Suddilive || Shivamogga
Under the Ganja case, Rowdysheeter arrest, ದೊಡ್ಡಪೇಟೆ ಪೊಲೀಸರ ಭರ್ಜರಿ ಕಾರ್ಯಚರಣೆ.
![]() |
File photo |
ಶರಾವತಿ ಚಾನೆಲ್ ಏರಿಯಾದಲ್ಲಿ ವ್ಯಕ್ತಿಯೋರ್ವ ಅನುಮಾನಸ್ಪದವಾಗಿ ವರ್ತಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಮಾಹಿತಿ ಆಧಾರದ ಮೇರೆಗೆ ಪೊಲೀಸರ ಭರ್ಜರಿ ದಾಳಿ ನಡೆಸಿ ರೌಡಿಶೀಟರ್ ಕಾರ್ತಿಜ್ ಯಾನೆ ಕತ್ತೆಕಾರ್ತಿಕನನ್ನ ಬಂಧಿಸಿದ್ದಾರೆ.
ಚಾನೆಲ್ ಏರಿಯಾದಲ್ಲಿ ಮಾದಕ ದ್ರವ್ಯ ಸೇವಿಸಿ ಕುಳಿತ್ತಿದ್ದ ರೌಡಿಶೀಟರ್ ನನ್ನ ವಿಚಾರಿಸಿದ ವೇಳೆ ಗಾಂಜಾ ಸೇವಿಸಿದ್ದನ್ನ ದೃಢಪಡಿಸಿದ್ದಾನೆ. ಈತನನ್ನ ಮೆಗ್ಗಾನ್ ಗೆ ಕರೆದೊಯ್ದು ತಪಾಸಣೆ ನಡೆಸಿದಾಗ್ಯೂ ಕಾರ್ತಿಕ್ ಗಾಂಜಾ ಸೇವನೆ ಪಾಸಿಟಿವ್ ಬಂದಿದೆ.
ಸಾರ್ವಜನಿಕರಿಗೆ ಉಪಟಳ ನೀಡುವ ಸಾಧ್ಯತೆಯ ಹಿನ್ನಲೆಯಲ್ಲಿ ಪೊಲೀಸರು ಆತನನ್ನ ವಶಕ್ಕೆ ಪಡೆದಿದ್ದಾರೆ.
2024 ರಲ್ಲಿ ಕಾರ್ತಿಕ್ ನನ್ನ ಹರೋಗರ ಜಾತ್ರೆಯಿಂದ ಕರೆಯಿಸಿಕೊಂಡು ಎಂಎಆರ್ ಎಸ್ ಬಳಿ ಹಲ್ಲೆ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಐವರ ವಿರುದ್ಧ ದೂರು ದಾಖಲಾಗಿತ್ತು. ಈಗ ಆತನ ಮೇಲೆ ಗಾಂಜಾ ಪ್ರಕರಣ ದಾಖಲಾಗಿದೆ.
Conclusion-Ganja, rowdysheeter