Bhadravathi protest-ರಸ್ತೆಯ ಮೇಲೆ ನಿಂತು ಹಲಗೆ ಬಾರಿಸಿದ ಸೀಗೆಬಾಗಿ ನಿವಾಸಿಗಳು, ಕಾರಣವೇನು?

 Suddilive || Bhadravathi

protest against city cuncil  for dropping the photo of ambedkar in Bhadravathi

Protest, Bhadravathi


ಭದ್ರಾವತಿಯಲ್ಲಿ ದಿಡೀರ್ ಪ್ರತಿಭಟಿಸಲಾಗಿದೆ. ರಸ್ತೆಯ ಮೇಲೆ ತಮಟೆ ಬಾರಿಸಿ ಪಟಾಕಿ ಸಿಡಿಸಿ ರಸ್ತೆಯ ಮೇಲೆ ಯುವತಿಯರು, ಯುವಕರು ಧರಣಿ ಕುಳಿತಿರುವ ಘಟನೆ ನಡೆದಿದೆ. 

ಸೀಗೆಬಾಗಿಯ ಸೈಯ್ಯದ್ ನಗರದಲ್ಲಿ ಅಂಬೇಡ್ಕರ್ ಫೋಟೊವನ್ನ ನಗರಸಭೆಯ ಮೇಸ್ತಿ ತೆಗೆಸಲು ಮುಂದಾಗಿದ್ದಾರೆ. ವೀರಸಿಂಹಾಸನಾದಿಯಾಗಿ ಕುಳಿತಿದ್ದ ಅಂಬೇಡ್ಕರ್ ಫೊಟೊ ಕೆಳಗೆ ಬಿದ್ದಿದೆ. ಅಷ್ಟೇ ರಸ್ತೆಯ ಮೇಲೆ ಹಲಗೆ, ಪ್ರತಿಭಟನೆ ನಡೆಸಲಾಗಿದೆ. ಧರಣಿ ಕೂರಲಾಗಿದೆ. 

ಸೀಗೆಬಾಗಿಯಲ್ಲಿ ಮಾತಂಗೆಮ್ಮ ದೇವಿಯ ಜಾತ್ರೆ ನಡೆದಿದೆ. ಜಾತ್ರೆಗೆ ಅಂಬೇಡ್ಕರ್ ಫೊಟೊ ಹಾಕಿ ಶುಭಾಶಯ ಕೋರಲಾಗಿತ್ತು. ಜಾತ್ರೆ ಮುಗಿಯುವವರೆಗೂ ನಗರಸಭೆಯವರು ಸುಮ್ಮನಿದ್ದು, ಜಾತ್ರೆ ಮುಗಿದಿದೆ ಫ್ಲೆಕ್ಸ್ ತೆಗೆಯಲು ತಿಳಿಸಿದ್ದಾರೆ. 


ಫ್ಲೆಕ್ಸ್ ತೆಗೆಯುವ ಯಾವ ಸೂಚನೆ ಕಂಡು ಬಾರದ ಹಿನ್ನಲೆಯಲ್ಲಿ ಮೇಸ್ತ್ರಿ ಫ್ಲೆಕ್ಸ್ ತೆಗೆಯಲು ಮುಂದಾಗಿದ್ದಾರೆ. ಫ್ಲೆಕ್ಸ್ ತೆಗೆಯುವಾಗ ಕೆಳಗೆ ಬಿದ್ದಿದೆ‌. ಇದನ್ನ ಖಙಡಿಸಿ ಸೀಗೆಬಾಗಿಯ ಮಾದಿ ದಂಡೋರ ಸಮಿತಿ, ನಿವಾಸಿಗಳೆಲ್ಲ ಅಂಬೇಡ್ಕರ್ ಭಾವ ಚಿತ್ರಕ್ಕೆ ಅವಮಾನಿಸಲಾಗಿದೆ ಎಂದು ಆರೋಪಿಸಿ ಬೆಂಕಿ ಹಚ್ಚಿ ಪ್ರತಿಭಟಿಸಿದ್ದಾರೆ. 

ಕೊನೆಯಲ್ಲಿ ಫ್ಕೆಕ್ಸ್ ತೆಗೆಯಲು ಮುಂದಾಗಿದ್ದ ಮೇಸ್ತ್ರಿಯನ್ನ ಕರೆಯಿಸಿ ಕ್ಷಮೆ ಕೇಳಿಸಲಾಗಿದೆ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close