ಬಸವೇಶ್ ಪೇಜ್ ನಲ್ಲಿ ಪೇಯ್ಡ್ ಮಾಧ್ಯಮ ಎಂದು ಟ್ಯಾಗ್

In the background of the allegations heard against Basavesh in the incident of insulting and threatening Basavesh Gani, the son of Bhadravati MLA Sangameshwar and a female officer of the Earth Science Department, Shimoga media made news by standing behind the officials.


ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿ ಶಾಸಕ ಸಂಗಮೇಶ್ವರ ಅವರ ಪುತ್ರ ಬಸವೇಶ್ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯ ವಿರುದ್ಧ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವ ಘಟನೆಯಲ್ಲಿ ಬಸವೇಶ್ ವಿರುದ್ಧ ಕೇಳಿ ಬಂದ ಆರೋಪದ ಹಿನ್ನಲೆಯಲ್ಲಿ ಅಧಿಕಾರಿಗಳ ಬೆನ್ನಿಗೆ ನಿಂತು ಶಿವಮೊಗ್ಗದ ಮಾಧ್ಯಮಗಳು ಸುದ್ದಿ ಮಾಡಿದ್ದವು. 

ಸಾಮಾಜಿಕ ಜಾಲತಾಣದಲ್ಲಿ ನೇರವಾಗಿ ಮಹಿಳಾ ಅಧಿಕಾರಿಗಳಿಗೆ ಫೊನ್ ತಂದುಕೊಟ್ಟ ವ್ಯಕ್ತಿ ಮೊಬೈಲ್ ನಲ್ಲೇ ಲೌಡ್ ಸ್ಪೀಕರ್ ನ್ನ ಆನ್ ಮಾಡಿ ಮಹಿಳಾ ಅಧಿಕಾರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಬೈದಿರುವುದು ಬಹಿರಂಗ ಗೊಂಡಿದೆ. ಮೊಬೈಲ್ ನಲ್ಲಿ ಬಸವೇಶ್ ಎಂಬುದು ಕಾಣಸಿಗುತ್ತದೆ. ಆದರೆ ಫೇಸ್ ಬುಕ್ ನಲ್ಲಿ ಶಾಸಕ ಸಂಗಮೇಶ್ವರ್ ಅವರ ಪುತ್ರ  ಬಸವೇಶ್ ಅವರಿಗೆ ಟ್ಯಾಗ್ ಮಾಡಿದ ಯೋಗೀಶ್ ಗೌಡ ಬಿಲ್ಲ ಎಂಬಾತ "ನಿನ್ನೆ ಮತ್ತು ಇಂದು ಬೆಳಿಗ್ಗೆ ತನಕ ವಿರೋಧಿ ಮತ್ತು ಪೇಯ್ಡ್ ಮಾಧ್ಯಮಗಳು ಎಂದು ನಗುವಿನ ಬೊಂಬೆ ಹಾಕಿದ್ದಾನೆ."

ಪೇಯ್ಡ್ ಮಾಧ್ಯಮಗಳು ಯಾವುವು ಎಂಬುದನ್ನ ಬಿಲ್ಲಾರವರು ಹೆಸರಿಸಬೇಕು.  ಕೇವಲ ಪ್ರಚಾರಕ್ಕಾಗಿ ಟ್ಯಾಗ್ ಮಾಡಿರಯವ ಹಾಗೆ ಕಾಣುತ್ತಿದೆ. ಇಲ್ಲವೆಂದರೆ ಪೇಯ್ಡ್ ಮಾಧ್ಯಮಗಳು ಯಾವುವು ಎಂಬುದನ್ನ ಬಹಿರಂಗ ಪಡಿಸಬೇಕು. ಇಲ್ಲ ಪೊಲೀಸರು ಆತನ ವಿರುದ್ಧ Suo Moto ಪ್ರಕರಣ ದಾಖಲಿಸಬೇಕು. 

ಮಾಧ್ಯಮಗಳು ಹಣಕ್ಕಾಗಿ ಕೆಲಸ ಮಾಡ್ತಾ ಇದಾವೆ ಎಂದು ಹೇಳಿ ಹಿಟ್ ಅಂಡ್ ರನ್ ಕೆಲಸ ಮಾಡುವುದನ್ನ ಬಿಟ್ಟು ತಮ್ಮ ನಾಯಕರಿಗೆ ಉತ್ತಮ‌ಕೆಲಸ ಮಾಡುವುದನ್ನ ಅವರ ಸುತ್ತಮುತ್ತಲಿನ ಜನ ಹೇಳಬೇಕು. ಜನ ನೆನೆಸುವ ಕೆಲಸ ಮಾಡಬೇಕು. ಎಲ್ಲರೂ ಸಾಚಾ ರಾಜಕಾರಣಿಗಳೆಂದು ಹೇಳಲ್ಲ. ಆದರೆ ತಾವು ಮಾಡುತ್ತಿರುವುದು ಸಾಚಾ,  ಉಳಿದವರು ಮಾಡುತ್ತಿರುವುದು ಪೇಯ್ಡ್ ಎಂದು ಆರೋಪಿಸದಂತೆ ಎಚ್ಚರ ವಹಿಸಬೇಕು. 

ಶಿವಮೊಗ್ಗದ ಮಾಧ್ಯಮಗಳು ಮಹಿಳಾ ಅಧಿಕಾರಿಯ ಮಾನಸಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡದೆ ಟೊಂಕಕಟ್ಟಿ ನಿಂತಿವೆ. ಅನ್ಯಾಯ ಕಂಡಾಗ ಅಧಿಕಾರಿಗಳ ವಿರುದ್ಧವೂ ಮಾಧ್ಯಮಗಳು ಸುದ್ದಿ ಮಾಡಿವೆ. ಕೆಲ ಸ್ಥಳೀಯ ಮೀಡಿಯಾಗಳು ಏನಾದರೂ ಈ ಘಟನೆಗಳ ಬಗ್ಗೆ ಸುದ್ದಿಮಾಡಿದ್ದು ನಮ್ಮ ಕಣ್ಣಿಗಂತೂ ಕಂಡು ಬಂದಿಲ್ಲ. ಹಾಗಂತ ಅವರು ಬಸವೇಶ್ ಅವರ ಪೇಯ್ಡ್ ಮೀಡಿಯಾ ಎಂದು ಕರೆದರೆ ಎಷ್ಟು ಸರಿ? 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close