ಭದ್ರಾವತಿ ಶಾಸಕರ ಕುಟುಂಬದವರ ವಿರುದ್ಧ ಅಪಪ್ರಚಾರ-ಬಿ.ಕೆಮೋಹನ್

There has been slander about the family. MLA Sangameshwar's brother BK Mohan said that we will hold a press conference in Shimoga along with the figures.


ಸುದ್ದಿಲೈವ್/ಭದ್ರಾವತಿ

ಕುಟುಂಬದ ಬಗ್ಗೆ ಅಪಪ್ರಚಾರ ನಡೆದಿದೆ. ಅಂಕಿ ಅಂಶದ ಜೊತೆ ಶಿವಮೊಗ್ಗದಲ್ಲಿ ನಾವೇ ಸುದ್ದಿಗೋಷ್ಠಿ ನಡೆಸಲಾಗುವುದು ಎಂದು ಶಾಸಕ ಸಂಗಮೇಶ್ವರ ಅವರ ಸಹೋದರ ಬಿಕೆ ಮೋಹನ್ ತಿಳಿಸಿದರು.

ಅಧ್ಯಕ್ಷರ ಆಯ್ಕೆ ಸಮಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಶಾಸಕ ಸಂಗಮೇಶ್ವರ ಅವರ ಕುಟುಂಬದ ಮೇಲೆ ಅಪಪ್ರಚಾರ ನಡೆದಿದೆ. ಆದರೆ ಭದ್ರಾವತಿಗೆ ಇನ್ನು ಮುಂದಿನ 6 ತಿಂಗಳಲ್ಲಿ ಅಭಿವೃದ್ಧಿ ನಡೆಯುತ್ತಿದೆ. 125 ಕೋಟಿ ಕಾಮಗಾರಿಗೆ ಚಾಲನೆ ನಡೆಯಲಿದೆ ಎಂದರು. 

ಭದ್ರಾ ನದಿಯಲ್ಲಿ ಸಂಗಮೇಶ್ವರ್ ದೇವಸ್ಥಾನ ನಡೆಯಲಿದೆ. ಕೆಆರ್ ಡಿಎಲ್ ಮತ್ತು ನಿರ್ಮಿತಿ ಕೇಂದ್ರದಿಂದ 120 ಕೋಟಿಯ ಅಭಿವೃದ್ಧಿ ನಡೆಯಲಿದೆ. ಅಧ್ಯಕ್ಷರ ಆಯ್ಕೆಗೆ ಶಾಸಕ ಸಂಗಮೇಶ್ವರ ಶ್ರಮ ಅಡಗಿದೆ ಎಂದರು. 

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಾಜ್ ಕುಮಾರ್ ಮಾತನಾಡಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಸಹಾಯದಿಂದ ಅವಿರೋಧ ಆಯ್ಕೆಯಾಗಿದ್ದೇನೆ. ಭದ್ರಾವತಿ ಅಭಿವೃದ್ಧಿಯ ಬಗ್ಗೆ ಶಾಸಕರ ಜೊತೆ ಮಾತನಾಡಿ ಮುಂದಿನ ಹೆಜ್ಜೆ ಇಡುವೆ ಎಂದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close