Akhila Karnataka Brahmana mahasabha election-ಭಾನುಪ್ರಕಾಶ್ ಶರ್ಮರ ಪರ ಅಶೋಕ್ ಹಾರನಹಳ್ಳಿ ಮತಯಾಚನೆ

 Suddilive || Shivamogga

Akhila Karnataka Brahmana mahasabha election, Banuprakash Sharma is compete for election. 

Akhila Karnataka, Bhrahmana Mahasabha

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಚುನಾವಣೆಯಲ್ಲಿ ಭಾನುಪ್ರಕಾಶ್ ಶರ್ಮರನ್ನ ಗೆಲ್ಲಿಸುವಂತೆ ಹಾಲಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಕ್ಕೆ ಮೂರು ವರ್ಷಗಳ ಹಿಂದೆ ಎರಡನೇ ಬಾರಿಗೆ ಅಧ್ಯಕ್ಷನಾಗಿದ್ದೆ. ಈ ಬಾರಿ ಚುನಾವಣೆ ಸ್ಪರ್ಧಿಸುತ್ತಿಲ್ಲ. ಚುನಾವಣೆ ಸ್ಪರ್ಧಿಸದೆ ಇದ್ದರೂ ಶ್ರೀರಂಗ ಪಟ್ಟಣದ ಭಾನುಪ್ರಕಾಶ್ ಶರ್ಮರಿಗೆ ಬೆಂಬಲ ಸೂಚಿಸಿದ್ದೇವೆ ಎಂದರು. 

ಏ.13 ರಂದು ಚುನಾವಣೆ ನಡೆಯಲಿದ್ದು ಶಿವಮೊಗ್ಗದಲ್ಲಿ  ನಮ್ಮ ಪ್ರತಿನಿಧಿಯಾಗಿ ಸಾಗರದ ಮಾಜಿ  ಶಾಸಕ ಎಲ್ ಟಿ ತಿಮ್ಮಪ್ಪ ಅವರ ಪುತ್ರ ತಿಮ್ಮಪ್ಪನವರು ಕಣಕ್ಕಿಳಿಯಲಿದ್ದಾರೆ. 

ನಮ್ಮ ಅವಧಿಯಲ್ಲಿ ಸಮುದಾಯಕ್ಕೆ ಸಾಕಷ್ಟು ಕೆಲಸ ಮಾಡಿದ್ದೇವೆ. ರಾಷ್ಟ್ರೀಯ ಸಮ್ಮೇಳನವನ್ನ ಮಾಡಲಾಗಿದೆ. ಜಾತಿ ಗಣತಿ ಬಹಿರಂಗಗೊಂಡಿಲ್ಲ. ಆದರೂ ಬ್ರಾಹ್ಮಣರ ಜನಸಂಖ್ಯೆಯನ್ನ ತಪ್ಪಾಗಿ ಕೊಡಲಾಗುತ್ತಿದೆ. ಬ್ರಾಹ್ಮಣರು 15 ಲಕ್ಷ  ಎಂದು ಹೇಳಲಾಗುತ್ತಿದೆ. ಆದರೆ ನಾವು 47 ಲಕ್ಷ ಜನ ಸಂಖ್ಯೆಯಿದೆ. ಜಾತಿಗಣತಿಗೆ ಯಾವ ಅಧಿಕಾರಿಗಳು ಮನೆಗೆ ಬಂದಿರುವುದನ್ನ‌ ಜನ ಮಾತನಾಡುತ್ತಿಲ್ಲ. ಹಾಗಾಗಿ ಜಾತಿಗಣತಿಯಲ್ಲಿ ಬ್ರಾಹ್ಮಣರ ಜನ ಸಂಖ್ಯೆ ಹೆಚ್ಚಿದೆ ಎಂದರು. 

ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳಿಗೆ ಹಾಗೂ ಬಡ ಮಹಿಳೆಯರಿಗೆ ಹಾಸ್ಟೆಲ್ ನಿರ್ಮಿಸಲಾಗಿದೆ. ವಿದ್ಯಾರ್ಥಿ ವೇತನವನ್ನ ಕೊಡಲಾಗುತ್ತಿದೆ. ಗಂಡು ಮಕ್ಕಳಿಗೂ ಈ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು. 

ಬ್ರಾಹ್ಮಣರ ಅಸ್ಥಿತ್ವಕ್ಕೆ ಹೋರಾಡುವ ಪತಿಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿಯಿಂದ ಹೊರಬರಬೇಕಿದೆ ಎಂದರು. ಭಾನುಪ್ರಕಾಶ್ ಶರ್ಮ ಮಾತನಾಡಿ ಚುನಾವಣೆ ಹಿನ್ನಲೆಯಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಕೊಪ್ಪಳ, ಗದಗ, ಬಾಗಲಕೋಟೆ ಮೊದಲಾದ ಕಡೆ ಚುನಾವಣೆ ಪ್ರಚಾರ ಕೈಗೊಂಡಿದ್ದೇವೆ. ಕಳೆದ ಬಾರಿ ಸ್ವಂತತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಈ ಬಾರಿ ಅಶೋಕ ಹಾರನಹಳ್ಳಿ ಅವರ ಕಡೆಯಿಂದ ಸ್ಪರ್ಧಿಸುತ್ತಿದ್ದೇನೆ ಎಂದರು. 

ಶಿವಮೊಗ್ಗದಲ್ಲಿ 3671 ಮತಗಳಿವೆ. ಸದಸ್ಯತ್ವ ಪಡೆದು ಒಂದು ವರ್ಷದ ನಂತರ ಚುನಾವಣೆಯಲ್ಲಿ ಮತಹಾಕಲು ಸದಸ್ಯರಿಗೆ ಅವಕಾಶಕಲ್ಪಿಸಲಾಗಿದೆ. ರಾಜ್ಯದಲ್ಲಿ 70 ಸಾವಿರ ಮತದಾರರಿದ್ದಾರೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close