Road accident near freedom park-ಫ್ರೀಡಂ ಪಾರ್ಕ್ ಬಳಿ ಸರಣಿ ರಸ್ತೆ ಅಪಘಾತ

 Suddilive || Shivamogga


Serial road accident in front of freedom park in shimoga, loses of life and injuries were not reported

Road, accident


ನಗರದ ವಿನೋಬ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಫ್ರೀಡಂ ಪಾರ್ಕ್ ನ ಮುಂಭಾಗದ ರಸ್ತೆಯಲ್ಲಿ ಸರಣಿ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸಾವು ನೋವುಗಳು ಸಂಭವಿಸದಿದ್ದರೂ ವಾಹನಗಳು ನುಜ್ಜುಗುಜ್ಜಾಗಿವೆ. 

ಒಂದು ಬಸ್ ಮತ್ತು ಎರಡು ಕಾರುಗಳ ನಡುವೆ ಡಿಕ್ಕಿ ಉಙಟಾಗಿದ್ದು, ಪರಿಣಾಮ ಎರಡು ಕಾರುಗಳು ನುಜ್ಜುಗುಜ್ಜಾಗಿವೆ. ಮುಂದೆ ಸಾಗುತ್ತಿದ್ದ ಸೆಲೆರಿಯೋ ಕಾರಿನ ಚಾಲಕ ಅಡ್ಡ ಬಂದ ವಾಹನಗಳಿಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಹೋಗಿ ಬ್ರೇಕ್ ಹಾಕಿದ್ದಾರೆ. 

ಇದರಿಂದಾಗಿ ಹಿಂಬದಿಯಲ್ಲಿದ್ದ ಇಟಿಯಸ್ ಕಾರು ಸಹ ಬ್ರೇಕ್ ಹಾಕಿದೆ. ಆದರೆ ಹಿಂಬದಿಯಲ್ಲಿದ್ದ ಖಾಸಗಿ ಬಸ್ ಮಧ್ಯದ ಇಟಿಯಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಕಾರಿನ ಹಿಂಭಾಗ ಸಂಪೂರ್ಣ ಜಕಂ ಆಗಿದೆ. ನಿಯಂತ್ರಣ ಕಳೆದುಕೊಂಡ ಇಟಿಯಸ್ ಕಾರು ಸೀದಾ ಸೆಕೆರಿಯೋ ಕಾರಿಗೆ ಡಿಕ್ಕಿ ಹೊಡೆದಿದೆ. ಹಿಂಭಾಗ ವಾಹನ ನುಜ್ಜುಗುಜ್ಜಾಗಿದೆ.

ಆದರೆ ಸಾವುಗಳಾಗಲಿ ಅಥವಾ ನೋವುಗಳಾಗಲಿ ಸಂಭಿಸಿಲ್ಲ. ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಬೇಕಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close