ಮುಂದುವರೆದ ರ್ಯಾಪಿಡ್ ಟ್ಯಾಕ್ಸಿ ವಿರುದ್ಧದ ಸಮರ


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ರ‌್ಯಾಪಿಡ್(Rapid) ಸಂಸ್ಥೆಯ ದ್ವಿಚಕ್ರ ಟ್ಯಾಕ್ಸಿ(taxi) ವಿರುದ್ಧದ ಸಮರ ಮುಂದುವರೆದಿದೆ. ಇಂದು ಸಹ ಮೂರು ವಾಹನವನ್ನ ಪತ್ತೆ ಹಚ್ಚಿರುವ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ಹಿತರಕ್ಷಣ ವೇದಿಕೆ ಕೋಟೆ ಠಾಣೆ ವ್ಯಾಪ್ತಿಯಲ್ಲಿ ಮೂರು ವಾಹನಗಳನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 

ಇದರ ಜೊತೆಗೆ ಎಸ್ಪಿಗೆ ಮನವಿ ಮಾಡಿರುವ ಸಂಘಟನೆ ವೈಟ್ ಬೋರ್ಡ್ ದ್ವಿಚಕ್ರ ವಾಹನದಲ್ಲಿ ಪ್ಯಾಸೆಂಜರ್ ಗಳನ್ನ ಡ್ರಾಪ್ ಅಂಡ್ ಪಿಕಪ್ ವ್ಯವಸ್ಥೆಗೆ ಬ್ರೇಕ್ ಹಾಕುವಂತೆ ಮನವಿ ಮಾಡಿದ್ದಾರೆ. ಇದರಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರ ಹೊಟ್ಟೆಯ ಮೇಲೆ ಹೊಡೆಯಲಾಗುತ್ತಿದೆ.‌ ಇದರ ವಿರುದ್ಧ ನ್ಯಾಯ ಕೊಡಿಸುವಂತೆ ಮನವಿ ಮಾಡಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close