suddilive || Shivamogga
DSS Gurumurti has warned other Dalit struggle organizations not to use the name of Dalit Sangharsh Samiti. He said that the court has ordered that only we are entitled to use the name. ದಲಿತ ಸಂಘರ್ಷ ಸಮಿತಿ ಹೆಸರನ್ನ ಬಳಸದಂತೆ ಇತರೆ ಸಂಘಟನೆಗೆ ಗುರುಮೂರ್ತಿ ಎಚ್ಚರಿಕೆ
ದಲಿತ ಸಂಘರ್ಷ ಸಮಿತಿಯ ಹೆಸರು ಬಳಸಿಕೊಳ್ಳದಂತೆ ಇತರೆ ದಲಿತ ಹೋರಾಟ ಸಂಘಟನೆಗೆ ಡಿಎಸ್ ಎಸ್ ಗುರುಮೀರ್ತಿ ತಾಕೀತು ಮಾಡಿದ್ದಾರೆ. ನಮಗೆ ಮಾತ್ರ ದಸಂಸ ಬಳಸಿಕೊಳ್ಳಲು ಅರ್ಹರಿದ್ದೇವೆ ಎಂದು ನ್ಯಾಯಾಲಯ ಆದೇಶಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಸಂಘರ್ಷ ಸಮಿತಿ ಹೆಸರಿನಲ್ಲಿ ಹಲವಾರು ಜನ ನಮ್ಮದು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಸಂಘಟನೆಯ ಹೆಸರು ಬಳಸಬಾರದು. ಬಳಸಿದಲ್ಲಿ ರಾಜ್ಯಾದ್ಯಂತ ಪ್ರಕರಣ ದಾಖಲಿಸಲಾಗುವುದು. ಹೈಕೋರ್ಟ್ ನಲ್ಲಿ ಕೆವಿಟ್ ಹಾಕಲಾಗುತ್ತಿದೆ ಎಂದರು.
ಈ ಕುರಿತು ನ್ಯಾಯಾಲಯದಲ್ಲಿ ಹೋರಾಟ ನಡೆಸಿದ ವಕೀಲ ಸೀತಾರಾಮ್ ಮಾತನಾಡಿ, ದಲಿತ ಸಂಘರ್ಷ ಸಮಿತಿ ಹೆಸರನ್ನ ಪ್ರೊ.ಕೃಷ್ಣಪ್ಪ 74/75 ಎಂದು ನೋಂದಣಿ ಮಾಡಿಸಲಾಗಿತ್ತು. ಗುರುಮೂರ್ತಿ 2008 ರವರೆಗೆ ಆಡಿಟ್ ಮಾಡಿಸುತ್ತಿದ್ದರು. ಸತ್ಯಮತ್ತು ಇತರರು ಡಿಆರ್ ಗೆ ಪತ್ರ ಬರೆದು ತಕರಾರು ಮಾಡಿದ್ದರು.
ತಕರಾರಿಗೆ ಸಮಿತಿ ರಚಿಸಲಾಗಿತ್ತು. ಸಮಿತಿಯು ಸಾಧ್ಯವಿಲ್ಲದ ಪ್ರಕರಣ ಎಂದು ಬರೆದು. ನ್ಯಾಯಾಲಯದಲ್ಲಿ ಫೈಟ್ ಮಾಡಲು ಸೂಚಿಸಿತ್ತು. ಗುರುಮೂರ್ತಿ ಅವರು ಭದ್ರಾವತಿಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಭದ್ರಾವತಿಯ ನ್ಯಾಯಾಲಯ ಗುರುಮೂರ್ತಿ ಪರ ನ್ಯಾಯ ಪ್ರಕಟಿಸಿದ್ದರು.
ಸತ್ಯರವರು ಕೆಳನ್ಯಾಯಾಲಯದ ಆದೇಶವನ್ನ ಪ್ರಶ್ನಿಸಿ ಮೇಲಿನ ನ್ಯಾಯಾಲಯ ತಡೆ ನೀಡುವುದಿಲ್ಲ. ಇದರಿಂದ ಇವರು ಹೈಕೋರ್ಟ್ ಗೆ ಹೋಗಿದ್ದರು. ಹೈಕೋರ್ಟ್ ಕಂಡಿಷನ್ ಮೇಲೆ ಸ್ಟೇ ನೀಡುತ್ತದೆ. ಕಂಡಿಷನ್ ಪ್ರಕಾರ ಗುರುಮೂರ್ತಿಗೆ ಸಂಘಟನೆ ಹೆಸರು ಬಳಸಿಕೊಳ್ಳಲು ಮಾತ್ರ ಅಧಿಕಾರವಿದ್ದು, ಇತರರು ಬಳಸಿಕೊಳ್ಳದಂತೆ ಸೂಚಿಸಿತ್ತು.
ನಂತರ ಹೈಕೋರ್ಟ್ ವಿಚಾರಣೆ ನಡೆಸಿ ಕೆಳನ್ಯಾಯಾಲಯದ ಆದೇಶವನ್ನ ಎತ್ತಿಹಿಡಿದಿದೆ. ಇದರ ಮಧ್ಯೆ ಸತ್ಯರವರು ಭದ್ರಾವತಿಯಲ್ಲಿ ದಲಿತ ಸಂಘರ್ಷ ಸಮಿತಿ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿದ್ದರು. ಡಿವೈಎಸ್ಪಿ ಆಕ್ಷೇಪಣಾರ್ಹ ಹಿಂಬರಹ ಕೊಟ್ಟು ಈ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟಿದ್ದರು. ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ದಲಿತ ಸಂಘರ್ಷ ಸಮಿತಿಯ ಭದ್ರಾವತಿ ವಕೀಲ ಶಿವಕುಮಾರ್, ದಸಂಸ ಜಿಲ್ಲಾ ಸಂಚಾಲಕ ಏಳುಕೋಟಿ, ಬೊಮ್ಮನ್ ಕಟ್ಟೆ ಕೃಷ್ಣಪ್ಪ, ಮೂಗೂರು ಪರಶುರಾಮ್, ಚಿಕ್ಕಮರಡಿ ರಮೇಶ್, ನಾಗರಾಜ್, ದೌರ್ಜನ್ಯ ಸಮಿತಿ ಸದಸ್ಯ ಹನುಮಂತಪ್ಪ ಯಡವಾಲ, ಹರಗೆ ರವಿ, ಹನುಮಂತಪ್ಪ ಉಪಸ್ಥಿತರಿದ್ದರು.
DSS Gurumurti has warned