Murder at Holehonnuru-ಅಳಿಯನಿಂದಲೇ ನಡೆಯಿತೇ ಮಾವನ ಮರ್ಡರ್?

 Suddilive || Holehonnuru

one murdered case is reported in Holehonnuru. ಆರೋಪಿಯನ್ನ ಬಂಧಿಸಲಾಗಿದೆ.

Murder, Holehonnuru


ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮರ್ಡರ್ ನಡೆದಿದೆ.‌ ರಾಜಪ್ಪ ಎಂಬ 55 ವರ್ಷದ ವ್ಯಕ್ತಿ ಕೊಲೆ ನಡೆದಿದೆ. ಮೃತನ ಮನೆಯ ಒಳಗಡೆ ಆತನ ಶವ ಪತ್ತೆಯಾಗಿದೆ. ರಾಜಪ್ಪನ ತಲೆಗೆ ಒಡೆದು ಹತ್ಯೆ ಮಾಡಲಾಗಿದೆ. ವೈಯುಕ್ತಿಕ ಕಾರಣಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ. 

ಹನುಮಂತಾಪುರ ಗ್ರಾಮದಲ್ಲಿ ಬುಧವಾರ ರಾತ್ರಿ ಈಘಟನೆ ನಡೆದಿದೆ. ಅರೋಪಿ ಮಂಜುನಾಥ (45) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಂಜುನಾಥ್, ರಾಚಪ್ಪನ ಅಳಿಯ ಆಗಿದ್ದಾನೆ ಎಂದು ಹೇಳಲಾಗುತ್ತಿದೆ. 

ಮೃತ ರಾಜಪ್ಪನ ಮಗಳು ಮನೆಗೆ ಹೋಗಿ ಬಾಗಿಲು ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ರಾಜಪ್ಪ ಅವರಿಗೆ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿರುವ ಶಂಕೆ ಇರುತ್ತದೆ. ಮಂಜುನಾಥನು ಮೃತ ರಾಜಪ್ಪ ಅವರ ಅಳಿಯ ಅಂದರೆ ಮಗಳ ಪತಿ ಆಗಿದ್ದಾನೆ. ಆರೋಪಿ ಮಂಜುನಾಥನು ಇತ್ತೀಚೆಗೆ ಅಪರಾಧ ಪ್ರಕರಣದಲ್ಲಿ ಜೈಲಿನಲ್ಲಿದ್ದು ಬಂದಿದ್ದು ಈತನ ವಿರುದ್ಧ ಇನ್ನು ಅನೇಕ ಕ್ರಿಮಿನಲ್ ಕೇಸುಗಳು ದಾಖಲಾಗಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close