ಪತ್ನಿಯ ಶೀಲಶಂಕಿಸಿ ಸ್ಕ್ರೂಡ್ರೈವರ್ ನಿಂದ ಕೊಂದ ಪತಿಗೆ ಜೀವಾವಧಿ ಶಿಕ್ಷೆ

The 1st Additional District and Sessions Court of Shimoga has sentenced the accused to death by stabbing his wife with a screw driver to life imprisonment and a fine of Rs.


ಸುದ್ದಿಲೈವ್/ಶಿವಮೊಗ್ಗ

ಹೆಂಡತಿಯನ್ನು ಸ್ಕ್ರೂ ಡ್ರೈವರ್‌ನಿಂದ ಚುಚ್ಚಿ ಕೊಲೆ ಮಾಡಿದ ಆರೋಪಿಗೆ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ, ಮತ್ತು ರೂ 25,000/- ದಂಡ ಮತ್ತು ದಂಡ ಕಟ್ಟಲು ತಪ್ಪಿದಲ್ಲಿ ಪುನಃ 06ತಿಂಗಳುಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 

ತುಂಗಾ ನಗರ ವ್ಯಾಪ್ತಿಯ ಮಲ್ಲಿಕಾರ್ಜುನ ಬಡಾವಣೆಯ ವಾಸಿ, ಸೈಯದ್ ಫರ್ವೀಜ್ ಈತನು ಫಾತಿಮಾ ಖಾನ್ ರನ್ನ ವಿವಾಹವಾಗಿ ಮೂವರು ಮಕ್ಕಳಿದ್ದರು, ಪತ್ನಿಯ ಮೇಲೆ ಸಂಶಯವನ್ನು ಪಟ್ಟು, ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ನೀಡಿದ ಫರ್ವೀಜ್, ದಿನಾಂಕ 01-11-2020 ರಂದು ಸಂಜೆ 06ರ ಸಮಯದಲ್ಲಿ ಪತ್ನಿ ಫಾತಿಮಾ ಖಾನಂಳ ತಂದೆ-ತಾಯಿಯವರ ಸಮ್ಮುಖದಲ್ಲಿಯೇ ಸ್ಕ್ರೂ ಡ್ರೈವರ್ ಮತ್ತು ಚಾಕುನಿಂದ ಹಲ್ಲೆ ನಡೆಸಿ ಕೊಕೆ ಮಾಡಿದ್ದನು.  

ತುಂಗ ನಗರ ಪೊಲೀಸರು ತನಿಖೆ ನಡೆಸಿ  ಸ್ಪಷ್ಟವಾದ ಮೇರೆಗೆ ದೋಷಾರೋಪಣಾ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ  ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಮರುಳಸಿದ್ದ ಆರಾಧ್ಯ ರವರು ಆರೋಪಿ ಸೈಯ್ಯದ್ ಫರ್ವೇಜ್ ಗೆ‌ ಜೀವಾವಧಿ ಶಿಕ್ಷೆ ಮತ್ತು 30 ಸಾವಿರ  ದಂಡ ವಿಧಿಸಿ ತೀರ್ಫು ನೀಡಿದ್ದಾರೆ.

ಒಂದು ವೇಳೆ ಆರೋಪಿ ಹಣ ಕಟ್ಟಲು ವಿಫಲನಾದರೆ 6 ತಿಂಗಳು ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ. ಅಭಿಯೋಜನೆಯ ಪರವಾಗಿ ಶ್ರೀಮತಿ ಮಮತಾ ಬಿ.ಎಸ್. ರವರು, ಸರ್ಕಾರಿ ಅಭಿಯೋಜಕರು, ಸಾಕ್ಷಿದಾರರ ವಿಚಾರಣೆಯನ್ನು ಮಾಡಿ, ಸಾಕ್ಷಾಧಾರಗಳನ್ನು ಗುರುತಿಸಿ, ವಾದವನ್ನು ಮಂಡಿಸಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close