ಇರುಮುಡಿ ಕಟ್ಟಿ, ಶಬರಿಮಲೆಗೆ ಹೊರಟ ಅಯ್ಯಪ್ಪ ಮಾಲಾಧಾರಿಗಳು


Every year when the season of transition comes, the Saku Sadagara celebrate at home. During the transitional period, many religious programs and rituals continue to take place. In times of transition, it is a slogan, a name-calling that is usually heard wherever one goes. That is Swamiye Sharanam Ayyappa.


ಸುದ್ದಿಲೈವ್/ಶಿವಮೊಗ್ಗ 

ಪ್ರತಿ ವರ್ಷ ಸಂಕ್ರಮಣ ಕಾಲ ಬಂತೆಂದರೆ ಸಾಕು ಸಡಗರ ಸಂಭ್ರಮ ಮನೆ  ಮಾಡುತ್ತದೆ. ಸಂಕ್ರಮಣ ಕಾಲದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು, ಪೂಜಾ ವಿಧಿ ವಿಧಾನಗಳು ನಡೆಯುತ್ತಲೇ ಇರುತ್ತವೆ. ಇನ್ನು ಸಂಕ್ರಮಣದ ಕಾಲದಲ್ಲಿ ಅದೊಂದು ಘೋಷಣೆ, ಅದೊಂದು ನಾಮಸ್ಮರಣೆ ಎಲ್ಲಿ ಹೋದರೂ ಸಾಮಾನ್ಯವಾಗಿ ಕೇಳಿ ಬರುತ್ತದೆ. ಅದುವೇ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ನಾಮಸ್ಮರಣೆ.

ಹಾಗೆಯೇ ನಗರದ ಗಾಡಿಕೊಪ್ಪ ತಾಂಡದಲ್ಲಿ ಸೇವಾಲಾಲ್ ದೇವಸ್ಥಾನದ ಬಳಿ ಅಯ್ಯಪ್ಪ ಮಾಲಾಧಾರಿಗಳು ಮಹಾಪೂಜೆಯನ್ನು ನಡೆಸಿ ಇರುಮುಡಿ,ಮಹಾಪಡಿ ಪೂಜೆ  ಮಹಾಪ್ರಸಾದ ಕಾರ್ಯಕ್ರಮ ಭಕ್ತಿ ಭಾವದಿಂದ ನಡೆಸಿದರು.

85 ಅಯ್ಯಪ್ಪ ಮಾಲಾಧಾರಿಗಳು ಕಠಿಣ ವ್ರತ ಆಚರಿಸಿ ಬುಧವಾರ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಶಬರಿಮಲೆಗೆ ತೆರಳಿದರು. ಊರಿನ ಗ್ರಾಮಸ್ತರೆಲ್ಲರೂ ಸೇರಿ ದೇವಸ್ಥಾನದಿಂದ ಅಯ್ಯಪ್ಪ ಮಾಲಾಧಾರಿಗಳಿಗೆ ಬೀಳ್ಕೊಟ್ಟರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close