Ayanur requested to slap the cheek and recover the money if paid || ಆಶ್ರಯ ಮನೆಪಡೆಯಲು 50 ಸಾವಿರ ರೂ ಹಣದ ಬೇಡಿಕೆ, ಹಣ ಕೊಟ್ಟರೆ ಕೆನ್ನೆಗೆ ಹೊಡೆದು ವಾಪಾಸ್ ಪಡೆಯಿರಿ-ಆಯನೂರು ಮಂಜುನಾಥ್

 Suddilive || Shivamogga

ಆಶ್ರಯ ಮನೆಗಳ ಹಂಚಿಕೆಗೆ 50 ಸಾವಿರ ಹಣ ಲಂಚದ ಬೇಡಿಕೆ, ಹಣಕೊಟ್ಟರೆ ಕೆನ್ನೆಗೆ ಹೊಡೆದು ವಸೂಲಿ ಮಾಡಲು ಆಯನೂರು ಮನವಿ, Ayanur Manjunath requested to slap the cheek and recover the money if paid.


Slap, if paid


ಕರ್ನಾಟಕ ರಾಷ್ಟ್ರೀಯ ಆರೋಗ್ಯ ಅಭಿಯಾನ ತನ್ನ ನೇರ ಗುತ್ತಿಗೆ ಉದ್ಯೋಗಿಗಳ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಕ್ಷೇಮಾಭಿವೃದ್ಧಿಯನ್ನ ಖಸಿತಪಡಿಸಿಕೊಳ್ಳುವ ಉದ್ದೇಶದಿಂದ ವ್ಯಾಪಕವಾದ ವೈಯುಕ್ತಿಕ ಅಪಘಾತ ವಿಮೆ ಮತ್ತು ಟರ್ಮ್ ಇನದಸೂರೆನ್ಸ್ ಸೇವೆಗಳನ್ನ ಪರಿಚಯಿಸುವ ಮೂಲಕ ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಪರಿಕಲ್ಪನೆ ಎನ್ ಹೆಚ್ ಎಂ ಮತ್ತು ಆಕ್ಸಿಸ್ ಬ್ಯಾಂಕ್ ನಡುವೆ ಕೈಗೊಳ್ಳಲಾದ ಒಡಂಬಡಿಕೆ ಪತ್ರದ ಮೂಲಕ ಸಾಧ್ಯವಾಗಿದೆ. ಶ್ರೀನಿವಾಸ್ ಆಚಾರ್ ಅವರ ವರದಿಯ ಫಲಶೃತಿ ಇದಾಗಿದೆ.  2005 ರಿಂದ ಜಾರಿಯಿರುವ ಎನ್ ಹೆಚ್ ಎಂ ಉದ್ಯೋಗಿಗಳಿಗೆ ಹೊರ ಗುತ್ತಿಗೆ ನೌಕರರಿಗೆ ಟರ್ಮ್ ಇನ್ಸುರೆನ್ಸ್ ಮತ್ತು ವೈಯುಕ್ತಿಕ ಅಪಘಾತ ವಿಮೆಯಂತಹ ಸಾಮಾಜಿಕ ಭದ್ರತಾ ಯೋಜನೆ ಜಾರಿಗೊಳಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಸಹಕರಿಸಿದ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು. 

ವೈಯುಕ್ತಿಕ ಅಪಘಾತ ವಿಮಾ ರಕ್ಷಣಾ ಮೊತ್ತ 60 ಲಕ್ಷ ರೂ ನೀಡಲಾಗುತ್ತದೆ. ಇದನ್ನ ಸರ್ಕಾರ ಅಥವಾ ನೌಕರರು ಯಾವುದೇ ಹಣ ನೀಡಲ್ಲ. ಬ್ಯಾಂಕ್ ಬೆಳವಣಿಗೆಯಿಂದ ವ್ಯವಹಾರ ಮಾಡಿದೆ. ಸಂಪೂರ್ಣ ಶಾಶ್ವತ ಅಂಗವೈಕಲ್ಯ ವಿಮಾ‌ಮೊತ್ತ 60 ಲಕ್ಷ ನೀಡಲಾಗಿದೆ. ಉದ್ಯೋಗಿ ಮಕ್ಕಳ ಶಿಕ್ಷಣ ಸೌಲಭ್ಯ ಸಹ ಸಿಗಲಿದೆ.

ಹಣಕೊಟ್ಟು ಆಶ್ರಯ ಮನೆಗೆ ಹೋಗಬೇಡಿ, ಕೆಪಾಲಕ್ಕೆ ಹೊಡೆದು ಹಣ ವಸೂಲಿ ಮಾಡಿ

ಆಶ್ರಯ ಮನೆಗಳನ್ನ ನಾಳೆ ಸಚಿವ ಜಮೀರ ನೇತೃತ್ವದಲ್ಲಿಮನೆ ಹಂಚಲಾಗುತ್ತಿದೆ. ಆಶ್ರಯ ಸಮಿತಿ ಅಧ್ಯಕ್ಷರಾಗಿ ಶಾಸಕರಿರುತ್ತಾರೆ. ಕೆಲ ಸಂಘರ್ಷ ಆಗಿತ್ತು. ಈಗ ತಿಳಿಯಾಗಿದೆ. ಕೆಲವರಿಗೆ ಮನೆ ಹಂಚಿಕೆ ಪಟ್ಟಿ ಸಿಕ್ಕಿದೆ. 650 ಜನರಲ್ಲಿ 500 ಜನರನ್ನ ಸಂಪರ್ಕಿಸಿ 2.5 ಕೋಟಿ ಹಣ ಎತ್ತುವ ಪ್ಲಾನ್ ಆಗಿದೆ. 

ನಿಗದಿತ ಮನೆ ಪಡೆಯಲು 50 ಸಾವಿರ ರೂ. ಹಣದ ಬೇಡಿಕೆಯಿಡಲಾಗಿದೆ. ಯಾರೂ ಹಣ ನೀಡಬಾರದು. ಸಂಬಂಧ ಪಟ್ಟ ಸಚಿವರಿಗೆ ಎಂಎಲ್ ಸಿಗೆ ದೂರು ನೀಡಲಾಗಿದೆ. 650 ಮನೆಗಳು ಬಹಿರಂಗ ಲಾಟರಿ ಮೂಲಕ ಹಂಚಬೇಕಿದೆ. ಯಾರೂ ಯಾರಿಗೂ ಹಣ ಕೊಡಬೇಡಿ. ಸಹಜವಾಗಿ ಮನೆ ಸಿಗಲಿದೆ. ಯಾರು ಹಣ ಕೊಟ್ಟಿದ್ದಾರೆ ಕೆನ್ನೆಗೆ ಹೊಡೆದು ವಸೂಲಿ ಮಾಡಿಕೊಳ್ಳಿ ಎಂದರು. 

ಭ್ರಷ್ಠಾಚಾರ ಆಗಬಾರದು. ಹಣ ಎತ್ತುವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ.‌ಎತ್ತುವಳಿ ನಾಯಕರ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದ ವಕ್ತಾರರು, ರಕ್ಷಣೆ ನಾನು ಬರುವೆ ಎಂದರು. ಒಪಿಎಸ್ ನ್ನ ಸರ್ಕಾರಿ ನೌಕರರಿಗೆ ಜಾರಿಯಾಗಬೇಕು. ಇದನ್ನ ಸರ್ಕಾರ ತರಲೇಬೇಕು ಎಂದರು.

ಈಶ್ವರಪ್ಪನವರ ಹೇಳಿಕೆಗೆ ಸ್ವಾಗತ

ಈಶ್ವರಪ್ಪ ರಾಷ್ಟ್ರಭಕ್ತರಾದ ಮೇಲೆ  ಅತಿಥಿ ಉಪನ್ಯಾಸಕರ ಬಗ್ಗೆ ಮಾತನಾಡಿದ್ದಾರೆ ಸ್ವಾಗತಿಸುವೆ.  ತಡವಾದರೂ ಅವರ ಗಮನಕ್ಕೆ ಬಂದಿದೆ. ಅವರು ಸಚಿವರಾಗಿದ್ದಾಗ ಈ ಕೆಲಸ ಮಾಡಬಹುದಿತ್ತು ಎಂದು ವ್ಯಂಗ್ಯವಾಡಿದರು.

ಮೂರು ನಾಲ್ಕು ತಿಂಗಳಿಂದ ಅತಿಥಿ ಉಪನ್ಯಾಸಕರು ನತ್ತು ಶಿಕ್ಷಕರಿಗೆ ಕೆಲವರಿಗೆ ಹಣ ಬಂದಿದೆ. ಇವರಿಗೆ ತಡೆಹಿಡಿದಿರುವರು ಮಾನವ ವಿರೋಧಿ ಎಂದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close