Suddilive || Shivamogga
JDS Shivamogga units conducts the protest against state government
ಶಿವಮೊಗ್ಗದಲ್ಲಿ ಜಿಲ್ಲಾ ಜಾತ್ಯಾತೀತ ಜನತಾದಳ ರಾಜ್ಯ ಸರ್ಕಾರದ ವೈಫಲ್ಯ ಮತ್ತು ಮೈಕ್ರೋ ಫೈನಾನ್ಸ್ ನ ಹಾವಳಿ ವಿರುದ್ಧ ಪ್ರತಿಭಟಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣಾ ಸಮಯದಲ್ಲಿ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ ಗೃಹ ಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯಾವ ಜನೆ, ಅನ್ಮಭಾಗ್ಯ ಹಾಗೂ ಯುವನಿಧಿಯನ್ನ ಸಮರ್ಪಕವಾಗಿ ಅನುಷ್ಠಾನ ಗೊಳಿಸದೆ ಪ್ರತಿಭಡಿಸಿದೆ.
ಶಿವಮೊಗ್ಗ ದ ಜೆಡಿಎಸ್ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಪ್ರತಿಭಟನಾ ಮೆರವಣೆಗೆ ನಡೆಸಿದ ಪ್ರತಿಭಟನಾಕಾರರು ಹಲೋ ಮಿಸ್ಟರ್ ಸಿದ್ದರಾಮಯ್ಯ ಹೇಳಿದ್ದೇನು ಮಾಡಿದ್ದೇನು ಎಂದು ಘೋಷಣೆ ಕೂಗಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾಕಾರರನ್ನ ಉದ್ದೇಶಿಸಿದ ಪಕ್ಷದ ಜಿಲ್ಲಾ ಅಧ್ಯಕ್ಷ ಕಡಿದಾಳ ಗೋಪಾಲ್, 2 ಲಕ್ಷದ 76 ಹುದ್ದೆಗಳು ರಾಜ್ಯದಲ್ಲಿ ಖಾಲಿಯಿದೆ. ಹಳ್ಳಿಗಲ್ಲಿ ಮದ್ಯಪಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಆಹಾಕಾರದ ಬಗ್ಗೆ ಯಾವಿದೇ ಕ್ರಮವಿಲ್ಲ. ನಾಳೆ ಬಜೆಟ್ ಮಂಡನೆಯಲ್ಲಿ ಸಿಎಂನವರು ಹೊಸ ತೆರಿಗೆ ಹಾಕದೆ ಹಾಕಿರುವ ತೆರಿಗೆ ಕಡಿಮೆಗೊಳಿಸಬೇಕೆಂದರು.
ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್ ಮಾತನಾಡಿ, ಗೃಹಲಕ್ಷ್ಮೀ ಹಣವು ನಾಲ್ಕೈದು ತಿಂಗಳಿಂದ ಬಾಕಿ ಉಳಿದಿದೆ. ಗೃಹಲಕ್ಷ್ಮೀ ಹಣವನ್ನ ಬೈಎಲೆಕ್ಷನ್ ವೇಳೆ ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಯುವನಿಧಿ ಹಣ ಯಾರಿಗೂ ಬರ್ತನೇ ಇಲ್ಲ. ಗ್ಯಾರೆಂಡಿ ಮೋಸದ ಗ್ಯಾರೆಂಟಿಯಾಗಿದೆ. ಹೇಳಿದ್ದೊಂದು ಮಾಡಿದ್ದೊಂದು ಸರ್ಕಾರವಾಗಿದೆ ಎಂದರು.
ಗ್ಯಾರೆಂಟಿಯನ್ನ ತೆರಿಗೆ ವಸೂಲಿಯ ಮೂಲಕ ಮಾಡಲಾಗುತ್ತಿದೆ. ಪೊಲೀಸರಿಂದ ದಂಡ ವಸೂಲಿ ಮೂಲಕ ಹಣ ಸಂಗ್ರಹಿಸಲಾಗುತ್ತಿದೆ. ಮೋಸದ ಸರ್ಕಾರಕ್ಕೆ ದಿಕ್ಕಾರವನ್ನ ಪ್ರಸನ್ನ ಕುಮಾರ್ ಕೂಗಿದ್ದಾರೆ.
ಬಿಸಲಿಗೆ ಪ್ರತಿಭಟನಾಕಾರರು ಕಂಗಾಲು
ಪ್ರತಿಭಟನೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಜೆಡಿಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನ ಕುಳಿತಿದ್ದ ಪ್ರತಿಭಟನಾಕಾರರು ಬಿಸಿಲಿನ ಬೇಗೆಗೆ ಎದ್ದು ಹೋಗುತ್ತಿರುವ ದೃಶ್ಯಗಳು ಕಂಡು ಬರ್ತಿದ್ದವು.