ಯುವ ಘಟಕದ ಚುನಾವಣೆಗೆ ಆಕ್ಷೇಪ-ಮ್ಯಾನುಪ್ಲೇಟೆಡ್ ಮ್ಯಾಜಿಕ್ ರಿಸಲ್ಟ್ ಎಂದ್ರು ಗಿರೀಶ್!

The victory of office bearers like Youth Congress President, General Secretary etc. is doubtful. Former Youth Congress President and current Vice President Girish said that the election should be held through the internal election ballot of the Congress Youth Unit.


ಸುದ್ದಿಲೈವ್/ಶಿವಮೊಗ್ಗ

ಯುವ ಕಾಂಗ್ರೆಸ್ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮೊದಲಾದ ಪದಾಧಿಕಾರಿಗಳ ಗೆಲುವು ಅನುಮಾನವಿದೆ. ಕಾಂಗ್ರೆಸ್ ನ ಯುವ ಘಟಕದ ಆಂತರಿಕ ಚುನಾವಣೆಯನ್ನ  ಬ್ಯಾಲೆಟ್ ಮೂಲಕ ಚುನಾವಣೆ ನಡೆಯಬೇಕಿದೆ ಎಂದು ಮಾಜಿ ಯುವ ಕಾಂಗ್ರೆಸ್ ನ ಅಧ್ಯಕ್ಷ ಮತ್ತು ಹಾಲಿ ಉಪಾಧ್ಯಕ್ಷ ಗಿರೀಶ್ ಆಗ್ರಹಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಆನ್ ಲೈನ್ ನಲ್ಲಿ ನಡೆದಿದ್ದು,   ಇದೊಂದು ಮ್ಯಾನುಪ್ಲೇಟೆಡ್ ಮ್ಯಾಜಿಕ್ ರಿಸಲ್ಟ್ ಆಗಿದೆ. ಅಭ್ಯರ್ಥಿಗಳ ಗೆಲವಿನ ಅಂತರ  ಅಜಗಜವಾಗಿದೆ. ಅಭ್ಯರ್ಥಿಗಳಿಗೆ ಮತ ಬಿದ್ದಿರುವ ಅಂಕಿ ಸಂಖ್ಯೆನೆ ಬೇರೆ, ಆನ್ ಲೈನ್ ನಲ್ಲಿ ತೋರುವ  ಅಂಕಿ ಸಂಖ್ಯೆಗಳ ಬೇರೆ ಆಗಿದ್ದು, ಈ ಓಲಿತಾಂಶ ಅನುಮಾನ ವ್ಯಕ್ತವಾಗಿದೆ ಎಂದರು. 

ಆಯ್ಕೆಯಲ್ಲಿ ಅಧ್ಯಕ್ಷ, ಬ್ಲಾಕ್ ಕಾರ್ಯದರ್ಶಿ, ಹೋರಾಟ ಮುಖ್ಯವಲ್ಲ. ಗೊಂದಲವಿಲ್ಲ. ಮುಂಬರುವ ಚುನಾವಣೆಗಳು ಗೆಲ್ಲಬೇಕಿದೆ. ಸೋಲು ಗೆಲವು ಮುಖ್ಯವಲ್ಲ. 

42 ಸಾವಿರ ಸದಸ್ಯತ್ವ ಮಾಡಿದ್ವಿ. ಅನುಮಾನವಿದೆ. ಆನ್ ಲೈನ್ ಸಿಸ್ಟಮ್ ತೆಗೆಯಬೇಕು. ಕಳೆದ ಬಾರಿ ಒಂದೇ ದಿನ ಚುನಾವಣೆ ನಡೆದಿತ್ತು. ಈ ಬಾರಿ ಒಂದು ತಿಂಗಳು ಕಾಲ ಚುನಾವಣೆ ನಡೆದಿದೆ. ಈ ಒಂದು ತಿಂಗಳಲ್ಲಿ ನಡೆದಿರುವ ಚುನಾವಣೆ ಅನುಮಾನವಿದೆ. 

ಪಕ್ಷದ ಪ್ರಭಾವಿ ಮಕ್ಕಳೇ ಯುವ ಕಾಂಗ್ರೆಸ್ ಗೆ ಆಯ್ಕೆಯಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ, ಕೇರಳ ಮತ್ತು ತೆಲಗಾಂಣದಲ್ಲಿ ಫಲಿತಾಂಶ ಹೆಲ್ಡ್ ಅಪ್ ಆಗಿದೆ. ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಆದರೆ ಈ ಚುನಾವಣೆಯಲ್ಲಿ ನಮ್ಮ ತಂಡ ಗೆದ್ದು ಬರಲ್ಲ. ಬಹಳ ಅಂತರದಲ್ಲಿ ಸೋಲುತ್ತೇವೆ ಎಂದರೆ ಹೇಗೆ ಎಂಬ ಸಂಶಯ ವ್ಯಕ್ತಪಡಿಸಿದರು. 

ಯುವಕಾಂಗ್ರೆಸ್ ಪದಾಧಿಕಾರಿಗಳ ಗೆಲವಿನ ಬಗ್ಗೆ ಅನುಮಾನವಿದೆ. ಇದನ್ನ ಕೈಬಿಟ್ಟು ಸಂಘಟನೆ ಬ್ಯಾಲೆಟ್ ಪೇಪರ್ ವ್ಯವಸ್ಥೆಯನ್ನ ಜಾರಿಗೊಳಿಸಬೇಕು. ಈ ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close