Suddilive || Banglore
Keep an eye on children who are lagging behind learning-Dr.Dhanajaya sarji suggest. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ನಿಗಾ ವಹಿಸಿ - ಶಿಕ್ಷಣ ಸಚಿವರಿಗೆ ಡಾ. ಧನಂಜಯ ಸರ್ಜಿ ಸಲಹೆ
ಶೈಕ್ಷಣಿಕ ವರದಿಗಳ ಪ್ರಕಾರ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂದಿನ ಮಕ್ಕಳಲ್ಲಿ ಬರೆಯುವ ಅಭ್ಯಾಸ ಕಡಿಮೆಯಾಗಿದೆ, ನಾವು ಮುಂಚೆ ಬರೆಯುವಷ್ಟು ಇವಾಗ ಬರೆಯುವುದಿಲ್ಲ ಮಕ್ಕಳಲ್ಲಿ ಇವತ್ತು ಬರೆಯುವ ಅಭ್ಯಾಸ ಕುಂಠಿತಗೊಳ್ಳುತ್ತಾ ಬರುತ್ತಿದೆ . ರಾಜ್ಯದಲ್ಲಿ ಸುಮಾರು ಶೇ 25 ರಿಂದ 30 ರಷ್ಟು ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದ್ದಿದ್ದಾರೆ ಹೀಗಾಗಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ನಿಗಾ ವಹಿಸಿ ಎಂದು ಗುರವಾರ ವಿಧಾನಸೌಧದಲ್ಲಿ ನಡೆದ 155 ನೇ ವಿಧಾನ ಪರಿಷತ್ ಕಲಾಪದಲ್ಲಿ ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಶಿಕ್ಷಣ ಸಚಿವ ಮಧುಬಂಗಾರಪ್ಪನವರಿಗೆ ಹೇಳಿದರು.
ಮುಂದುವರೆಯುತ್ತಾ ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 23,000 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗಿದ್ದರು ಇದರಲ್ಲಿ 7,000 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ. ಅಲ್ಲಿನ ಡಿ.ಡಿ.ಪಿ.ಐ ಅವರು ಪ್ರಾಥಮಿಕ ಶಿಕ್ಷಣ ಸುಧಾರಣೆ ಆಗಬೇಕು ಎಂದು ನೋಟಿಸ್ ಕೊಟ್ಟಿದಾರೆ ಎಂದು ರಾಜ್ಯದ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ ಇದು ಕೇವಲ ಒಂದು ಜಿಲ್ಲೆಯ ಸಮಸ್ಯೆ ಅಲ್ಲ ಇಡೀ ರಾಜ್ಯದ ಸಮಸ್ಯೆ. 2022-23ರಲ್ಲಿ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ 8 ಲಕ್ಷದ 50 ಸಾವಿರ ವಿದ್ಯಾರ್ಥಿಗಳು ಹಾಜರಿದ್ದರು ಅದರಲ್ಲಿ 1 ಲಕ್ಷದ 22 ಸಾವಿರ ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಹಾಗೆ 2023-24ರಲ್ಲಿ 2,28,763 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಕಳೆದ ಬಾರಿ ಎಲ್ಲ ಪರೀಕ್ಷಾ ಕೇಂದ್ರದಲ್ಲಿ ಸಿ.ಸಿ.ಟಿ.ವಿ ಗಳನ್ನು ಅಳವಡಿಸಿ ಕಟ್ಟಿನಿಟ್ಟಾಗಿ ಪರೀಕ್ಷೆಗಳನ್ನು ನಡೆಸಿರುವುದರಿಂದ ಎಷ್ಟು ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎನ್ನವುದು ಸ್ಪಷ್ಟವಾಗಿ ತಿಳಿದಿದೆ ಇದಕ್ಕೆ ಶಿಕ್ಷಣ ಸಚಿವರಿಗೆ ನಾನು ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು
ಇಡೀ ರಾಜ್ಯದಲ್ಲಿ ಸುಮಾರು ಶೇ 25 ರಿಂದ 30 ರಷ್ಟು ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದ್ದಿದ್ದಾರೆ. ಸುಮಾರಷ್ಟು ಸರ್ವೆಗಳ ಪ್ರಕಾರ ಕೂಡ ಶೇ 5 ರಿಂದ 15% ನಷ್ಟು ಮಕ್ಕಳು ಕಲಿಕೆಯಲ್ಲಿ ಹಿಂದುಳಿದ್ದಿದ್ದಾರೆ ಇದನ್ನು ಗಮನಿಸಿದರೆ ನಮಗೆ ಜನರೆಷನ್ ಸಮಸ್ಯೆ ಗೊತ್ತಾಗ್ತಾ ಇದೆ. X, Y, Z, ALFA, BITA ಎಂಬ ನಾಲ್ಕು ಜನರೇಷನ್ ನಲ್ಲಿ 1961 ರಿಂದ 1980ರ ವರೆಗೆ X ಜನರೇಷನ್ ಆದರೆ, 1981 ರಿಂದ 1996 ರವರೆಗೆ Y ಜನರೇಷನ್, 1997 ರಿಂದ 2012 ರ ವರೆಗೆ Z ಜನರೇಷನ್, 2013 ರಿಂದ 2025ರ ವರೆಗೆ ALFA ಜನರೇಷನ್ ಇನ್ನು 2025ರ ಮುಂಬರುವ ವರ್ಷಗಳು BITA ಜನರೇಷನ್. X ಮತ್ತು Y ಜನರೇಷನ್ ನಲ್ಲಿ ಬರವಣಿಗೆಗೆ ಮಹತ್ವ ಇತ್ತು, ಆದರೆ, Z, ALFA, ಮತ್ತು BITA ಜನರೇಷನ್ ಗಳಲ್ಲಿ ತಂತ್ರಜ್ಞಾನ ಮತ್ತು ಡಿಜಿಟಲ್ ಮಾಧ್ಯಮಗಳ ಪ್ರಭಾವ ಹೆಚ್ಚಾಗಿದ್ದು,ಇಲ್ಲಿ ಓದುವುದು ಮತ್ತು ಬರವಣಿಗೆ ಸಮಸ್ಯೆಗಳು ಹೆಚ್ಚಾಗಿದ್ದು ಶೇ 5/15% ಮಕ್ಕಳು ಇದರಿಂದ ಬಳಲುತ್ತಿದ್ದಾರೆ. ಥಿಯರಿ ಆಫ್ ಎವಲ್ಯೂಷನ್ ಪ್ರಕಾರ ಉಪಯೋಗವಾಗದ ಅಂಗಗಳು ಮತ್ತು ಕೌಶಲ್ಯಗಳು ಅವುಗಳ ಶಕ್ತಿ, ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ ಕಲಿಕಾ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಹಾಗಾಗಿ ಎಸ್.ಎಸ್.ಎಲ್.ಸಿಯಲ್ಲಿ ವಿದ್ಯಾರ್ಥಿಗಳಿಗೆ ಪಾಸ್ ಆಗುವುದು ಕಷ್ಟವಾಗುತ್ತಿದೆ ಎಂದು ಹೇಳಿದರು.
ಸಲಹೆ
1. ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಎಷ್ಟು ಮಕ್ಕಳು ಕಲಿಕೆಯಲ್ಲಿ ಹಿಂದುಳಿದ್ದಿದ್ದಾರೆ. ಎಷ್ಟು ಮಕ್ಕಳು ನಿಧಾನಗತಿಯ ಕಲಿಕೆಯಲ್ಲಿ ಇದ್ದಾರೆ ಎಂದು ಸಮೀಕ್ಷೆಯನ್ನು ಇಲಾಖೆಯಿಂದ ನಡೆಸಬೇಕು.
2. ವಿದ್ಯಾರ್ಥಿಗಳಿಗೆ ಸೈಕಲಾಜಿಕಲ್ ಮೌಲ್ಯಮಾಪನವನ್ನು ನಡೆಸಬೇಕು, ಅದರಲ್ಲಿ ನಿಧಾನ ಗತಿಯ ಕಲಿಕೆ ಎಂದು ಬಂದರೆ ಅವರನ್ನು ಮುಂದಿನ ಹಂತಕ್ಕೆ ಸಿದ್ಧಪಡಿಸಲು ಅನುಕೂಲವಾಗುತ್ತದೆ.
3. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮತ್ತೆ ಹಚ್ಚಿ ಅಂತಹ ವಿದ್ಯಾರ್ಥಿಗಳಿಗೆ ವಿಶೇಷ ಕಲಿಕಾ ಕೈಪಿಡಿಯನ್ನು (ಸ್ಕ್ರೈಬ್) ಅನ್ನು ಶಿಕ್ಷಣ ಇಲಾಖೆಯಿಂದ ಸಿದ್ದಪಡಿಸಿ ಕೊಡಬೇಕು.
4. ಕಲಿಕೆಯ ವಿಧಾನವನ್ನು ಸುಧಾರಣೆ ಮಾಡುವುದರ ಜೊತೆಗೆ ಪರೀಕ್ಷಾ ವಿಧಾನವನ್ನು ಕೂಡ ಬದಲಾಯಿಸಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಉತ್ತರ
ಡಾ.ಸರ್ಜಿ ಅವರು ಹೇಳ್ತಾ ಇರುವುದು ಸರಿ ಇದೆ. ಈ ಬಾರಿಯ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಿದ್ದರಿಂದ ಎಷ್ಟು ಮಕ್ಕಳು ಕಲಿಕೆಯಲ್ಲಿ ಹಿಂದುಳಿದ್ದಿದ್ದಾರೆ ಎಂದು ಸ್ಪಷ್ಟವಾಗಿದೆ. ರಾಜ್ಯದಲ್ಲಿ ಈ ಹಿಂದಿನಿಂದಲೂ 1 ರಿಂದ 9 ನೇ ತರಗತಿಯವರೆಗೂ ವಿದ್ಯಾರ್ಥಿಗಳನ್ನು ಫೇಲ್ ಮಾಡದೆ ಪಾಸ್ ಮಾಡುತ್ತ ಬರುತ್ತಿರುವುದರಿಂದ, ಗುಣಮಟ್ಟದ ಶಿಕ್ಷಣದ ಕೊರತೇ ಕಾಣ್ತಾ ಇದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಸುಧಾರಣೆಗೆ ಸರ್ಕಾರದಿಂದ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಿದ್ದೇವೆ, ಶೇ 100 ರಷ್ಟು ಗುಣಮಟ್ಟದ ಶಿಕ್ಷಣ ಕೊಡಲಿಕ್ಕೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ 80% ಶಿಕ್ಷಕರ ನೇಮಕಾತಿಗೂ ಕೂಡ ನಮಗೆ ಆದೇಶ ಬಂದಿದೆ. ಪ್ರಕ್ರಿಯೆ ಪ್ರಾರಂಭ ಮಾಡುತ್ತೇವೆ ವಿಷಯಾಧಾರಿತ, ಭಾಷೆಯಾಧಾರಿತ ಕಲಿಕೆಗೆ ಒಟ್ಟು ಕೊಡುತ್ತೇವೆ, ಸರ್ಜಿ ಅವರ ಸಲಹೆಯನ್ನು ಕೂಡ ಪಡೆದು ಕೊಳ್ಳಲಿದ್ದೇವೆ ಎಂದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಉತ್ತರಿಸದರು.