Suddilive || Shivamogga
Three arrested in case of theft of vehicle and money while going to Namaz-ನಮಾಜ್ ಗೆ ಹೋದ ವೇಳೆ ವಾಹನ ಮತ್ತು ನಗದು ಕಳವು ಮೂವರು ಬಂಧನ
ನಮಾಜ್ ಮುಗಿಸಿಕೊಂಡು ಬರುವ ಹೊತ್ತಿಗೆ ಲಕ್ಷಾಂತರ ರೂ. ಹಣದ ಸಮೇತ ಗೂಡ್ಸ್ ವಾಹನವನ್ನೇ ಮಂಗ ಮಾಯ ಮಾಡಿದ್ದ ಪ್ತಕರಣವನ್ನ ತೀರ್ಥಹಳ್ಳಿ ಪೊಲೀಸರು ಬೇದಿಸಿದ್ದಾರೆ.
ದಿನಾಂಕ: 14-03-2025 ರಂದು ಬೆಳಗ್ಗೆ ಹೊನ್ನಾಳಿ ಬೊಂಬು ಬಜಾರ್ ನ ಮಹಮದ್ ಇರ್ಷಾದ್, ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ರೂ 29,00,000/- (ಇಪ್ಪತ್ತ ಒಂಬತ್ತು ಲಕ್ಷ) ರೂಗಳನ್ನು ತೆಗೆದುಕೊಂಡು, ಸ್ಕ್ರಾಪ್ ವ್ಯವಹಾರದ ಸಂಬಂಧ ಹೊನ್ನಾಳಿಯಿಂದ ಮಂಗಳೂರಿಗೆ ಹೊರಟಿದ್ದರು.
ಮಾರ್ಗ ಮಧ್ಯೆ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಂಜದಕಟ್ಟೆ ಮಸೀದಿಯ ಹತ್ತಿರ ನಮಾಜ್ ಮಾಡುವ ಸಲುವಾಗಿ ವಾಹನವನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ, ಹಣವಿದ್ದ ಬ್ಯಾಗ್ ಅನ್ನು ವಾಹನದಲ್ಲಿಯೇ ಇಟ್ಟು ಮಸೀದಿಗೆ ನಮಾಜ್ ಮಾಡಲು ಹೋಗಿ ವಾಪಸ್ಸು ಬಂದು ನೋಡಿದಾಗ, ವಾಹನವು ಸ್ಥಳದಲ್ಲಿ ಇರಲಿಲ್ಲ, ರೂ 29,00,000/- ನಗದು ಹಣ ಹಾಗೂ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನವನ್ನು ಕಳುವ ಮಾಡಲಾಗಿತ್ತು. ಪ್ರಕರಣ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಪ್ರಕರಣದಲ್ಲಿ ಕಳುವಾದ ನಗದು ಹಣ, ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ಮತ್ತು ಆರೋಪಿತರ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಅಡಿಷನಲ್ ಎಸ್ಪಿಗಳಾದ ಅನಿಲ್ ಕುಮಾರ್ ಭೂಮರಡ್ಡಿ, ಕಾರಿಯಪ್ಪ ಎ. ಜಿ, ರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಅರವಿಂದ ಕಲಗುಜ್ಜಿ ರವರ ಮೇಲ್ವಿಚಾರಣೆಯಲ್ಲಿ ಪಿಐ ಇಮ್ರಾನ್ ಬೇಗ್, ನೇತೃತ್ವದಲ್ಲಿ ಪಿಎಸ್ಐ ಶಿವನಗೌಡ ಪಿಎಸ್ ಐ, ತೀರ್ಥಹಳ್ಳಿ ಪೊಲೀಸ್ ಠಾಣೆ, ಮತ್ತು ಸಿಬ್ಬಂದಿಗಳಾದ ಎಎಸ್ಐ ಲೋಕೇಶಪ್ಪ, ಹೆಚ್ ಸಿಗಳಾದಃ ಲಿಂಗೇಗೌಡ, ರಾಜಶೇಖರ್ ಶೆಟ್ಟಿಗಾರ್, ಸಿಪಿಸಿಗಳಾದಃ ರವಿ, ಪ್ರದೀಪ್, ಶ್ರೀ ಸುರೇಶ್ ನಾಯ್ಕ್, ಪ್ರಮೋದ್, ದೀಪಕ್, ಮಂಜುನಾಥ, ರಾಘವೇಂದ್ರ, ಕರ್ಣೇಶ್, ಚಾಲಕರಾದ ಅವಿನಾಶ್ ಹಾಗು ಜಿಲ್ಲಾ ಪೊಲೀಸ್ ಕಛೇರಿ ಎ.ಎನ್.ಸಿ ವಿಭಾಗದ ಗುರುರಾಜ್, ಇಂದ್ರೇಶ್ ಹಾಗೂ ವಿಜಯಕುಮಾರ ರವರುಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ತನಿಖಾ ತಂಡವು ಹೊನ್ನಾಳಿ ಪೊಲೀಸ್ ಠಾಣೆಯ ಸುನೀಲ್ ಕುಮಾರ ಹೆಚ್ ಪಿಐ, ಹರೀಶ್ ಎಎಸ್ಐ ಮತ್ತು ಸಿಬ್ಬಂದಿಗಳಾದ ಸಿ.ಹೆಚ್.ಸಿ ಜಗದೀಶ, ಹೇಮಾನಾಯ್ಕ್, ಸುರೇಶ್ ನಾಯ್ಕ್ ಮತ್ತು ರಾಜಶೇಖರ್ ರವರ ಸಹಕಾರದೊಂದಿಗೆ ಆಪರೇಷನ್ ನಡೆಸಿದ್ದವು.
ಪ್ರಕರಣದ ಆರೋಪಿಗಳಾದ 1) ಸೈಯದ್ ಅಬ್ದುಲ್ಲಾ, 45 ವರ್ಷ, ನೂರಾನಿ ಮಸೀದಿ ಹತ್ತಿರ, ಹೊನ್ನಾಳಿ, ದಾವಣಗೆರೆ, 2) ನವೀದ್ ಅಹಮದ್, 40 ವರ್ಷ, ಹೊನ್ನಾಳಿ ಟೌನ್, ದಾವಣಗೆರೆ ಮತ್ತು 3) ಜಾವೀದ್, 42 ವರ್ಷ, ನೂರಾನಿ ಮಸೀದಿ ಹತ್ತಿರ, ಹೊನ್ನಾಳಿ, ದಾವಣಗೆರೆ ರವರುಗಳನ್ನು ಬಂಧಿಸಿದ್ದಾರೆ.
ಆರೋಪಿತರಿಂದ 29 ಲಕ್ಷ ರೂ ನಗದು ಹಣ ಹಾಗೂ ಅಂದಾಜು ಮೌಲ್ಯ 10,00,000/- ರೂಗಳ ಅಶೋಕ್ ಲೈಲಾಂಡ್ ವಾಹನ ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 6,00,000/- ಟೊಯೋಟಾ ಇಟಿಯೋಸ್ ಕಾರು ಸೇರಿ ಒಟ್ಟು 45,00,000/- ರೂ ಮೌಲ್ಯದ ನಗದು ಹಣ ಮತ್ತು ವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.