ಉಪಲೋಕಯುಕ್ತರಿಂದ ಬಾಲಮಂದಿರ ಮತ್ತು ಹಾಸ್ಟೆಲ್ ಭೇಟಿ- Deputy Lokayukta K.N. Phanindra visited children home

Suddilive || Shivamogga

Deputy Lokayukta K.N. Phanindra visited the girls' children's home on Friday, inspected it and gave appropriate suggestions.

Deputy lokayukta, children home

ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ರವರು ಶುಕ್ರವಾರ ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ನೀಡಿ  ವೀಕ್ಷಣೆ ಮಾಡಿ, ಸೂಕ್ತ ಸಲಹೆ ಸೂಚನೆಗಳನ್ನು‌ನೀಡಿದರು.

ಅಡುಗೆ ಮನೆಗೆ ತೆರಳಿ, ಅಡುಗು ಮನೆ ಮೇಲ್ಚಾವಣೆ  ಹಾಗೂ ಆಹಾರದ ಸುರಕ್ಷಿತ ತಪಾಸಣೆ ಮಾಡಿದರು.  

ಕೈ ತೊಳೆಯುವ ಸ್ಥಳ, ವಾಟರ್ ಫಿಲ್ಟರ್ , ಮಕ್ಕಳ ಮಲಗುವ ಕೊಠಡಿಯನ್ನು ಪರಿವೀಕ್ಷಿಸಿ ಹಾಳಾಗಿರುವ ಹಾಸಿಯನ್ನು ಹಾಗೂ ಮಂಚಗಳನ್ನು  ಬದಲಾಯಿಸಬೇಕೆಂದು ನಿರ್ದೇಶನ ನೀಡಿದರು.

ಹಾಸಿಗೆ, ಮಂಚಗಳ ಗುಣಮಟ್ಟ ಪರೀಕ್ಷಿಸಿ ಖರೀದಿಸಬೇಕು. ಹಾಳಾದ ಮಂಚಗಳನ್ನು ದುರಸ್ತಿಪಡಿಸಿ, ಹಾಳಾದ ಹಾಸಿಗೆಗಳನ್ನು ತೆಗೆದುಹಾಕಿ ಹೊಸದನ್ನು ಹಾಕಿಸುವಂತೆ ಸೂಷಿಸಿದರು. ಕಿಟಕಿ‌ ಗಾಜು, ಮೆಶ್ ಸರಿಪಡಿಸಿ ಸ್ವಚ್ಚತೆಯನ್ನು ಇನ್ನು ಒಂದು ವಾರದೊಳಗೆ ಮಾಡಬೇಕು. ಇಲ್ಲವಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. 

ಆವರಣದೊಳಗೆ ಹಂದಿಗಳ ಹಾವಳಿ ತಪ್ಪಿಸಿ, ಸ್ವಚ್ಚತೆ ಕಾಪಾಡಿ ಸೂಕ್ತ ಕ್ರಮ ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು. 

ಶೌಚಾಲಯ ವೀಕ್ಷಿಸಿದ ಅವರು ಊಟ, ತಿಂಡಿ ಇತರೆ ಸೌಲಭ್ಯಗಳು ಸರಿಯಾಗಿ ನೀಡುತ್ತಿದ್ದಾರಾ, ಕುಡಿಯುವ ನೀರಿನ ಸೌಲಭ್ಯ, ಬಿಸಿನೀರು, ಹೊಟ್ಟೆ ತುಂಬ ಗುಣಮಟ್ಟದ ಊಟ ಕೊಡುತ್ತಿದ್ದಾರಾ?  ಎಂದು ಕೇಳಿದರು.  ಗ್ರಂಥಾಲಯಕ್ಕೆ ಬೇಕಾದ ಪುಸ್ತಕ ಗಳನ್ನು ಕೇಳಿರಿ. 

ಏನು ಸೌಕರ್ಯ, ಸೌಲಭ್ಯಗಳು ಬೇಕೆಂದು ಕೇಳಿದ ಅವರು ಸತ್ಪ್ರಜೆಗಳಾಗಬೇಕು. ಸೇವಾ ಮನೋಭಾವ ಬೆಳೆಸಿಕೊಂಡು, ಉತ್ತಮ‌ ಉದ್ಯೋಗ ಪಡೆದು‌, ದೇಶ ಸೇವೆ ಮಾಡುವಂತೆ ತಿಳಿಸಿದರು. ನಿಮ್ಮ ಪೀಳಿಗೆ ಚೆನ್ನಾಗಿದ್ದರೆ ದೇಶ ಅಭಿವೃದ್ಧಿ ಸಾಧ್ಯ. ಚೆನ್ನಾಗಿ ಓದಿರಿ. ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು. 

ಅನುದಾನದ ಅವಶ್ಯಕತೆ ಇದ್ದರೆ ಕೇಳಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ತಮ್ಮ ಮನೆಯಂತೆ ಬಾಲಮಂದಿರವನ್ನು‌ ನೋಡಿಕೊಳ್ಳಬೇಕೆಂದು ತಿಳಿಸಿದರು. 

ನಂತರ ಸರ್ಕಾರಿ ವಿಶೇಷ ದತ್ತು ಸಂಸ್ಥೆಗೆ ಭೇಟಿಗೆ ನೀಡಿ, ಶಿವರಾತ್ರಿ ಹಬ್ಬದಂದು ಕೇಂದ್ರಕ್ಕೆ ದಾಖಲಾದ ಹೆಣ್ಣು ಮಗುವಿಗೆ ಉಪ ಲೋಕಾಯುಕ್ತರು ನಾಮಕರಣ ಮಾಡಿದರು.

ರಾಜ್ಯ ಮಹಿಳಾ‌ ನಿಲಯಕ್ಕೆ ಭೇಟಿ ನೀಡಿ, ನಿವಾಸಿಗಳೊಂದಿಗೆ ಮಾತನಾಡಿ, ಕುಂದು ಕೊರತೆಗಳನ್ನು ಆಲಿಸಿದರು.

ನಂತರ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಬಾಲಕಿಯರ ಎಸ್ ಸಿ ಎಸ್ ಟಿ ಹಾಸ್ಟೆಲ್ ಗೆ ಭೇಟಿ ನೀಡಿ ಪರಿಶೀಲಿಸಿದರು. ಚರಂಡಿ ಚೇಂಬರ್ ರಿಪೇರಿ, ಮಕ್ಕಳ ಮಲಗುವ ಕೊಠಡಿ, ಅಡುಗೆ ಮನೆ, ಶೌಚಾಲಯಗಳಿಗೆ ಭೇಟಿ ನೀಡಿ ಸೂಕ್ತ ಸಲಹೆ ನೀಡಿದರು. 

Deputy Lokayukta K.N. Phanindra visited children's home

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close