ನಾಳೆ ಕಲಿಯುಗ ಕರ್ಣನ 52ನೇ ಹುಟ್ಟುಹಬ್ಬ-M. Srikanth, a member of the Srikanth family, has celebrated his birthday

 suddilive || shivamogga 

A politician for 15 to 20 years, a man who contested the Shivamogga Legislative Assembly elections twice, and known as the Karna of Kali Yuga, M. Srikanth, a member of the Srikanth family, has celebrated his birthday.

M.srikanth, birthday

ಶಿವಮೊಗ್ಗ 15 ರಿಂದ 20 ವರ್ಷ ಸುದೀರ್ಘ ರಾಜಕಾರಣಿ, ಎರಡು ಬಾರಿ ಶಿವಮೊಗ್ಗದ ವಿಧಾನ ಸಭೆ ಚುನಾವಣೆ ಎದುರಿಸಿದ ವ್ಯಕ್ತಿ, ಕಲಿಯುಗದ ಕರ್ಣ ಎಂದೇ ಖ್ಯಾತರಾದ ಎಂ. ಶ್ರೀಕಾಂತ್ ಹುಟ್ಟುಹಬ್ಬವನ್ನ ಶ್ರೀಕಾಂತ್ ಗೆಳಯರ ಬಳಗ ಹಮ್ಮಿಕೊಂಡಿದ್ದಾರೆ.

ಮಾಜಿ ಡೆಪ್ಯೂಟಿ ಮೇಯರ್ ಪಾಲಾಕ್ಷಿ ಸುದ್ದಿಗೋಷ್ಠಿ ನಡೆಸಿ, ಅತಿ ವೃಷ್ಠಿ, ಕೊರೋನದಲ್ಲಿ ಶ್ರೀಕಾಂತ್ ಸಮಾಜಮುಖಿ ಕೆಲಸ ಮಾಡಿದ್ದಾರೆ. ಎರಡು ಬಾರಿ ಚುನಾವಣೆ ಸೋತರು ಸಹ ಸಾರ್ವಜನಿಕರ ಸೇವೆಯಲ್ಲಿ ನಿರಂತರವಾಗಿ ಗುರುತಿಸಿಕೊಂಡಿದ್ದಾರೆ. ನಾಳೆ ಅವರ ಹುಟ್ಟುಹಬ್ಬವನ್ನ ಹಮ್ಮಿಕೊಳ್ಳಲಾಗಿದೆ. 

ನಾಳೆ ಬೆಳಿಗ್ಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಣ್ಣು ಹಂಪಲು, ಅಂಧರಿಗೆ ನಾಳೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ನಾಳೆ ಸಂಜೆ ಬಂಜಾರ ಕನ್ವೆಷನಲ್ ಹಾಲ್ ನಲ್ಲಿ ಕೇಕ್ ಕಟ್ ಮಾಡಲಾಗುತ್ತಿದೆ. 52 ನೇ ಹುಟ್ಟು ಹಬ್ಬವನ್ನ ಆಚರಿಸಲಾಗುತ್ತಿದೆ. ಆಶಾಕಾರ್ಯಕರ್ತರ ಜೊತೆ ಹುಟ್ಟು ಹಬ್ಬ ಆಚರಿಸಲಾಗುತ್ತಿದೆ. 

ಬೆಳಿಗ್ಗೆ 9-30ಕ್ಕೆ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಮೆಗ್ಗಾನ್ ನಲ್ಲಿ ರೋಗಿಗಳಿಗೆ ಹಣ್ಣುಹಂಪಲು ಹಂಚಲಾಗುತ್ತದೆ. ನಾಳೆ ಸಂಜೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿ ಬಂಜಾರ ಕನ್ವೆನ್ಷಲ್ ಹಾಲ್ ನಲ್ಲಿ ವಿಜೃಂಭಣೆಯ ಹುಟ್ಟುಹಬ್ಬ ಆಚರಿಸಲಾಗುತ್ತಿದೆ ಎಂದರು. 

ಕೆ.ರಂಗನಾಥ್ ಮಾತನಾಡಿ, ಶ್ರೀಕಾಂತ್ ಹುಟ್ಟುಹಬ್ಬವನ್ನ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಶಿಕ್ಷಣ, ಸಾಮಾಜಿಕ ಕ್ಷೇತ್ರದಲ್ಪಿ ಶ್ರೀಕಾಂತ್ ಗುರುತರ ಸೇವೆ ಸಲ್ಲಿಸಿದವರು. ಭಾವನಾತ್ಮಕ ಜೀವಿಯಾಗಿ ಬೆಳೆದವರು ಶ್ರೀಕಾಂತ್ ಅವರು. ಫಲಾಪೇಕ್ಷೆಯಿಲ್ಲದ ಕಲಿಯುಗದ ಕರ್ಣ ಶ್ರೀಕಾಂತ್ ಆಗಿದ್ದಾರೆ ಎಂದರು.

ಭಾಸ್ಕರ್, ನವುಲೆ ಮಂಜುನಾಥ್, ದಿವ್ಯ, ಪ್ರಸನ್ನ ಕುಮಾರ್, ಕೆ ರಂಗನಾಥ್, ಶಾಮೀರ್, ಸಂದೀಪ್, ದಿವಾಕರ್, ಸಂದೇಶ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

M. Srikanth, a member of the Srikanth family, has celebrated his birthday.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close