Suddilive || Shivamogga
A woman drowned into the channel water and found dead. ನೀರಿನಲ್ಲಿ ಮುಳುಗಿ ಮಹಿಳೆ ಸಾವು.
ಮನೆಯ ಹಿಂಭಾಗದಲ್ಲಿದ್ದ ಚಾನೆಲ್ ಗೆ ಬಟ್ಟೆ ತೊಳೆಯಲು ಹೋದ ಮಹಿಳೆ ಶವವಾಗಿ ಪತ್ತೆಯಾಗಿದ್ದಾಳೆ. ರಾಗಿಗುಡ್ಡದ ಚಾನೆಲ್ ನಲ್ಲಿ ಆಕಸ್ಮಿಕವಾಗಿ ಜಾರಿಬಿದ್ದು ಮಹಿಳೆ ಸಾವುಕಂಡಿರುವುದಾಗಿ ತಿಳಿದುಬಂದಿದೆ.
ರೇಷ್ಮ ಭಾನು(35) ಎಂಬ ಮಹಿಳೆ ಚಾನೆಲ್ ನಲ್ಲಿ ಕಾಲುಜಾರಿ ಬಿದ್ದು ಸಾವುಕಂಡಿದ್ದಾಳೆ. 11 ಗಂಟೆಯ ವೇಳೆಯಲ್ಲಿ ರೇಷ್ಮಭಾನು ಮನೆಯ ಹಿಂಭಾಗದಲ್ಲಿದ್ದ ಚಾನೆಲ್ ನಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾರೆ. ತುಂಬ ಹೊತ್ತು ಕಳೆದರು ಮನೆಗೆ ವಾಪಾಸ್ ಬಾರದ ಮಹಿಳೆಯನ್ನ ಕುಟುಂಬಸ್ಥರು ಹುಡುಕಿಕೊಂಡು ಹೋಗಿದ್ದಾರೆ.
ಬಟ್ಟೆಗಳು ಮಾತ್ರ ಚಾನೆಲ್ ನ ದಡದ ಮೇಲೆ ಇದ್ದು ರೇಷ್ಮ ಕಾಣದೆ ಇರುವುದರಿಂದ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಅಗ್ನಿ ಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ನೀರಿನಲ್ಲಿ ನಾಪತ್ತೆಯಾಗಿದ್ದ ರೇಷ್ಮಭಾನು ಶವವಾಗಿ ಪತ್ತೆಯಾಗಿದ್ದಾರೆ.
ರೇಷ್ಮರವರು ಮದುವೆಯಾಗಿದ್ದರೂ ವಿವಾಹ ವಿಚ್ಛೇದನ ಪಡೆದಿದ್ದರು. ಪ್ರಕರಣ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.