ನಿಂತ ಖಾಸಗಿ ಬಸ್ ಗೆ ಕಾರು ಡಿಕ್ಕಿ ಶಾಹೀ ಗಾರ್ಮೆಂಟ್ಸ್ ನ ಸೀನಿಯರ್ ಕ್ವಾಲಿಟಿ ಮ್ಯಾನೇಜರ್ ಸಾವು


A senior quality manager of a prestigious garment company has died after being hit by a bus parked in front of Bhargavi petrol station on Sagar Road in the city.

ಸುದ್ದಿಲೈವ್/ಶಿವಮೊಗ್ಗ

ನಗರದ ಸಾಗರ ರಸ್ತೆಯ ಭಾರ್ಗವಿ ಪೆಟ್ರೋಲ್ ಬಂಕ್ ಎದುರು ನಿಂತಿದ್ದ ಬಸ್ ಗೆ ಡಿಕ್ಕಿ ಹೊಡೆದು ಪ್ರತಿಷ್ಠಿತ ಗಾರ್ಮೆಂಟ್ಸ್ ನ ಸೀನಿಯರ್ ಕ್ಯಾಲಿಟಿ ಮ್ಯಾನೇಜರ್ ಸಾವನ್ನಪ್ಪಿದ್ದಾರೆ. 

ಈ ಘಟನೆ ಇಂದು‌ ರಾತ್ರಿ 12-15 ಕ್ಕೆ ಸಂಭವಿಸಿದೆ. ಸತ್ತವರನ್ನ ವಿಜಯ ಕುರ್ಲಿ ಎಂದು ಗುರುತಿಸಲಾಗಿದೆ. ವಿನೋಬ ನಗರದಲ್ಲಿರುವ ಸ್ನೇಹಿತನನ್ನ ಮನೆಗೆ ಬಿಟ್ಟು ವಾಪಾಸ್ ಶಾಹೀ ಗಾರ್ಮೆಂಟ್ಸ್ ಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. 

ವಿಜಯ ಕುರ್ಲಿಯವರು ಶಾಹೀ ಗಾರ್ಮೆಂಟ್ಸ್ ನಲ್ಲಿ ಸೀನಿಯರ್ ಕ್ವಾಲಿಟಿ ಮ್ಯಾನೇಜರ್ ಆಗಿದ್ದರು.  48 ವರ್ಷದ ವಯಸ್ಸಿನವರಾಗಿರುವ ಇವರು ಸ್ಯಾಂಟ್ರೋ ಕಾರಿನಲ್ಲಿ ತೆರಳುವಾಗ ಬಾರ್ಗವಿ ಪೆಟ್ರೋಲ್ ಬಂಕ್  ಎದುರಿನ ರಸ್ತೆಯಲ್ಲಿ ನಿಲ್ಲಿಸಿದ್ದ ಬಸ್ ಗೆ ಡಿಕ್ಕಿ ಹೊಡೆದಿದ್ದಾರೆ. 

ಆಲ್ಕೊಳ ಸರ್ಕಲ್,  ಎಪಿಎಂಸಿ ರಸ್ತೆ,  ಬಸ್ ನಿಲ್ದಾಣದ ಮೂಲಕ ಮಲಗೊಪ್ಪದ ಶಾಹೀ ಗಾರ್ಮೆಂಟ್ಸ್ ಗೆ ವಿಜಯ ಕುರ್ಲಿ ತೆರಳಬೇಕಿತ್ತು. ಕಾರನ್ನ ಚಲಾಯಿಸುತ್ತಿದ್ದ ಚಾಲಕ ಕಾರನ್ನ ನಿಂತ ಬಸ್ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿದ್ದಾರೆ.  ಪರಿಣಾಮ ಕಾರಿನ ಮುಂಭಾಗ ನುಜ್ಜು ಗುಜ್ಜಾಗಿದೆ. 

ವಿಜಯ ಕುರ್ಲಿಯವರನ್ನ ತಕ್ಷಣ ಮೆಗ್ಗಾನ್ ಸಾಗಿಸಲಾದರೂ ಮಾರ್ಗಮಧ್ಯದಲ್ಲಿ  ಸಾವನ್ನಪ್ಪಿದ್ದಾರೆ. ಚಾಲಕ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾನೆ. ವಿಜಯ ಕುರ್ಲಿ ಮೂಲತ ಧಾರವಾಡ ಜಿಲ್ಲೆಯವರಾಗಿದ್ದರು. ಪ್ರಕರಣ ಪಶ್ಚಿಮ ಸಂಚಾರಿ ರಸ್ತೆಯಲ್ಲಿ ಸಂಭವಿಸಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close