನ್ ಸೆನ್ಸ್ ಇಲ್ಲ. ರಾಜ್ಯಪಾಲರಿಗೆ ಅರುಣ್ ಗೆ ಗೌರವ ಕೊಡುವ ಬಗ್ಗೆನೆ ಗಮನವಿಲ್ಲ ಎಂದ ಸಚಿವರು, ಚೋಟು ಮೋಟ ಬಿಜೆಪಿ ನಾಯಕರು ನಿಮ್ಮ‌ಪಕ್ಷದಲ್ಲುರುವ ಹೊಸಲು ಸರಿ ಮಾಡಿಕೊಳ್ಳಿ, ಶರಾವತಿ ಸಂತ್ರಸ್ತರದ್ದು ಕಾಂಗ್ರೆಸ್ ದು ಎಂದು ಬೈಯ್ಯುತ್ತಾರೆ ಸಂಸದರು 13 ವರ್ಷಕ್ಕೆ ಮೊದಲ ಬಾರಿಗೆ ಸಂಸತ್ ನಲ್ಲಿ ಬಾಯಿಬಿಟ್ಟಿದ್ದಾರೆ. ಶರಾವತಿ ಮುಳುಗಡೆ ಸಂತ್ರಸ್ತರ ಉದ್ದಾರಕ ಎಂದು ಬಿಂಬಿಸುವುದನ್ನ‌ ಬಿಜೆಪಿ ಬಿಡಬೇಕು ಎಂದರು. 

ಸಚಿವರಿಗೆ ಅಧಿಕಾರದ ಪಿತ್ತ ಬೆತ್ತಿಗದ ಏರಿದೆ ಎಂದ ಶಾಸಕರ ಹೇಳಿಕೆಗೆ ಕೂಲ್ ಆಗಿಯೇ ಉತ್ತರ ನೀಡಿದ ಸಚಿವರು ನಿಮಗೆ ಕಾಣಿಸುತ್ತಿದೆಯಾ? ಜನರಿಗೆ ಗೊತ್ತು ಯಾರಿಗೆ ಅಧಿಕಾರ ಪಿತ್ತ ನೆತ್ತಿಯಲ್ಲಿದೆ ಎಂದು ಮಾರ್ಮಿಕವಾಗಿ ನುಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close