ಸಹಕಾರ ಭಾರತಿಯ ಕೈಯನ್ನ ಮತದಾರರು ಬಿಡಲಿಲ್ಲ-ಮಹೇಶ್ ಹುಲ್ಕುಳಿ

 

Sahakari Bharti team has won in cooperative system. Yesterday 19 members of Sahakar Bharati won. National Co-operative Foundation got 2993 votes out of a total of 7395 average votes.

ಸುದ್ದಿಲೈವ್/ಶಿವಮೊಗ್ಗ

ಸಹಕಾರಿ ವ್ಯವಸ್ಥೆಯಲ್ಲಿ ಸಹಕಾರಿ ಭಾರತಿ ತಂಡ ಗೆದ್ದು ಬೀಗಿದೆ.  ನಿನ್ನೆ 19 ಜನ ಸಹಕಾರ ಭಾರತಿಯ ಸದಸ್ಯರು ಗೆದ್ದಿದ್ದಾರೆ.  ಒಟ್ಟು 7395 ಸರಾರಸರಿ ಮತದಲ್ಲಿ ಪಡೆದರೆ 2993 ಮತಗಳನ್ನ ರಾಷ್ಟ್ರೀಯ ಸಹಕಾರ ಪ್ರತಿಷ್ಠಾನ ಪಡೆದಿದ್ದಾರೆ. 

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮಹೇಶ್ ಹುಲ್ಕುಳಿ ನಮ್ಮ ಸಾಧನೆ ಸಹಿಸದ ಪ್ರತಿಷ್ಠಾನ ಹಲವು ವಿಫಲಯತ್ನ ನಡೆಸಿದರೂ, ಷೇರುದಾರರು ಸಹಕಾರ ಭಾರತಿಯ ಕೈ ಹಿಡಿದಿದ್ದಾರೆ. ಮತದಾರರ ದಿಕ್ಕು ತಪ್ಪಿಸುವ ಕೆಲಸವೂ ನಿನ್ನೆ ಶಿವಮೊಗ್ಗದಲ್ಲಿ ನಡೆದ ಚುನಾವಣೆಯಲ್ಲಿ ನಡೆದಿದೆ ಎಂದರು. 

ನಿನ್ನೆಯ ಚುನಾವಣೆಯಲ್ಲಿ ಸಹಕಾರ ಭಾರತಿ ಕರಪತ್ರ ಹಂಚಿ ಮತಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆದಿದೆ. ಇದರ ವಿರುದ್ಧ ಪೊಲೀಸ್ ಇಲಾಖೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ವಿರೋಧಿ ಬಣಗಳು ಷೇರುದಾರರ ಸಭೆಯಲ್ಲಿ ಸಹಕಾರ ಭಾರತಿಯನ್ನ ಹೀಯಾಳಿಸುವ ಪ್ರಯತ್ನ ನಡೆಸಿವೆ. ಆದರೂ ಮತದಾರರು ನಮ್ಮ ಕೈ ಬಿಡಲಿಲ್ಲ ಎಂದರು. 

ಸಹಕಾರ ಭಾರತಿಯ ಹೆಸರಿನಲ್ಲಿ ರಾಷ್ಟ್ರೀಯ ಸಹಕಾರ ಪ್ರತಿಷ್ಠಾನ ಅಭ್ಯರ್ಥಿಗಳ ಹೆಸರನ್ನ ನಮೂದಿಸಿ ಅದರ ಮುಂದೆ ಅವರ ಚಿಹ್ನೆಯನ್ನ ಮುದ್ರಿಸಿ ಕರಪತ್ರ ಹಂಚಲಾಗಿತ್ತು. ಪ್ರತಿಷ್ಠಾನದ ಅಭ್ಯರ್ಥಿಗಳು ಸುದ್ದಿಗೋಷ್ಠಿ ನಡೆಸಿ ಮಾಮ್ ಕೋಸ್ ಸಂಸ್ಥೆಯನ್ನ ಅವಮಾನಿಸುವ ಪ್ರಯತ್ನವೂ ನಡೆದಿದೆ. ಆದರೆ ಮತದಾರರು ನಮ್ಮನ್ನ ಬೆಂಬಲಿಸಿದರು ಎಂದರು 

ಪ್ರತಿಷ್ಠಾನ ಜಾತಿ ರಾಜಕಾರಣ, ಹಣ ಹಂಚಿಕೆಯನ್ನ ಮಾಡಿ ಚುನಾವಣೆ ಗೆಲ್ಲುವ ಪ್ರಯತ್ನ ನಡೆದಿದೆ. ಹಿಂಭಾಗದ ಮೂಲಕ ಮಾಮ್ ಕೋಸ್ ನ ಆಡಳಿತದ ಚುಕ್ಕಾಣಿ ಹಿಡಿಯಲು ಯತ್ನಿಸಿದ್ದಾರೆ. ಸರ್ಕಾರ ನಮ್ಮದು ಎಂಬ ಭಾವನೆಯಲ್ಲಿ ಸಹಕಾರ ಭಾರತಿಯನ್ನ ಹಿಂದಿಕ್ಕುವ ಪ್ರಯತ್ನವು ನಡೆದಿದೆ. ಆದರೆ ಮತದಾರರು ನಮ್ಮ ಕೈಬಿಡಲಿಲ್ಲ ಎಂದು ತಿಳಿಸಿದರು.

ಫೆ.24 ರವರೆಗೆ ನಮ್ಮ ಹಳೆಯ ಆಡಳಿತ ಮಂಡಳಿಗೆ ಅಧಿಕಾರವಿದೆ. ನಂತರ ನಾವೇ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close