House theft cases- ಮನೆಗಳ್ಳತನ ಪ್ರಕರಣ ಬೆನ್ನುಹತ್ತಿದ ಪೊಲೀಸರಿಗೆ ಪತ್ತೆಯಾಗಿದ್ದು 12 ಪ್ರಕರಣಗಳು!

Suddilive || Anandapuram

House theft cases in anandapurm- ಮನೆಗಳ್ಳತನ ಪ್ರಕರಣ ಬೆನ್ನುಹತ್ತಿದ ಪೊಲೀಸರಿಗೆ ಪತ್ತೆಯಾಗಿದ್ದು 12 ಪ್ರಕರಣಗಳು 

House theft, cases


ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಮನೆಗಳ್ಳತನ ಪ್ರಕರಣಗಳಲ್ಲಿ,  ಆರೋಪಿತರು ಹಾಗೂ ಮಾಲು ಪತ್ತೆಗಾಗಿ ಮಿಥುನ್ ಕುಮಾರ್ ಜಿ. ಕೆ. ಐ.ಪಿ.ಎಸ್ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ,  ಅನಿಲ್ ಕುಮಾರ್ ಭೂಮರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು 1 ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ. ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು 2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಗೋಪಾಲಕೃಷ್ಣ ಟಿ ನಾಯ್ಕ ಪೊಲೀಸ್ ಉಪಾಧೀಕ್ಷಕರು ಸಾಗರ ಉಪವಿಭಾಗರವರ ಮೇಲ್ವಿಚಾರಣೆಯಲ್ಲಿ, ಸಂತೋಷ್ ಶೆಟ್ಟಿ, ಸಿಪಿಐ, ಸಾಗರ ಗ್ರಾಮಾಂತರ ವೃತ್ತ  ರವರ ನೇತೃತ್ವದಲ್ಲಿ  ಯುವರಾಜ. ಕೆ ಪಿಎಸ್ಐ ಆನಂದಪುರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳಾದ ಸಿ.ಹೆಚ್.ಸಿ ಅಶೋಕ್, ಪರಶುರಾಮ, ಸಿಪಿಸಿ ಉಮೇಶ್ ಲಮಾಣಿ, ಸಂತೋಷಕುಮಾರ, ನೂತನ್,  ನಿರಂಜನ್, 

 ಸುಬ್ರಮಣ್ಯ.ಎಸ್,  ಭರತ್‌ ಕುಮಾರ್ ಹಾಗೂ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿಯಾದ ಇಂದ್ರೇಶ್, ವಿಜಯ್ ಕುಮಾರ್, ಮತ್ತು ಚಾಲಕರಾದ ಎ.ಆರ್.ಎಸ್.ಐ ನರಸಿಂಹಸ್ವಾಮಿ ಮತ್ತು ಎ.ಹೆಚ್‌.ಸಿ ಸತೀಶ್ ರವರುಗಳನ್ನು ಒಳಗೊಂಡ ವಿಶೇಷ ತನಿಖಾತಂಡವನ್ನು ರಚಿಸಲಾಗಿರುತ್ತದೆ. 

ತನಿಖಾ ತಂಡವು  ಪ್ರಕರಣದ ಆರೋಪಿ  1)ಅಶೋಕ ಕೆ, 42 ವರ್ಷ, ವ್ಯವಸಾಯ ಕೆಲಸ,  ಬಸವಾಪುರ ಗ್ರಾಮ, ಹಾರೋಹಿತ್ಲು ಹೊಸನಗರ, 2) ಚಂದ್ರ @ ಚಂದ್ರಹಾಸ, 33 ವರ್ಷ, ಚಿನ್ನಬೆಳ್ಳಿ ತಯಾರಿಕಾ ಕೆಲಸ, ಹಾರ್ನಳ್ಳಿ ಗ್ರಾಮ, ಶಿವಮೊಗ್ಗ ಇವರುಗಳನ್ನು ದಸ್ತಗಿರಿ ಮಾಡಿ, ಆರೋಪಿತರನ್ನು ವಿಚಾರಣೆಗೆ ಓಳಪಡಿಸಿದಾಗ  ಆರೋಪಿ  ಅಶೋಕ ಕೆ ಈತನು ತಾನು ಕಳ್ಳತನ ಮಾಡಿದ ಬೆಳ್ಳಿ ಹಾಗೂ ಬಂಗಾರದ ಆಭರಣಗಳಲ್ಲಿ ಕೆಲವು ಆಭರಣಗಳನ್ನು ಆರೋಪಿ ಚಂದ್ರ @ ಚಂದ್ರಹಾಸ ಈತನಿಗೆ  ಮಾರಾಟ ಮಾಡಿದ್ದು, ಬಾಕಿ ಉಳಿದ ಆಭರಣಗಳನ್ನು ಬ್ಯಾಂಕಿನಲ್ಲಿ ಅಡಮಾನ ಇಟ್ಟಿರುವುದು ಕಂಡುಬಂದಿದ್ದು, ನಂತರ  ಆರೋಪಿತರಿಂದ ಆನಂದಪುರ ಪೊಲೀಸ್ ಠಾಣೆಯ 4, ಸಾಗರ ಪೇಟೆ ಪೊಲೀಸ್ ಠಾಣೆಯ 1

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ 5,  ಹೊಸನಗರ ಪೊಲೀಸ್ ಠಾಣೆಯ 1 ಮತ್ತು ಮಾಳೂರು ಪೊಲೀಸ್ ಠಾಣೆಯ 1 ಪ್ರಕರಣ ಸೇರಿ ಒಟ್ಟು 12 ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 30,96,000/-  ರೂಗಳ 387 ಗ್ರಾಂ ಚಿನ್ನದ ಆಭರಣ, ಅಂದಾಜು ಮೌಲ್ಯ 27,688/- ರೂಗಳ 384 ಗ್ರಾಂ ಬೆಳ್ಳಿ ಆಭರಣ  ಹಾಗೂ ಅಂದಾಜು ಮೌಲ್ಯ 1,00,000/- ರೂ ಗಳ ಕೃತ್ಯಕ್ಕೆ ಬಳಸಿದ 2 ಬೈಕ್ ಗಳು ಸೇರಿ ಒಟ್ಟು 32,23,688/- ರೂಗಳ ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. 

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೋಲಿಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆಯವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close