ಲೂದಿಯಾನದಿಂದ ಶಿವಮೊಗ್ಗಕ್ಕೆ ಪ್ರಾದೇಶಿಕ ಮೆಕ್ಕೆಜೋಳ ಸಂಶೋಧನಾ ಕೇಂದ್ರ ಸ್ಥಳಾಂತರ

MP Raghavendra has announced that the central government has announced to start the Shimoga Regional Maize Research Centre.


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಪ್ರಾದೇಶಿಕ ಮೆಕ್ಕೇಜೋಳ ಸಂಶೋಧನಾ ಕೇಂದ್ರವನ್ನ ಆರಂಭಿಸಲು ಕೇಂದ್ರ ಸರ್ಕಾರ ಘೋಷಿಸಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸವಳಂಗ ರಸ್ತೆಯಲ್ಲಿರುವ  , ಕೃಷಿ ವಿಶ್ವ ವಿದ್ಯಾಲಯದಲ್ಲಿ 45 ಎಕರೆ ಜಾಗವನ್ನ ಈಸಂಶೋಧನ ಕೇಂದ್ರಕ್ಕೆ ತೋರಿಸಲಾಗಿದೆ. ಈ ಕುರಿತು ಕೃಷಿ ಸಚಿವರು ಪತ್ರವನ್ನ ಬರೆದಿದ್ದು, ಪಂಜಾಬ್ ನ ಲೂದಿಯಾನದಿಂದ ಮೆಕ್ಕೆಜೋಳ ಪ್ರಾದೇಶಿಕ ಸಂಶೋಧನ ಕೇಂದ್ರವನ್ನ ಶಿವಮೊಗ್ಗಕ್ಕೆ ಸ್ಥಳಾಂತರಿಸುತ್ತಿರುವುದಾಗಿ ತಿಳಿಸಿದ್ದಾರೆ  ಎಂದರು.

ಪ್ರಪಂಚದಲ್ಲಿ ಮೆಕ್ಕೆಜೋಳ ಬೆಳೆಯುವ ರಾಷ್ಡ್ರದಲ್ಲಿ‌ಭಾರತ 4 ನೇ ರಾಷ್ಟ್ರವಾಗಿ ಬೆಳೆದರೆ ಕರ್ನಾಟಕ ಶೇ.15 ರಷ್ಟು ಮೆಕ್ಕೆಜೋಳ ಬೆಳೆಯುವ ರಾಜ್ಯವಾಗಿ ಹೊರಹೊಮ್ಮಿದೆ. ಮದ್ಯಪ್ರದೇಶವೂ ಸಹ ಮೆಕ್ಕೆ ಜೋಳ ಬೆಳೆಯುವ ಅತಿ ದೊಡ್ಡ ರಾಜ್ಯವಾಗಿದೆ. ಇದು 15 ನೇ ಹಣಕಾಸಿನ ಯೋಜನೆಯಲ್ಲಿ 2024-25 ನೇ ಸಾಲಿನಲ್ಲಿ ನಿಯೋಜಿಸಲಾಗಿದೆ ಎಂದರು. 

50,31,000 ಎಕರೆ ಜಮೀನಿನಲ್ಲಿ ರಾಜ್ಯದಲ್ಲಿ ಮೆಕ್ಕೆಜೋಳ ಬೆಳೆಯಲಾಗುವುದು. ಲೂದಿಯಾನದಿಂದ ಶಿವಮೊಗ್ಗಕ್ಕೆ ಸಂಶೋಧನಾಕೇಂದ್ರ ಸ್ಥಳಾಂತರಗೊಳ್ಳಲು ಮುಖ್ಯ ಕಾರಣ ಹವಮಾನ ಕಾರಣವಾಗಿದೆ. ತೋಮರ್ ಅವರು ಕೃಷಿ ಸಚಿವರಾಗಿದ್ದಾಗ ಸಂಶೋಧನಾ ಕೇಂದ್ರ ಆರಂಭಕ್ಕೆ ಮನವಿ ಮಾಡಿಕೊಡಲಾಗಿತ್ತು. ಈಗ ಶಿವರಾಜ್ ಸಿಂಗ್ ಚೌಹಾಣ್ ಅನುಮತಿ ನೀಡಿದ್ದಾರೆ.

ಜ.18 ಕ್ಕೆ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಶಿವಮೊಗ್ಗಕ್ಕೆ ಬರಲಿದ್ದಾರೆ. ಅವರ ಮೂಲಕವೇ ಸಂಶೋಧನಾ ಕೇಂದ್ರದ ಉದ್ಘಾಟನೆ ಆಗಲಿದೆ. ಈ ಸಂಶೋಧನಾಕೇಂದ್ರ ರೈತರಿಗೆ ಮೌಲ್ಯಮಾಪನ, ನಿರ್ವಾಹಣೆ, ಹೊಸ ತಳಿಯ ಆವಿಷ್ಕಾರ, ಬೀಜಗಳ ರೋಗ ಕಂಡು ಹಿಡಿಯಲು ಅನುಕೂಲವಾಗಲಿದೆ. ಇದು ಆದಾಯವನ್ನೂ ಹೆಚ್ಚಿಸಲಿದೆ. ರೈತನಲ್ಲಿ ಶಕ್ತಿ ತುಂಬಲಿದೆ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close