Raitha sangha alerts-ರೈತ ಸಂಘದಿಂದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ!

 suddilive || Shivamogga


Raitha sangha alerts state government to fulfill the demands of raitha sangha which was given assured during election

Raitha sangha, Alerts



ರೈತರ ಕಾರ್ಮಿಕರ ಸಮಸ್ಯೆಗಳನ್ನ ರಾಜ್ಯ ಸರ್ಕಾರ ಬಗೆಹರಿಸದೆ ಕೇವಲ ಗ್ಯಾರೆಂಟಿ ಜಾರಿ ಮಾಡಿದ್ದನ್ನೇ ಸಾಧನೆ ಎಂದು ಬಿಂಬಿಸುತ್ತಿದ್ದು ಇದರ ವಿರುದ್ಧ ರಾಜ್ಯ ರೈತ ಸಂಘ ಸಂಯುಕ್ತ ಹೋರಾಟ ಕರ್ನಾಟಕಾ ಅಡಿ ಹೋರಾಡಲಾಗುತ್ತಿದೆ. 

ಸುದ್ದಿಗೋಷ್ಠಿ ನಡೆಸಿದ ರಾಜ್ಯ ರೈತ ಸಂಘದ ಅಧ್ಯ ಹೆಚ್ ಆರ್ ಬಸವರಾಜಪ್ಪ, ನಮ್ಮ ಚಳುವಳಿಯಲ್ಲಿ ಹೋರಾಡಿದ ಸಿದ್ದರಾಮಯ್ಯ, ಪ್ರನಾಳಿಕೆಯಲ್ಲಿ ಸೇರಿಸಿಕೊಂಡರು. ಈಗ   ಕೃಷಿ ಮೂರು ಕಾಯ್ದೆಯನ್ನ ಹಿಂಪಡೆಯುವುದು ಸೇರಿದಂತೆ 12 ಅಂಶಗಳನ್ನ ರಾಜ್ಯ ಸರ್ಕಾರಕ್ಕೆ ನೀಡಿದ್ದೇವೆ.  ಮಾಡುವ ಭರವಸೆ ನೀಡಿದ  ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರಿದರು. 

ಟಿಸಿ ಕೆಟ್ಟು ಹೋದರೆ ಬದಲಿಸಿ ಹೊಸ ಟಿಸಿ ಕೂರಿಸಲು ರಾಜ್ಯ ಸರ್ಕಾರದಲ್ಲಿ ಹಣವಿಲ್ಲ. ಇಂತಹ ಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ. ಬೇಸಿಗೆಯನ್ನ ಹೇಗೆ ಎದುರಿಸುತ್ತಾರೆ ಗೊತ್ತಿಲ್ಲ ಎಂದು ದೂರಿದರು. 

ಬಜೆಟ್ ನಲ್ಲಿ ನಮ್ಮ 12 ಅಂಶ ಮತ್ತು ಮೂರು ಕೃಷಿ ಕಾಯ್ದೆ ಹಿಂಪಡೆಯುವ ಬಗ್ಗೆ ಕ್ರಮ ಜರುಗಿಸದೆ ಇದ್ದರೆ ಮತ್ತೆ ನಮ್ಮ ಸಂಘಟನೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.  

ಸಿಐಟಿಯು ಜಿಲ್ಲಾ ಸಂಚಾಲಕ ನಾರಾಯಣ ಎಂ‌ ಮಾತನಾಡಿ, ಏ.1ರಿಂದ ಕೇಂದ್ರ ಸರ್ಕಾರ ಮತ್ತೆ ಒತ್ತಡದಿಂದ ಕಾರ್ಮಿಕ ಕಾಯ್ದೆ ಜಾರಿಗೊಳಿಸಲು ಮುಂದಾಗಿರುವುದನ್ನ ಖಂಡಿಸಿ ದೆಹಲಿಯಲ್ಲಿ ಪ್ರತಿಭಟಿಸಲಾಗುವುದು ಎಂದರು. 

ಸುದ್ದಿಗೋಷ್ಠಿಯಲ್ಲಿ ಹಿಟ್ಟೂರು ರಾಜು, ನಾರಾಯಣ ಎಂ, ಕಸೆಟ್ಟಿ ರುದ್ರೇಶ್, ಪಿ.ಶೇಖರಪ್ಪ, ಡಿ.ಎಸ್ ಜಯಣ್ಣ ಮೊದಲಾದವರು ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close