ಕಾನ್ವೆಂಟ್ ರಸ್ತೆಯಲ್ಲಿ ಅಪಘಾತ-ಯುವಕ ಸಾವು

An incident has taken place today at 1 o'clock in the morning when a bike rider who was traveling on Convent Road collided with a footpath barricade and a young man died.

ಸುದ್ದಿಲೈವ್/ಶಿವಮೊಗ್ಗ

ಇಂದು ಬೆಳಗ್ಗಿನ ಜಾವ 1 ಗಂಟೆಗೆ ಕಾನ್ವೆಂಟ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರ ಫುಟ್ ಪಾತ್ ಕಟ್ಟೆಗೆ ಡಿಕ್ಕಿ ಹೊಡೆದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ. 

ಕೋಟೆ ರಸ್ತೆಯಲ್ಲಿರುವ ಮನೆಗೆ ಸುಜೂಕಿ ಎಸ್ ಎಸ್ ಬೈಕ್ ನಲ್ಲಿ ಸಂಚರಿಸುವಾಗ ಈ ಘಟನೆ ನಡೆದಿದ್ದು ಸ್ಥಳೀಯರು ಲಾರಿಯೊಂದು ಹಿಟ್ ಅಂಡ್ ರನ್ ಆಗಿ ಬೈಕ್ ಸವಾರ ಸತ್ತಿರುವ ಸಂಶಯ ವ್ಯಕ್ತಪಡಿಸಿದ್ದು ಪೊಲೀಸರು ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. 

ಸಾವನ್ನಪ್ಪಿರುವ ಬೈಕ್ ಸವಾರನನ್ನ ಗೌತಮ್ (28) ಎಂದು ಗುರುತಿಸಲಾಗಿದ್ದು, ಈತ ನಾಗರೀಕ ಹಿತರಕ್ಷಣೆ ವೇದಿಕೆಯ ವಸಂತ್ ಕುಮಾರ್ ಅವರ ಬಳಿ ಕೆಲಸ ಮಾಡಿಕೊಂಡಿದ್ದನು. ಎರಡು ವರ್ಷಗಳ ಹಿಂದಷ್ಟೆ ತಂದೆಯನ್ನ ಕಳೆದುಕೊಂಡಿದ್ದ ಗೌತಮ್ ಕೋಟೆ ರಸ್ತೆಯಲ್ಲಿ ತಾಯಿಯೊಂದಿಗೆ ವಾಸವಾಗಿದ್ದನು. 

ನಿನ್ನೆ ಮಗ ತಡರಾತ್ರಿಯಾದರೂ ಬಂದಿಲ್ಲ ಎಂದು ಮಗನ ಮೊಬೈಲ್ ಗೆ ಕರೆ ಮಾಡಿದ್ದಾರೆ. ಆಗ ಪೊಲೀಸರೆ ಕರೆ ಸ್ವೀಕರಿಸಿ ನಿಮ್ಮ ಮಗನನ್ನ ಮೆಗ್ಗಾನ್ ಗೆ ದಾಖಲಿಸಿರುವುದಾಗಿ ತಿಳಿಸಿದ್ದಾರೆ. ಮಗನನ್ನ ಕಳೆದು ಕೊಂಡ ತಾಯಿ ಸಧ್ಯಕ್ಕೆ ಅನಾಥರಾಗಿದ್ದಾರೆ. ಪ್ರಕರಣ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ

ಬೈಪಾಸ್ ನಲ್ಲಿ ರಸ್ತೆ ಅಪಘಾತ, ವಾಹನ ಸವಾರ ಸಾವು 

ಮತ್ತೊಂದು ರಸ್ತೆ ಅಪಘಾತ ವಾದಿಉದಾ ಸೂಳೇಬೈಲಿನ ಬಳಿ ಬಸ್ ಹಾಗೂ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಉಂಟಾಗಿದೆ.  ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಸಾವು ಕಂಡಿದ್ದಾನೆ.  

ಮೃತನನ್ನ  ಶ್ರೀನಿವಾಸ್ ಎಂದು ಗುರುತಿಸಲಾಗಿದ್ದು,  ಈತ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದು ಬುದ್ಧ ನಗರ ನಿವಾಸಿಯಾಗಿದ್ದಾನೆ ಎಂದು ತಿಳಿದು ಬಂದಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close