ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಇದೆ ಎಂದು ಅಫಿಡವೇಟ್ ಹಾಕಿದವರು ಯಾರು? ಎಂಬುದನ್ನ ಸಚಿವ ಮಧು ಬಂಗಾರಪ್ಪ ಸಾಬೀತು ಪಡಿಸಲಿ-ಆರಗ

Arecanut is a commercial crop. It is a heritage crop in the highlands. Mom Cos has gained the trust of farmers and farmers are working as if this is my organization. Former Home Minister Araga Gyanendra said that the election is being held on February 4.


ಸುದ್ದಿಲೈವ್/ಶಿವಮೊಗ್ಗ

ಅಡಿಕೆ ವಾಣಿಜ್ಯ ಬೆಳೆಯಾಗಿದೆ. ಮಲೆನಾಡು ಭಾಗದಲ್ಲಿ ಪರಂಪರಾಗತ ಬೆಳೆಯಾಗಿದೆ‌.  ಮ್ಯಾಮ್ ಕೋಸ್  ರೈತರ ನಂಬಿಕೆ ಗಳಿಸಿ ಇದು ನನ್ನ ಸಂಸ್ಥೆಯೆಂದು ರೈತರು ಕೆಲಸ ಮಾಡುತ್ತಿದ್ದಾರೆ. ಇದರ ಚುನಾವಣೆ ಫೆ.4 ರಂದು ನಡೆಯುತ್ತಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2005-06 ರಲ್ಲಿ ಸಹಕಾರ ಭಾರತಿಯು ಮ್ಯಾಮ್ ಕೋಸ್ ನ ಅಧಿಕಾರ ಹಿಡಿದು ಬದಲಾವಣೆ ಮಾಡಿತು. ರೈತರ ಹಿತ ಕಾಪಾಡಲಾಗಿದೆ.‌ ಬಿಲ್ಡಿಂಗ್ ಕಟ್ಡಲಾಗಿದೆ. ಕಾಂಗ್ರೆಸ್ ಆಡಳಿತ ಇದ್ದಾಗ ಅಡಿಕೆಗೆ ಆಘಾತವಾಗಿದೆ ಕ್ಯಾನ್ಸರ್ ಕಾರಕ ಅಂಶ ಇದೆ ಎಂದು who ವರದಿ ಪ್ರಕಾರ ಸುಪ್ತೀಂಕೋಟ್೯ಗೆ ಅರ್ಜಿ ಸಲ್ಲಿಸಿದೆ. ಅಡಿಕೆ‌‌ ಟಾಸ್ಕ್ ಪೋಸ್೯ ನ್ನ ಯಡಿಯೂರಪ್ಪ ಸಿಎಂ ಇದ್ದಾಗ ಮಾಡಿದಾಗ ಅಡಿಕೆ ಸಂಶೋಧನೆ ಮಾಡಲಾಗಿದೆ. 

ಅಡಿಕೆ ಗುಣಮಟ್ಟ ನಿರ್ಧಾರ ಮಡಲಾಗಿದೆ. ಆಮದು ಆಗುವ ಅಡಿಕೆಗೆ ದರ ನಿಗದಿ ಮಾಡಲಾಗಿದೆ. ಅಡಿಕೆ ಆಮುದು ದರ 351 ರೂ. ನಿಗದಿ ಮಾಡಲಾಗಿದೆ. ಅಡಿಕೆ‌ ಲಾಬಿ ಇದೆ. ಇದಕ್ಕೆ ಹಲವು ಕಾರಣಗಳು ಇವೆ.  ಸಹಕಾರ ಸಂಘಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕು. ಕೆಲವರು ಶಿಥೀಲಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ರಾಜ್ಯದ 18 ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗಿದೆ.‌ ಬೆಲೆಯೇ ಇದಕ್ಕೆ ಶಾಪವಾಗಿದೆ ಎಂದು ತಿಳಿಸಿದರು. 

ಅಡಿಕೆ ಮಹಾಮಂಡಳ ಕೂಡ ಸ್ಥಾಪಿಸಲಾಗಿದೆ. ಸಹಕಾರ‌ಭಾರತಿ ತಂಡ ಅಡಿಕೆ ಬೆಳೆಗಾರರಿಗೆ ಶಕ್ತಿ ಕೊಡುವ ಕೆಲಸ ಮಾಡಿದೆ. ಬೆಳೆಯು ಸ್ಥಿರವಾಗಿದೆ.  ನೇರವಾಗಿ ಅಡಿಕೆ ಖರೀಧಿ ಮ್ಯಾಮ್ ಕೋಸ್ ಮಾಡುತ್ತಿದೆ. ಅಡಿಕೆ ಬೆಳೆಗಾರರ ಹಿತ ಕಾಪಾಡುವ ತಂಡ ಅಗತ್ಯವಿದೆ. ಈ ಕೆಲಸ ಮ್ಯಾಮ್ ಕೋಸ್ ಆಡಳಿತ ಹಿಡಿದಿರುವ ಸಹಕಾರ ಭಾರತಿ ಮಾಡುತ್ತಿದೆ ಎಂದು ತಿಳಿಸಿದರು.

ಫೆ 4ರಂದು ನಡೆಯುವ ಚುನಾವಣೆಯಲ್ಲಿ ಮತ್ತೆ ಅವಕಾಶ ನೀಡುವಂತೆ ಮನವಿ ಮಾಡಿದ ಮಾಜಿ ಗೃಹಸಚವರು, ಕಳೆದ ಅವಧಿಯಲ್ಲಿ ಸ್ವೀಪ್ ಮಾಡಲಾಗಿತ್ತು. ಸಹಕಾರ ಭಾರತಿ ತಂಡವನ್ನು ಸಂಪೂರ್ಣವಾಗಿ ಬೆಂಬಲಿಸಬೇಕು. ಮ್ಯಾಮ್ ಕೋಸ್ ಸದಸ್ಯರು ಅವಕಾಶ ನೀಡಬೇಕು. ಎಲ್ಲ ಅಡಿಕೆ ಬೆಳೆಗಾರರು ಸಹಕಾರ ಭಾರತಿ ಅವಕಾಶ ನೀಡಿ. 19 ಸೀಟು ಗೆಲ್ಲಿಸುವಂತೆ ಮನವಿ ಮಾಡಿದರು.

ಅಡಿಕೆ ನೇರ ಖರೀದಿಯಿಂದ ಮ್ಯಾಮ್ ಕೋಸ್ ಗೆ ನಷ್ಟವಾಗಿಲ್ಲ. ಚರ್ಚೆ ಮಾಡಿ ನಿರ್ಣಯ ಕ್ಕೆ ಬರಲಿ. ಕಾಫಿ ಬೋಡ್೯, ಸಾಂಬಾರು ಮಂಡಳಿ ಏನು ಮಾಡುತ್ತಿಲ್ಲ. ರಬ್ಬರ್ ಮಂಡಳಿ ನಿಷ್ಕ್ರಿಯ ವಾಗಿದೆ. ಹಾಗಾಗಿ ಅಡಿಕೆ ಮಂಡಳಿ ರಚನೆಯೂ ಅಗತ್ಯ ವಿಲ್ಲ ಎಂದು ವಿವರಿಸಿದರು.

ಕ್ಯಾನ್ಸರ್ ಅಲ್ಲ ಎಂದು ಸಂಶೋಧನಾ ವರದಿ ಬರಬೇಕು. 17 ಸಂಸ್ಥೆಗಳಿಗೆ ಸಂಶೋಧನೆಗೆ ನೀಡಲಾಗಿದೆ. ಕೃಷಿ ವಿವಿಯಲ್ಲಿ ‌ಸಂಶೋಧನೆ‌ ನಡೆಸಲು ಮ್ಯಾಮ್‌ಕೋಸ್ ಗೆ 40 ಲಕ್ಷ ಹಣ ನೀಡಲಾಗಿದೆ. ಬೇರೆ ಬೇರೆ ಲಾಬಿಗಳು ಅಡಿಕೆಯನ್ನು ಮುಳುಗಿಸಲು ಲಾಬಿ ಮಾಡಲಾಗುತ್ತಿದೆ. ರಾಸಾಯನಿಕ ಬಣ್ಣ ಹಾಕುವರ ಮೇಲೆ ಸರಕಾರ ಕ್ರಮ ತೆಗೆದುಕೊಳ್ಳಲಿ. ತೆರಿಗೆ ವಂಚನೆ ಮೇಲೆ ಕ್ರಮವಾಗಬೇಕು. ಸಹಕಾರ ಸಂಸ್ಥೆಗಳಿಗೆ ಹೊಡೆತ ಬೀಳಿದೆ. ಸರಕಾರಕ್ಕೆ ತೆರಿಗೆ ವಂಚನೆಯಾದರೆ ಸರಕಾರ ಇದನ್ನ ಕ್ರಮ ತೆಗೆದುಕೊಳ್ಳಲಿ ಎಂದರು. 

ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಇದೆ ಎಂದು ಅಫಿಡವೇಟ್ ಹಾಕಿದವರು ಯಾರು? ಎಂಬುದನ್ನ ಸಚಿವ ಮಧು ಬಂಗಾರಪ್ಪ ಸಾಬೀತು ಪಡಿಸಲಿ.  ಅವರು ಅಡಿಕೆ ಬೆಳೆಗಾರರಲ್ಲಿ ಕಾಂಗ್ರೆಸ್ ಕ್ಷಮೆಯಾಚಿಸಬೇಕು. ಗುಣಮಟ್ಟದ ಅಡಿಕೆ ಅಗತ್ಯವಿದೆ. ಗುಣಮಟ್ಟಕ್ಕೆ ಬೆಲೆಯಿದೆ ಎಂದು ಆರಗ ತಿಳಿಸಿದರು. 

ಮ್ಯಾಮ್ ಕೋಸ್ ಎಲ್ಲ‌ ಕಡೆ ಗೋದಾಮು ತೆರೆದಿದೆ. ಅಗತ್ಯವಿರುವ ಕಡೆ ಮತ್ತೆ‌ ಗೋದಮು ಮಾಡಲಾಗುವುದು. 8 ಗೋದಾಮು ಬಾಡಿಗೆ ಇವೆ ಎಂದರು. 

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಚೆನ್ನಬಸಪ್ಪ, ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ್, ಮಾಜಿ ಶಾಸಕ ಕೆಜಿ ಕುಮಾರ ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಕೆ.ವಿ.ಅಣ್ಣಪ್ಪ, ಪಾಲಿಜೆ ಮಾಜಿ ಸದಸ್ಯ ಪ್ರಭು ಮೊದಲಾದವರು ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close