![]() |
In one year in 2023, 27 cases of jewelery theft took place at Shimoga KSRTC bus stand. This year looks to be repeating itself. |
ಸುದ್ದಿಲೈವ್/ಶಿವಮೊಗ್ಗ
2023 ರಲ್ಲಿ ಒಂದು ವರ್ಷದಲ್ಲಿ 27 ಚಿನ್ನಾಭರಣ ಕಳುವು ಪ್ರಕರಣಗಳು ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ನಡೆದಿತ್ತು. ಈ ವರ್ಷ ಅದು ಪುನರಾವರ್ತನೆಗೊಳ್ಳುವ ಎಲ್ಲಾ ಲಕ್ಷಣಗಳು ಕಾಣಸಿಗುತ್ತಿದೆ.
ಈಗಾಗಲೇ ಮೂರು ಪ್ರಕರಣಗಳು ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ನಡೆದಿದೆ ಎಂದು ದಾಖಲಾಗಿವೆ. ಈಗ ನಾಲ್ಕನೇ ಪ್ರಕರಣ ಒಂದ ಹಿಂದೆ ಒಂದು ದಾಖಲಾಗುತ್ತಿದೆ. ಶಿಕಾರಿಪುರದ ಮಾರಿ ಜಾತ್ರೆಗೆ ಅಕ್ಕನ ಮನೆಗೆ ಹೋಗಲು ಶಿವಮೊಗ್ಗದ ಮಹಿಳೆಯೊಬ್ಬರು ಮಗನೊಂದಿಗೆ ಹೊರಟಿದ್ದರು.
ಶಿಕಾರಿಪುರ ತಲುಪುವ ವೇಳೆಗೆ 2.60 ಸಾವಿರ ರೂ. ಮೌಲ್ಯದ ಚಿನ್ನದ ಆಭರಣ ಮತ್ತು ನಗದು ಕಳುವಾಗಿದೆ. ಜ.21 ರಂದು ಬೆಳಿಗ್ಗೆ 9-15 ಕ್ಕೆ ಶಿಕಾರಿಪುರಕ್ಕೆ ಹೊರಟಿದೆ ಮಹಿಳೆಯ ಎದುರಿನಲ್ಲಿ ಪರಿಚಯವಿರುವ ಮಹಿಳೆಯೊಬ್ಬರು ಕುಳಿತಿದ್ದು ಅವರ ಬ್ಯಾಗ್ ಮೇಲೆ ಶಿಕಾರಿಪುರದ ಮಹಿಳೆಯ ಬ್ಯಾಗ್ ಇದ್ದಿದ್ದು ಹಲವು ಅನುಮಾನಕ್ಕೆ ಕಾರಣವೆಂದು ಶಂಕಿಸಿ ಜಿತಾ ಎಂಬುವರು ದೂರು ದಾಖಲಿಸಿದ್ದಾರೆ.
ಮಾರಿಹಬ್ಬ ಮುಗಿಸಿಕೊಂಡು ಶಿವಮೊಗ್ಗಕ್ಕೆ ಬಂದು ಮನೆಯಲ್ಲೂ ಹುಡುಕಿ ನಂತರ ಎಲ್ಲೂ ಚಿನ್ನಾಭರಣಗಳು ಪತ್ತೆಯಾಗದಿದ್ದಾಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ರಂಜಿತಾ ಎಂಬುವರು ದೂರು ದಾಖಲಿಸಿದ್ದಾರೆ. ತರಲಘಟ್ಟದಿಂದ ಶಿಕಾರಿಪುರಕ್ಕೆ ತಲುಪುವಾಗ ಚಿನ್ನಾಭರಣ ಕಳುವಾಗಿದೆ ಎಂದು ದೂರು ದಾಖಲಾಗಿದೆ.