![]() |
A prominent bar cashier of Theerthahalli was killed in a road accident. Sumanth, cashier of Tirthahalli Mood Bar, died in a bike accident. |
ಸುದ್ದಿಲೈವ್/ತೀರ್ಥಹಳ್ಳಿ
ರಸ್ತೆ ಅಪಘಾತದಲ್ಲಿ ತೀರ್ಥಹಳ್ಳಿಯ ಪ್ರತಿಷ್ಠಿತ ಬಾರ್ ಕ್ಯಾಶಿಯರ್ ಓರ್ವ ಅಸುನೀಗಿದ್ದಾನೆ. ತೀರ್ಥಹಳ್ಳಿ ಮೂಡ್ ಬಾರ್ ಕ್ಯಾಶಿಯರ್ ಸುಮಂತ್ ಬೈಕ್ ಅಪಘಾತದಲ್ಲಿ ನಿಧನರಾಗಿದ್ದಾರೆ.
ತೀರ್ಥಹಳ್ಳಿ ಕಳೆದ ರಾತ್ರಿ ಸುಮಾರು 2 ಗಂಟೆಗೆ ಯಡೇಹಳ್ಳಿ ಕೆರೆ ನಿವಾಸಿ ತೀರ್ಥಹಳ್ಳಿ ಪಟ್ಟಣದ ಮೂಡ್ ಬಾರ್ ನಲ್ಲಿ ಕ್ಯಾಶ್ ರ್ ಆಗಿ ಕೆಲಸ ಮಾಡುತ್ತಿದ್ದ ಸುಮಂತ್ ಯಡೇಹಳ್ಳಿ ಕೆರೆ ಹತ್ತಿರ ಬೈಕ್ ಅಪಘಾತದಲ್ಲಿ ನಿಧನರಾಗಿದ್ದಾರೆ.
ಮೃತರ ತಂದೆ ಜಯರಾಮರವರು ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೃತ ದೇಹವನ್ನು ತೀರ್ಥಹಳ್ಳಿ ಜೇಸಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಪೊಲೀಸ್ ಮಹಾಜರ್ ನಂತರ ಅಂತಿಮ ಕ್ರಿಯೆ ನಡೆಯಲಿದೆ