MLA chenni press meet-ಹಿಂದೂ ನಾಯಕರನ್ನ ಹತ್ತಿಕ್ಕುವ ಕೆಲಸ ನಡೆಯುತ್ತಿದೆ-ಶಾಸಕ ಚೆನ್ನಿ

Suddilive|| shivamogga

MLA Channabasappa accused shivamogga district administration for ristriction of Muthslik to enter city.


MLA, Channabasappa, press Meet


45 ದಿನಗಳ ಕುಂಭಮೇಳದಲ್ಲಿ 66 ಕೋಟಿ 45 ಸಾವಿರ ಜನ ಭಾಗಿಯಾಗಿ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ಶಾಸಕ ಚೆನ್ನಬಸಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಡೀ ಕುಟುಂಬ ಸ್ನೇಹಿತರೊಂದಿಗೆ ಕುಂಭಮೇಳದಲ್ಲಿ ಭಾಗಿಯಾಗಿದ್ದೆವು. ಹೋಗುವ ಮುಂಚೆ ಹೇಗೆ ಎಂಬ ಅಳಕು ಅಲ್ಲಿಗೆ ಭಾಗಿಯಾದ ಮೇಲೆ ಯಾವ ಭಯ ಇರಲಿಲ್ಲ ಎಂದು ವಿವರಿಸಿದರು.

ಹಿಙದೂ ಸಮಾಜಕ್ಕೆ ದೊಡ್ಡ ಚೈತನ್ಯ ಮತ್ತು ಶಕ್ತಿ ತುಂಬಿದೆ. ಹಿಂದೂ ವಿರೋಧಿಗಳಿಗೆ ಇದು ಬೆರಗು ಮೂಡಿಸುವ ವಿಷಯವೂ ಹೌದು. ವಿದೇಶಿಗರು ತುಂಬ ಜನ ಇದ್ದರು. ವಸುದೈವ ಕುಟುಂಬಕಂ ಎಂಬಂತೆ ಕುಂಭ ನಡೆದಿದೆ. ವಿದೇಶಿಗರು ಭಾರತೀಯರು ಭಾಗಿಯಾಗಿ ಹಿರಿಯರ ಆಶಯದಂತೆ ಭಾರತ ವಿಶ್ವ ಗುರು ಆಗುತ್ತೆ ಎಂಬ ಮಾತಿಗೆ ಕೈಗನ್ನಡಿ ಆಗಿತ್ತು ಎಂದರು. 

ಯಾವುದೇ ಜಗಳಗಳು ನಡೆಯಲಿಲ್ಲ. ಉತ್ತರ ಭಾರತದ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಮತ್ತು ಅವರ ಅದಿಕಾರಿ ವರ್ಗ ಯಶಸ್ವಿಯಾಗಿ ಮೇಳ ನಡೆಸಿಕೊಟ್ಟಿದ್ದಾರೆ. ಇದಕ್ಕೆ ವಿಶೇಷ ಮಾರ್ಗದರ್ಶನ ಮಾಡಿದವರು ಪ್ರಧಾನಿ ಮೋದಿಯವರು ಎಂದರು.

ಕುಡಿಯುವ ನೀರು, ನೈರ್ಮಲ್ಯೀಕರಣದಲ್ಲಿ ಯೂಪಿ ಸರ್ಕಾರ ಅಚ್ಚುಕಟ್ಟಾಗಿ ನಿರ್ವಹಿಸಿದೆ. ಕೋಟಿಗಟ್ಟಲೆ ಜನ ಸ್ನಾನ ಮಾಡಿದರೂ ಕಲೂಷಿತಗೊಳ್ಳದಂತೆ ನಿರ್ವಹಿಸಿರುವುದು ಅಚ್ಚರಿ ತಂದಿದೆ. ಮೇಳಕ್ಕೆ ಮುನ್ನ ಮತ್ತು ನಂತರ ಹೇಗೆ ಇಟ್ಟುಕೊಳ್ಳಬೇಕು ಎಂದು ಯೋಗಿ ತೋರಿಸಿಕೊಟ್ಟಿದ್ದಾರೆ. ಸಿಎಂ ಯೋಗಿ ತಾಯಿ ಸ್ಥಾನದಲ್ಲಿ ನಿಂತು ಕೆಲಸ ಮಾಡಿದ್ದಾರೆ ಎಂದರು. 

75 ಸಾವಿರ ಪೊಲೀಸ್ ಸಿಬ್ವಂದಿ ನಿಯೋಜನೆ ಮಾಡಲಾಗಿತ್ತು. ಒಂದು ಸರ್ಕಾರ ಹೇಗೆ ನಡೆದುಕೊಳ್ಳಬೇಕಿತ್ತು ಎಂಬುದನ್ನ ಸಿಎಂ ಯೋಗಿ ತೋರಿಸಿದ್ದಾರೆ. 

ಇಡೀ ಹಿಂದೂ ಸಮಾಜಕ್ಕೆ ಶಕ್ತಿ ನೀಡುವ ಕೆಲಸ ಕುಂಭ ಮೇಳದಲ್ಲಿ ನಡೆದರೆ ಹಿಂದೂ ನಾಯಕರನ್ನ ಶಿವಮೊಗ್ಗ ನಗರಕ್ಕೆ ಪ್ರವೇಶಿಸದಂತೆ ತಡೆದ ಪ್ರಮೊದ್ ಮುತಾಲಿಕ್ ವಿರುದ್ಧ ಕಾಂಗ್ರೆಸ್ ವರ್ತನೆ ದುರ್ವರ್ತನೆಯಾಗಿದೆ ಎಂದು ಕಿಡಿ ಕಾರಿದರು. 

ಮಧ್ಯ ರಸ್ತೆಯಲ್ಲಿ ನಿಲ್ಲಿಸಿ ಎಳೆದಾಡುತ್ತೀರಿ. ನೋಟೀಸದ ನೀಡಿ ಗಡಿಯಲ್ಲಿ ತಡೆಯಬೇಕು. ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ ಎಂದು ದೂರಿದರು‌. ಪುಸ್ತಕ ಬಿಡುಗಡೆ ಮಾಡಲು ಬಂದ ಮುತಾಲಿಕ್ ರನ್ನ ತಡೆಹಿಡಿದಿದೆ.  ಒಂದು ಕಡೆ ಪುಸ್ತಕ ಮೇಳ ಮಾಡುವ ಸರ್ಕಾರ ಲವ್ ಜಿಹಾದ್ ಗೆ ಯಾಕೆ ನಿರ್ಬಂಧಿಸಲಾಗಿದೆ. 

ಬೆಂಕಿ ಹಚ್ಚಲು ಬರುವವರನ್ನ ನಾವೂ ಬಿಡಲ್ಲ‌ ಹಿಂದೂ ಸಮಾಜವನ್ನ ಬಗ್ಗುಬಡೆಯುವ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದೆ. ಮರಳು ಮಾಫಿಯಾ, ಡ್ರಗ್ ಮಾಫೀಯಾದವರನ್ನ ಕೈಬಿಟ್ಟು ಮಾಡಬಾರದ ಕೆಲಸ ಮಾಡುವರನ್ನ ರಕ್ಷಣೆ ಮಡುತ್ತೀರಿ. ಸತ್ಗ ಹೇಳಲು ಬರುವರನ್ನ ತಡೆಯುತ್ತೀರಿ. ಹಿಂದೂ ನಾಯಕರನ್ನ ಅಪಮಾನ ಮಾಡುವ ರಾಜ್ಯ ಸರ್ಕಾರದ ನಿಲುವನ್ನ ಖಂಡಿಸುವುದಾಗಿ ತಿಳಿಸಿದರು. 

ಎಸ್ಪಿ ಕಳುಹಿಸಿಕೊಡುವ ಪ್ರೊಸೀಜರ್ ನ್ನ ನಾನು ನಿಭಾಯಿಸಿದ್ದೇನೆ ಎಂದು ಡಿಸಿ ಹೇಳುತ್ತಾರೆ. ರಕ್ಷಣಾಧಿಕಾರಿಗಳು ಒತ್ತಡದಲ್ಲಿ ನಿರ್ಬಂಧಿಸಿದ್ದಾರೆ. ನಾಲ್ಕು ಜಿಲ್ಲೆಯಲ್ಲಿ ಇಲ್ಲದ ನಿರ್ಬಂಧ  ಶಿವಮೊಗ್ಗದಲ್ಲಿ ಯಾಕೆ ಎಂದು ಶಾಸಕರು ಪ್ರಶ್ನಿಸಿದರು. 

ಆಶ್ರಯ ಮನೆಗಳನ್ನ ಕೊಡಿಸಲು 50 ಸಾವಿರ ರೂ ಲಂಚ ಪಡೆದಿರುವುದನ್ನ‌ಕೇಳಿದ್ದೇನೆ. ಆವರನ್ನ‌ಭಗವಂತನೂ ಕ್ಷಮಿಸೊಲ್ಲ. 574 ಮನೆಗಳನ್ನ ಮೂರು ತಿಂಗಳಲ್ಲಿ ನೀಡಲಾಗುವುದು ಒಂದು ವರ್ಷದಲ್ಲಿ 3 ಸಾವಿರ ಮನೆಗಳನ್ನ ನೀಡಲಾಗುವುದು ಎಂದರು. 

ಬ್ಯಾಂಕ್ ಸಹಕಾರವನ್ನ ಪಡೆದು ಸಭೆ ಸಂಸದರನೇತೃತ್ವದಲ್ಲಿ ನಡೆಸಲಾಗಿದೆ. ಫೈನಾನ್ಸ್ ಗಳಿಂದ ಸಾಲ ಪಡೆಯುವ ಅವಕಾಶವನ್ನ ಕಲ್ಪಿಸಲಾಗಿದೆ. 

ಮುನಿರತ್ನ ಮತ್ತು ಡಿಕೆಶಿ ನಡುವೆ ಕಬ್ಬಡಿ ಆಡಿದರೆ ನಾನು ಏನು ಮಾಡಲಿ? ಹಿಂದೂ ಆಗಿ ಹುಟ್ಟಿ ಹಿಂದೂ ಆಗಿ ಸಾಯ್ತೀನಿ ಎಂದಿರುವುದು ಸ್ವಾಗತಾರ್ಹ. ಡಿಕೆಶಿ ಮಹಾರಾಷ್ಟ್ರದಲ್ಲಿ ಶಿಂಧೆಯ ಪಾತ್ರ ವಹಿಸಲಿದ್ದಾರೆ ಎಂಬ ಮಾತಿದೆ ಎಂಬ ಮಾತಿಗೆ ಮುಗಳ್ನಗೆ ಬೀರಿದ ಶಾಸಕರು ಸಿದ್ದರಾಮಯ್ಯ ಸರ್ಕಾರ ಡಿಕೆಶಿಗೆ ಅಧಿಕಾರ ಬಿಟ್ಟುಕೊಟ್ಟರೆ ಸರ್ಕಾರ ಸರಿಯಾಗಿ ನಡೆದುಕೊಳ್ಳಲಿದೆ. ಇಲ್ಲವಸದಲ್ಲಿ ಪಥನವಾಗಬಹಿದು. ಅದರಲ್ಲಿ ಬಿಜೆಪಿ 

ರಾಜ್ಯ ಸರ್ಕಾರ ದತ್ತಿ ನಿಧಿ ಪ್ರಶಸ್ತಿ ಪಡೆದ ಪತ್ರಕರ್ತ ಗಿರೀಶ್ ಉಮ್ರಾಯ್, ಸಂಯುಕ್ತ ಕರ್ನಾಟಕದ ಪತ್ರಕರ್ತೆ ಕವಿತಾ, ವಿಜಯ ಕರ್ನಾಟಕದ ಚಂದ್ರಶೇಖರ್ ಶೃಂಗೇರಿ ಅವರಿಗೆ ಪ್ರಶಸ್ತಿ ದೊರೆತಿದೆ ಅವರಿಗೆ ಧನ್ಯವಾದಗಳನ್ನ ತಿಳಿಸುವುದಾಗಿ ತಿಳಿಸಿದರು. ವಿನಾಯಕ ಬಾಯರಿ ಅವರ ನಿಧನಕ್ಕೆ ಶಾಸಕ ಚೆನ್ನಬಸಪ್ಪ ಸಂತಾಪ ಸೂಚಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close