![]() |
An incident has taken place where a college student died after falling from a private city transport bus coming on the road opposite Mylareshwara temple in Shimoga. |
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಬರುತ್ತಿದ್ದ ಖಾಸಗಿ ನಗರ ಸಾರಿಗೆ ಬಸ್ ನಿಂದ ಬಿದ್ದು ಕಾಲೇಜಿನ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಗುರುಪುರದಿಂದ ಎಟಿಎನ್ ಸಿಸಿ ಕಾಲೇಜಿಗೆ ನಗರದ ಖಾಸಗಿ ಬಸ್ ನಲ್ಲಿ ಹೊರಟಿದ್ದ ವಿದ್ಯಾರ್ಥಿ ಯಶವಂತ್ ಶಿವಮೊಗ್ಗದ ಮೇಲಾರೇಶ್ವರ ದೇವಸ್ಥಾನದ ಬಳಿ ಸಡನ್ ಬ್ರೇಕ್ ನಿಂದ ಕೆಳಗೆ ಬಿದ್ದು ಸಾವಾಗಿದೆ ಎಂದು ಹೇಳಲಾಗುತ್ತಿದೆ.
ವಿದ್ಯಾರ್ಥಿ ಫುಟ್ ಬೋರ್ಡ್ ನ ಮೇಲೆ ನಿಂತಿದ್ದ 16 ವರ್ಷದ ವಿದ್ಯಾರ್ಥಿ ಕೆಳಗೆ ಬಿದ್ದು ಸಾವುಕಂಡಿದ್ದಾನೆ. ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಇಂದು ಬೆಳಿಗ್ಗೆ ಸಂಭವಿಸಿದೆ.