Suddilive || Shivamogga
road accident at Holehonnuru, Bike rider died, pillionrider injured
ಹೊಳೆಹೊನ್ನೂರು ಜಂಕ್ಷನ್ ಬಳಿ ರಸ್ತೆ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಟಿವಿಎಸ್ ಎಕ್ಸ ಎಲ್ ಸವಾರ ಸಾವುಕಂಡಿದ್ದಾನೆ. ಹಿಂಬದಿ ಕುಳಿತಿದ್ದ ಮಹಿಳೆಗೆ ತೀವ್ರ ಗಾಯಗಳಾಗಿದೆ. ಅಪಘಾತಕ್ಕೆ ಜಂಕ್ಷನ್ ಸರಿಪಡಿಸದ ಕಾರಣ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟಿಸಿದ್ದಾರೆ.
ಹೊಳೆಹೊನ್ನೂರಿನಿಂದ ಶಿವಮೊಗ್ಗದ ನೂತನ ರಸ್ತೆಯಲ್ಲಿ ಅಶೋಕ್ ಲೈಲ್ಯಾಂಡ್ ನ ಗೂಡ್ಸ್ ವಾಹನ ಮತ್ತು ಎಕ್ಸ್ ಎಲ್ ನಡುವೆ ಅಪಘಾತ ಸಂಭವಿಸಿದ್ದು, ಪುಟ್ಟಪ್ಪ ಎಂಬಾತ ಸ್ಥಳದಲ್ಲೇ ಸಾವುಕಂಡಿದ್ದಾರೆ.
ಹೊಳೆಹೊನ್ನೂರಿನಿಂದ ಬೈಪಾಸ್ ಜಂಕ್ಷನ್ ಬಳಿ ಸೇರುವ ಜಾಗದಲ್ಲಿ ಟಾಟಾ ಏಸ್ ಬಂದು ಗುದ್ದಿದೆ. ಪುಟ್ಟಪ್ಪ ತಮ್ಮ ಅತ್ತಿಗೆಯನ್ನ ಕೂರಿಸಿಕೊಂಡು ಬೈಕ್ ನಲ್ಲಿ ಸಾಗುವಾಗ ಈ ಘಟನೆ ಸಂಭವಿಸಿದೆ. ಘಟನೆಯನ್ನ ಖಂಡಿಸಿ ಹಾಗೂ ಜಂಕ್ಷನ್ ರಸ್ತೆಯ ಕಾಮಗಾರಿಯನ್ನ ಖಂಡಿಸಿ ಸ್ಥಳೀಯರು ಪ್ರತಿಭಟಿಸಿದ್ದಾರೆ.