ಕರುವಿನ ಮೇಲೆ ಚಿರತೆ ದಾಳಿ

The incident in which a leopard attacked and injured a calf tied up in a barn took place at Rukminamma's house in Chilumezaddu  Tammadihalli Gram Panchayat.


ಸುದ್ದಿಲೈವ್/ಶಿವಮೊಗ್ಗ 

ಕೊಟ್ಟಿಗೆಯಲ್ಲಿ ಕಟ್ಟಿದ ಕರು ಮೇಲೆ‌ ಚಿರತೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ತಮ್ಮಡಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಲುಮೆಜಡ್ಡಿನ ರುಕ್ಮಿಣಮ್ಮನವರ ಮನೆಯಲ್ಲಿ ನಡೆದಿದೆ.

ಭಾನುವಾರ ರಾತ್ರಿ‌‌ ಕೊಟ್ಟಿಗೆಯಲ್ಲಿ‌ ಕಟ್ಟಿದ್ದ ಕರುವಿನ ಮೇಲೆ‌ ಏಕಾಏಕಿ ದಾಳಿ‌ ನಡೆಸಿದ್ದು, ಕರು ಅರಚಿಕೊಂಡಾಗ ಎದ್ದು ಲೈಟ್ ಹಾಕಿದಾಗ ಚಿರತೆ ಕರು ಬಿಟ್ಟು ಪರಾರಿಯಾಗಿದೆ. ಇದರಿಂದಾಗಿ ಕರುವಿನ ಮುಖಕ್ಕೆ ತೀವ್ರ ಗಾಯವಾಗಿದೆ. ಕರುವಿಗೆ ಚಿಕಿತ್ಸೆ ನೀಡಲಾಗಿದೆ.

ಎರೆಡು ವಾರದ ಹಿಂದೆ ಪಕ್ಕದ ಊರು‌ ಗುಬ್ಬಿಗದಲ್ಲಿ‌ ಚಿರತೆ ನಾಯಿಯನ್ನು ಹೊತ್ತುಕೊಂಡು ಹೋಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ನಿರಂತರವಾಗಿ ನಾಯಿಗಳನ್ನು ಹೊತ್ತೊಯ್ಯುತ್ತಿರುವ ಚಿರತೆ ಇದೀಗ ಕೊಟ್ಟಿಗೆ ಒಳಗೆ ದಾಳಿ ನಡೆಸಿ ಹಸುಗಳನ್ನು ಹೊತ್ತೊಯ್ಯಲು ಆರಂಭಿಸಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close