Suddilive || Shivamogga
Traffic police who is relation to auto driver, is harassing him to vacate the house
ಟ್ರಾಫಿಕ್ ಪೂರ್ವ ಸಂಚಾರಿ ಪೋಲೀಸರೊಬ್ಬರು ಮಾನಸಿಕ, ದೈಹಿಕ ಕಿರುಕುಳ ಕೊಡುತ್ತಿದ್ದು ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಎಸ್ಪಿ ಮಿಥುನ್ ಕುಮಾರ್ ಗೆ ನೊಂದ ಆಟೋ ಚಾಲಕ ಮನವಿ ಸಲ್ಲಿಸಿದ್ದಾರೆ.
ಸಂಬಂಧಿಯಾಗಿರುವ ಶಾಂತವೀರಪ್ಪ ನವರು ಟ್ರಾಫಿಕ್ ಪೂರ್ವ ಸಂಚಾರಿ ಠಾಣೆಯಾಗಿ ಪೋಲೀಸ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಮತ್ತು ದಿವಂಗತ ದೊಡ್ಡಬಸಪ್ಪ. ಎಂ ಸೇರಿಕೊಂಡು ವಿನೋಬನಗರ, 4ನೇ ತಿರುವು, 2ನೇ ಹಂತ, ನರಸಿಂಹ ಬಡಾವಣೆ, ಶಿವಮೊಗ್ಗ, ಇಲ್ಲಿ 20 X 30 ರ ಅಳತೆಯ ಒಂದು ಮನೆಯನ್ನು ಖರೀದಿಸಿದ್ದಾರೆ.
ಸಹೋದರ ದೊಡ್ಡಬಸಪ್ಪ ಮತ್ತು ಚಾಲಕ ಮರಗಿ ಶೇಖರಪ್ಪ ಬದುಕಿರುವವರೆಗೂ ಅನೂನ್ಯವಾಗಿದ್ದು ಮನೆಯ ನೆಲ ಮಹಡಿಯಲ್ಲಿ ನನ್ನ ತಮ್ಮನ ಕುಟುಂಬ ಹಾಗೂ ಮಹಡಿ ಮನೆಯಲ್ಲಿ ಮರಗಿ ಶೇಖರಪ್ಪನವರ ಕುಟುಂಬ ವಾಸವಾಗಿತ್ತು.
ಆದರೆ ದೊಡ್ಡಬಸಪ್ಪನ ಹೆಂಡತಿ ಅನ್ನಪೂರ್ಣಮ್ಮ ಕೋಂ ಲೇಟ್ ದೊಡ್ಡಬಸಪ್ಪ, ಎಂ. ರವರಿಗೆ ನಂಬಿಸಿ 2018-19 ನೇ ಸಾಲಿನಲ್ಲಿ ಶಾಂತವೀರಪ್ಪ ಬಿನ್ ಬಸವರಾಜಪ್ಪ ಈತ ಮರಗಿ ಶೇಖರಪ್ಪ ಮತ್ತು ಇವರ ಸಹೋದರನ ಕುಟುಂಬ ಬ ಅಸವಾಗಿರುವ ಮನೆಯ ಮೇಲೆ ಸುಮಾರು 8 ಲಕ್ಷ ರೂಗಳ ಸಾಲ ಪಡೆದಿದ್ದು, ಈ ವಿಷಯವನ್ನ ಶೇಖರಪ್ಪನವರ ತಂದೆ ತಾಯಿ ಗಮನಕ್ಕೆ ತಂದಾಗ ಸಾಲ ಮಾಡಿಕೊಂಡಿದ್ದು ಸರಿಯಾದ ಮೇಲೆ ಮಾತನಾಡೋಣ ಎಂದು ಮರಗಿ ಶೇಖರಪ್ಪನವರು ಸಮಾಧಾನಗೊಂಡಿದ್ದರು.
ಈ ವೇಳೆ ನಡೆದ ಮಾತುಕತೆಯಲ್ಲಿ ಶಾಂತವೀರಪ್ಪನಿಗೆ ಕೆಲವು ವಿಚಾರವಾಗಿ ಮಾತನಾಡಿರುವುದು ಜಿದ್ದಾಗಿ ಸಾಧಿಸಲು ನೋಡುತ್ತಿರುವುದಾಗಿ ದೂರಿದ್ದಾರೆ. ಶಾಂತವೀರಪ್ಪ ಶಿವಮೊಗ್ಗದಲ್ಲಿ ಆಟೋಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿರುವಾಗ ಸಿಕ್ಕಿದಾಗ ಬೈಯ್ಯುವುದು, ಹೆದರಿಸುವುದು, ಬಟ್ಟೆ ಹಿಡಿದು ಎಳೆದಾಡುವುದು, ಬೂಟು ಕಾಲಿನಲ್ಲಿ ಹೊದೆಯುತ್ತೇನೆ ಎಂದು ಕಾಲೆತ್ತುವುದು ಮಾಡುತ್ತಿರುವುದಾಗಿ ಶೇಖರಪ್ಪ ಮನವಿಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಶಾಂತವೀರಪ್ಪ, ತಮ್ಮನ ಹೆಂಡತಿ ಅನ್ನಪೂರ್ಣಮ್ಮರವರಿಗೆ ಹೇಳಿ ನಾನು ವಾಸವಿರುವ ಮನೆಯಿಂದ ಖಾಲಿ ಮಾಡಿಸಲು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದಾನೆ. ಮನೆ ಖಾಲಿ ಮಾಡು ಮನೆ ಖಾಲಿ ಮಾಡು ಎಂದು ಅನ್ನಪೂರ್ಣಮ್ಮ ಮತ್ತು ಮಕ್ಕಳು ಪ್ರತಿನಿತ್ಯ ನನಗೆ ಮತ್ತು ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ. ಈ ಸಂಬಂಧ ನಾವು ಪಂಚಾಯತಿ ಸೇರಿ ನಾನು ಈ ಹಿಂದೆ ಮನೆ ಖರೀದಿ ಮಾಡಲು ನನ್ನ ತಮ್ಮನೊಂದಿಗೆ ಹಾಕಿರುವ ಹಣವನ್ನು ಕೊಡಬೇಕು ಇಲ್ಲದ ಪಕ್ಷದಲ್ಲಿ ಯತಾ ಪ್ರಕಾರ ವಾಸ ಮಾಡಲು ಬಿಡಬೇಕು ಎಂದು ತೀರ್ಮಾನಿಸಿದ್ದೇವೆ. ಆದರೆ ಶಾಂತವೀರಪ್ಪ ಪಞಮಚಾಯಿತಿ ನಡೆಸಿದವರೊಂದಿಗೆ ಶಾಮೀಲಾಗಿ ಮನೆ ಖಾಲಿ ಮಾಡಿ ಹಣ ನೀಡುವುದಾಗಿ ಒತ್ತಡ ನೀಡುತ್ತಿದ್ದಾರೆ.
ಈಗ ಹಣನೂ ಕೊಡದೇ ದಬ್ಬಾಳಿಕೆಯಿಂದ ಶಾಂತವೀರಪ್ಪ ವಿನೋಬನಗರ ಠಾಣೆಯ ಪೋಲೀಸರಿಗೆ ಹೇಳಿ ಮನೆ ಖಾಲಿ ಮಾಡಿಸುತ್ತೇನೆ ಎಂದು ದಮ್ಮಿ ಹಾಕುತ್ತಿದ್ದಾನೆ. ದಯಮಾಡಿ ನ್ಯಾಯ ಕೊಡಿಸುವಂತೆ ಮನವಿಯಲ್ಲಿ ಶೇಖರಪ್ಪ ಎಸ್ಪಿಯವರಿಗೆ ಮನವಿ ಸಲ್ಲಿಸಿದ್ದಾರೆ.