ನಕ್ಸಲ್ ರವೀಂದ್ರ ಶರಣಾಗತಿ

Today Naxal Rabindra has surrendered. Naxal Rabindra has surrendered before Chikmagalur district administration.


ಸುದ್ದಿಲೈವ್/ಚಿಕ್ಕಮಗಳೂರು

ಇಂದು ನಕ್ಸಲ್ ರವೀಂದ್ರ ಶರಣಾಗತಿ ಆಗಿದ್ದಾರೆ. ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ನಕ್ಸಲ್ ರವೀಂದ್ರ ಶರಣಾಗತಿಯಾಗಿದ್ದಾರೆ. 

ಕೋಟೆಹೊಂಡ ರವಿ ಅಲಿಯಾಸ್ ರವೀಂದ್ರ ನೆಮ್ಮಾರ್ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ ೪ ಕಿ.ಮೀ ದೂರದಲ್ಲಿನ ಅರಣ್ಯ ಇಲಾಖೆಯ ಐಬಿಯಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ನಕ್ಸಲೀಯರ ಯುಗ ಅಂತ್ಯವಾಗಿದೆ.

ಚಿಕ್ಕಮಗಳೂರು ‌ಎಸ್ಪಿ‌ ವಿಕ್ರಮ್ ಆಮ್ಟೆ, ಜಿಲ್ಲಾಧಿಕಾರಿ ಮೀನಾ ನಾಗರಾಜ್‌‌ ಎದರು ಶರಣಾಗತಿಯಾಗಿರುವ ನಕ್ಸಲ್ ರವೀಂದ್ರ ನಕ್ಸಲ್ ಶರಣಾಗತಿ ಕಮಿಟಿ ಯೊಂದಿಗಿದ್ದಾರೆ. ರಾಜ್ಯದಲ್ಲಿ ಉಳಿದಿದ್ದ ಏಕೈಕ ನಕ್ಸಲ್ ರವೀಂದ್ರ ವಿಕ್ರಮ್ ಗೌಡ ಎನ್ಕೌಂಟರ್ ಬಳಿಕ  ನಾಪತ್ತೆಯಾಗಿದ್ದರು. 

ರವೀಂದ್ರ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕೋಟೆಹೊಂಡ ಗ್ರಾಮದವರಾಗಿದ್ದಾರೆ. ಕಳೆದ‌18 ವರ್ಷಗಳಿಂದ ಭೂಗತನಾಗಿದ್ದರಾಗಿದ್ದರು. ನಕ್ಸಲ್ ಶರಣಾಗತಿ ಕಮಿಟಿ ಶ್ರೀಪಾಲ್‌ ನೇತೃತ್ವದಲ್ಲಿ‌ ಶರಣಾಗತಿಯಾಗಿದ್ದಾರೆ. ನಾಳೆ ಮತ್ತೋರ್ವ ನಕ್ಸಲ್ ಮಹಿಳೆ ಲಕ್ಷ್ಮೀ ಶರಣಾಗತಿಯಾಗುವ ಸಾಧ್ಯತೆಯಿದೆ.  

ಇತ್ತೀಚೆಗಷ್ಟೇ ಶರಣಾದ ಆರು ಮಂದಿ ನಕ್ಸಲರ ತಂಡದಲ್ಲಿದ್ದ ರವಿ ಕೋಟೆಹೊಂಡ ವಿಕ್ರಂಗೌಡ ಎನ್‌ಕೌಂಟರ್ ಸಂದರ್ಭದಲ್ಲಿ ಚದುರಿದ್ದ ತಂಡದಿಂದ ಬೇರ್ಪಟ್ಟಿದ್ದು ಇದೀಗ ಪೊಲೀಸರ ಮುಂದೆ ಶರಣಾಗತರಾಗಿದ್ದಾರೆ.


ನಕ್ಸಲ್ ರವಿ ಕೋಟೆ ಹೊಂಡ ಶರಣಾಗತಿಯಿಂದಾಗಿ ಪಶ್ಚಿಮ ಘಟ್ಟದಲ್ಲಿ ಶಸ್ತ್ರಾಸ್ತ್ರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಎಲ್ಲಾ ಮಾವೋವಾದಿಗಳು ಮುಖ್ಯವಾಹಿನಿಗೆ ಬಂದಂತಾಗಿದೆ.


ಕೊನೆಯ ಭೂಗತ ನಕ್ಸಲ್ (ಯುಜಿ ನಕ್ಸಲ್) ಎಂದು ಗುರುತಿಸಲ್ಪಟ್ಟಿದ್ದ ಕೋಟೆಹೊಂಡ ರವಿ ಸಮಾಜದ ಮುಖ್ಯವಾಹಿನಿ ಬರಲು ಶರಣಾಗಿ ಹೊಂದಿದ್ದು,ಅವರನ್ನು ಶರಣಾಗತಿ ಪ್ರಕ್ರಿಯೆಗಾಗಿ ಚಿಕ್ಕಮಗಳೂರಿಗೆ ಕರೆದೊಯ್ಯಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close