ಶರಾವತಿ ನದಿನೀರು ಉಳಿಸಿ ಮಾ.19 ರಂದು ಪ್ರತಿಭಟನೆ-Save the Sharavathi River Valley

suddilive || shivamogga

The Sharavathi River has been flooded twice. In 2017 and 2023. Therefore, the Save the Sharavathi River Valley Struggle Association has decided to hold a protest in Shivamogga on March 19.

Sharavthi river, save

ಶರಾವತಿ ನದಿಗೆ ಎರಡು ಬಾರಿ ಕುತ್ತು ಬಂದಿದೆ. 2017 ಮತ್ತು 2023 ರಂದು ಬಂದಿದೆ. ಹಾಗಾಗಿ ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟ ಮಾ.19 ರಂದು ಶಿವಮೊಗ್ಗದಲ್ಲಿ ಪ್ರಯಿಭಟನೆ  ನಡೆಸಲು ತೀರ್ಮಾನಿಸಲಾಗಿದೆ. 

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಪರಿಸರವಾ್ಇ ಅಖಿಲೇಶ್ ಚಿಪ್ಲಿ, ಶರಾವತಿ ಅಂತರ್ಗತ ಜಲವಿದ್ಯುತ್ಯೋಜನೆ ಮತ್ತು ಶರಾವತಿ ನದಿಯನ್ನ ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆ ವಿರುದ್ಧ ಈ ಹೋರಾಟವಾಗಿದೆ. 

ಯಾವುದೇ ನೀತಿ ನಿಯಮವನ್ನ ಅನುಸರಿಸದೆ ಅಂತರ್ಗತ ಜಲವಿದ್ಯುತ್ ಉತ್ಪಾದನೆ ಯನ್ನ ಮಾಡಲು ಕೆಪಿಟಿಸಿಎಲ್ ಮುಂದಾಗಿದೆ. ಆರ್ ಟಿಐ ನಲ್ಲಿ ಡಿಪಿಆರ್ ಕೇಳಿದಾಗ ವೈಯುಕ್ತಿಕ ಎಂದು ಹೇಳಲಾಗಿದೆ.ಯೋಜನೆಯನ್ನ  ಕೃತಿಕ್ಷೌರ್ಯ ಮಾಡಲಾಗುತ್ತದೆ ಎಂದು ಕೆಪಿಟಿಎಸ್ ಹೇಳಿದೆ. ಆಯೋಗದ ಮುಂದೆ ಅಪೀಲ್ ಆಗಲಿದ್ದು ಯೋಜನೆ ಡಿಪಿಆರ್ ಕೈಸೇರಲಿದೆ ಎಂದ ಅವರು   ಕೆಪಿಸಿಎಲ್ ಉದ್ದಕ್ಕೂ ಸುಳ್ಳು ಹೇಳಿಕೊಂಡು ಬರುತ್ತಿದೆ. 

ಹೊನ್ನಾವರದಲ್ಲಿ ತರಕಾರಿ ಬೆಳೆಯಲು ಸಿಹಿನೀರು ಬೇಕು. ಈ ನದಿಯ ನೀರು ಬಳಕೆ ಮಾಡಲಾಗುತ್ತಿದೆ. ಸಾವಿರಾರು ಕುಟುಂಬ ಬೀದಿಪಾಲಾಗಿದೆ. ಬೆಂಗಳಯರಿನ ಮಾಲ್ ಗೆ ಜಗಮಗಿಸುವ ವಿದ್ಯುತ್ ಬೇಕಿದೆ ಅಷ್ಟೆ. ನ್ಯಾಷನಲ್ ವೈಲ್ಡ್ ಲೈಫ್ ಅನುಮೋದನೆ ನೀಡಿದೆ. ಎರಡು ಎರಡು ಬಾರಿ ಸ್ಥಳಪರಿಶೀಲನರ ಬಡೆಸಿ ಆರ್ ಎಫ್ ಒಗಳ ವರದಿ ತಿರಸ್ಕರಿಸಿ ಒಪ್ಪಿಗೆ ನೀಡಿದೆ. 

ಎತ್ತಿನಹೊಳೆ ಯೋಜನೆಯಂತೆ ಇದೊಂದು ಕರೆಯುವ ಎಮ್ಮೆಯ ಯೋಜನೆಯಾಗಿದೆ. ತಮಿಳುನಾಡಿನಲ್ಲಿ ಒಂದು ಮರವನ್ನ ನಾಶ ಮಾಡದೆ ಅಂತರ್ಜಲ ವಿದ್ಯುತ್ ಯೋಜನೆ ನಿರ್ಮಿಸಲಾಗಿದೆ. ಅದನ್ನ ಬಳಸದೆ ಪಂಪ್ಡ ಯೋಜನೆ ಮಾಡಲಾಗಿದೆ. ಬೆಂಗಳೂರಿಗೆ ಸರಬರಾಜು ಮಾಡಲು ಕಂಬ ಹೇಗೆ ಹಾಕ್ತೀರಿ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲವಾಗಿದೆ. ತೆರಿಗೆ ಹಣ ದುರುಪಯೋಗ ಮಾಡುವ ಯೋಜನೆ ಆಗಿದೆ.

ವಿದ್ಯುತ್ ಉತ್ಪಾದನೆಗೆ ಪರ್ಯಾಯ ವಿದ್ಯುತ್ ಉತ್ಪಾದನೆಗೆ ಅವಕಾಶವಿದೆ. ಪರಿಸರ ನಾಶದ ಯೋಜನೆಯೇ ಸರ್ಕಾರಕ್ಕೆ ಬೇಕಿದೆ. ಹಾಗಾಗಿ ಹೋರಾಟವನ್ನ ಮಾ.19 ರಂದು ಗೋಪಿ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಾಗುವುದು. ಮೂಲಗದ್ದೆ, ಆನಂದಪುರ ಬೆಕ್ಕಿನ ಕಲ್ಮಠ ಶ್ರೀಗಳು ಭಾಗಿಯಾಗಲಿದ್ದಾರೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಮನವಿ ಮಾಡಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close