ಸುದ್ದಿಲೈವ್
ಶಿವಮೊಗ್ಗದಿಂದ ಪ್ರಯಾಗ್ ರಾಜ್ ಗೆ ಹೊರಟ ರೈಲು(Train) 6 ಗಂಟೆ ತಡವಾಗಿ(Late) ಸಂಚರಿಸುತ್ತಿದ್ದು(travelling) ಪರದಾಡುವಂತಾಗಿದೆ.
ಪ್ರಯಾಣ ಹೊರಟಾಗ ಸುಂದರವಾಗಿತ್ತು. ಆದರೆ ವ್ಯವಸ್ಥೆಯಲ್ಲಿ ತೊಂದರೆ ಆಗಿದೆ ಊಟ ಉಪಹಾರ ಸರಿಯಾದ ಸಮಯಕ್ಕೆ ದೊರಕಿಲ್ಲ ಎಂಬ ಮತ್ತೊಂದು ಸಮಸ್ಯೆಯನ್ನ ಪ್ರಯಾಣಿಕರು ಸುದ್ದಿಲೈವ್ ಗೆ ತಿಳಿಸಿದ್ದಾರೆ.
ಪ್ರಸ್ತುತ 4.30ಕ್ಕೇ ರೈಲು 5.50 ನಿಮಿಷ ತಡವಾಗಿ ಸಂಚರಿಸುತ್ತಿದೆ. ಪ್ರಯಗರಾಜ್ ತಲುಪಲು ಇನ್ನು 25 ಗಂಟೆ ಬೇಕು ಅಂದರೆ ನಾಳೆ ಬೆಳಿಗ್ಗೆ 11.15ಕೆ ತಲುಪಬೇಕಾದ ರೈಲು ನಾಳೆ ಸಂಜೆ 5 ಗಂಟೆಗೆ ತಲುಪುವ ಸಾಧ್ಯತೆಯಿದೆ.
ತಿರುಗಿ ಪ್ರಯಾಣಕ್ಕೆ ಕೇವಲ 12 ಗಂಟೆ ಸಮಯ ಇದ್ದು, ಮತ್ತೆ ಎಲ್ಲಾದರೂ ತಡವಾದರೆ ಇವರ ಪುಣ್ಯ ಸ್ನಾನವೇ ಅನುಮಾನವೆಂಬಂತಾಗಿದೆ. ಇದೇ ಸಮಯ ಒಂದು ನಿಯಂತ್ರಿಸಿಕೊಂಡು ಹೋದರೂ ವಾಪಾಸ್ ತಿರುಗಲು 12 ಗಂಟೆ ಉಳಿದುಕೊಳ್ಳಲಿದೆ. ಅಷ್ಟರೊಳಗೆ ಕುಂಭ ಮೇಳ ಸಂಗಮಕ್ಕೆ ಹೋಗಿ ಪುಣ್ಯ ಸ್ನಾನ ಮಾಡಿ ಬರುವುದು ತುಂಬಾ ಕಷ್ಟ ಸಾಧ್ಯ ಇದೆ ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ.
ಈ ವೇಳೆಯಲ್ಲೂ ಸಂಸದರು ಸಹಾಯಕ್ಕೆ ಬರುವಂತೆ ಕೋರಿದ್ದಾರೆ. ಸಂಸದರು ಗಮನಕ್ಕೆ ತಂದು ರೈಲನ್ನು ಬೆಳಿಗ್ಗೆ ಬಿಡುವ ಬದಲು ಸಂಜೆ 6 ಗಂಟೆಗೆ ಪ್ರಯಾಗ್ ರಾಜ್ ಬಿಡುವ ಹಾಗೆ ವ್ಯವಸ್ಥೆ ಮಾಡಿದರೆ ತುಂಬಾ ಅನುಕೂಲಕರ ಆಗುತ್ತದೆ ಎಂಬುದು ಪ್ರಯಾಣಿಕರ ಬೇಡಿಕೆಯಾಗಿದೆ. ಸಂಸದರು ಸಹಾಯಕ್ಕೆ ಬರುವರಾ?