![]() |
If the government does not respond to the problems of private bus owners and drivers, there is a strong possibility that the president will go on a protest demanding euthanasia. |
ಸುದ್ದಿಲೈವ್/ಶಿವಮೊಗ್ಗ
ಖಾಸಗಿ ಬಸ್ ಮಾಲೀಕರ, ಚಾಲಕರ ಸಮಸ್ಯೆಗೆ ಸರ್ಕಾರ ಸ್ಪಂಧಿಸದೆ ಹೋದರೆ ರಾಷ್ಡ್ರಪತಿಗಳಿಗೆ ದಯಾಮರಣ ಕೋರಿ ಪ್ರತಿಭಟನೆಗೆ ಇಳಿಯುವ ಸಾಧ್ಯತೆ ದಟ್ಟವಾಗಿದೆ.
ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಸಾಗರದ ಖಾಸಗಿ ಬಸ್ ಗಳ ಮಾಲೀಕರ ಸಂಘದ ಮನವಿಗೆ ಸ್ಪಂಧಿಸದ ಹಿನ್ನಲೆಯಲ್ಲಿ ಈ ಪ್ರತಿಭಟನೆಗೆ ಇಳಿಯುವುದಾಗಿ ತಿಳಿಸಿರುವ ಖಾಸಗಿ ಬಸ್ ಏಜೆಂಟರ ಸಂಘದ ನಾಗರಾಜ್ ಗುಡ್ಡೇಮನೆ ಪರ್ಮಿಟ್ ಇಲ್ಲದ ಕೆಎಸ್ ಆರ್‌ಟಿಸಿ ಬಸ್ ಗಳನ್ನ ತಡೆಯುವಂತೆ ಮನವಿ ಸಲ್ಲಿಸಿದ್ದರು.
ಈ ಮನವಿಗೆ ಅಧಿಕಾರಿಗಳು ಸ್ಪಂಧಿಸದ ಇರುವ ಹಿನ್ನಲೆಯಲ್ಲಿ ಈ ತಿಂಗಳ ಕೊನೆಯ ವಾರದಲ್ಲಿ ಸಾಗರದ ಎಸಿ ಕಚೇರಿಯ ಎದುರು ಬಸ್ ಗಳನ್ನ ನಿಲ್ಲಿಸಿ ಮಾಲೀಕರು, ಚಾಲಕರು ಮತ್ತು ನಿರ್ವಹಕರ ಕುಟುಂಬ ಪ್ರತಿಭಟಿಸಿ ಸ್ಥಳದಲ್ಲಿಯೇ ರಾಷ್ಟ್ರಪತಿಗಳಿಗೆ ದಯಾಮರಣದ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಈ ಕುರಿತು ನಾಳೆ ಮಾಲೀಕರ ಸಭೆ ನಡೆಯಲಿದ್ದು ಫೆ. 21 ಅಥವಾ 28 ರಂದು ಪ್ರತಿಭಟನೆ ನಡೆಸುವ ಬಗ್ಹೆ ನಿರ್ಧಾರ ಕೈಗೊಳ್ಳುವುದಾಗಿ ಅಷ್ಟರೊಳಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.