Suddilive || Shivamogga
FIR against four people for bringing deadly weapons to court, ಕೋರ್ಟ್ ನಲ್ಲಿ ಮಾರಕಾಸ್ತಗಳನ್ನ ಹಿಡಿದು ಬಂದ ಪ್ರಕರಣ ನಾಲ್ವರ ವಿರುದ್ಧ ಎಫ್ಐಆರ್
ಶಿವಮೊಗ್ಗದ ನ್ಯಾಯಾಲಯದಲ್ಲಿ ಆಯುಧಗಳನ್ನ ಹಿಡಿದು ತಂದ ಪ್ರಕರಣದಲ್ಲಿ ಪೊಲೀಸರು ನಾಲ್ವರನ್ನ ಬಂಧಿಸಿದ್ದಾರೆ. ವಿನೋಬ ನಗರದ ಮಲ್ಲೇಶ್, ಕಾಶೀಪುರದ ರಾಕೇಶ್, ಮೇದಾರಕೇರಿಯ ಗುರುಮೂರ್ತಿ, ಹಾಗೂ ವಿನಯ್ ಎಂ ಎಂಬಾತನನ್ನ ಬಂಧಿಸಿ ಜಯನಗರ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೋರ್ಟ್ ಗೆ ನಿನ್ನೆ ಹೊನ್ನಪ್ಪ ಉರ್ಫ್ ಅಣ್ಣಪ್ಪ ಯಾನೆ ಹಂದಿ ಅಣ್ಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯ ಆರೋಪಿಗಳಾದ ಚಂದನ್, ಫಾರೂಕ್, ಮದನ್ ರಾಜ್, ಮಧುಸೂದನ್ ಮತ್ತು ಮದು ಎಂಬ ಐವರು ಹಾಜರಾಗಬೇಕಿತ್ತು. ಇದರಲ್ಲಿ ಮಧು ಗೈರಾಗಿದ್ದನು.
ಈ ವೇಳೆ ಈ ಆರೋಪಿಗಳ ಹತ್ಯೆಗೆ ಸ್ಕೆಚ್ ನಡೆಯುತ್ತಿದೆ ಎಂಬ ಕಾರಣಕ್ಕೆ ನ್ಯಾಯಾಲಯಕ್ಕೆ ಭದ್ರತೆ ಒದಗಿಸಲಾಗಿತ್ತು. ಭದ್ರತೆಯ ಕಾರಣದಿಂದ ಪೊಲೀಸರು ಗಸ್ತು ತಿರುಗುತ್ತಿದ್ದರು. ಈ ವೇಳೆ ಬಂದ ಪ್ಲಾಟಿನಂ ಮತ್ತು ನಂಬರ್ ಪ್ಲೇಟ್ ಇಲ್ಲದ ಡಿಯೋ ಗಾಡಿ ಕೋರ್ಟ್ ನಿಂದ ಬಾಲರಾಜ್ ಅರಸ್ ರಸ್ತೆಗೆ ಎರಡನೇ ಗೇಟ್ ಮೂಲಕ ಬಂದಾಗ ಪೊಲೀಸರು ತಪಾಸಣೆ ನಡೆಸಿದ್ದಾರೆ.
ತಪಾಸಣೆ ವೇಳೆ ಪ್ಲಾಟಿನಂ ವಾಹನವನ್ನ ಜೋರಾಗಿ ಓಡಿಸಿ ಮಲ್ಲೇಶ್ ಪರಾರಿಯಾಗಲು ಯತ್ನಿಸಿದ್ದಾನೆ. ಇವರನ್ನ ಹಿಡಿದ ಪೊಲೀಸರು ಹೆಸರು ಕೇಳಿದ್ದಾರೆ. ಹೆಸರುಗಳನ್ನೂ ತಡವರಿಸಿ ಹೇಳಿದ್ದಾರೆ. ಮಲ್ಲೇಶ್ ಬಿನ್ ಮರಿಯಪ್ಪ, ಬಜಾಜ್ ಫೈನಾನ್ಸ್ ನಲ್ಲಿ ಕೆಲಸ, ವಿನೋಬ ನಗರ 60 ಅಡಿ ರಸ್ತೆಯಲ್ಲಿ ವಾಸ, ರಾಕೇಶ್ ಬಿನ್ ಲಿಂಗರಾಜು, ಕಾಶೀಪುರ ವಾಸ, ಗುರುಮೂರ್ತಿ ಬಿನ್ ಶಿವಾಜಿ ರಾವ್, ಮೇದಾರ ಕೇರಿ ನಿವಾಸ, ಕಾಶಿಪುರದ ಕಾರ್ಪೆಂಟರ್ ಕೆಲಸ ಮಾಡುವ ವಿನಯ್ ಎಂದು ತಿಳಿಸಿದ್ದಾರೆ.
ತಪಾಸಣೆ ನಡೆಸಿದಾಗ ಗುರುಮೂರ್ತಿ ಜೇಬಿನಲ್ಲಿ 9.6 ಇಂಚು ಉದ್ದದ ಸ್ಟೀಲ್ ಫೋಲ್ಡಿಂಗ್ ಸ್ಟೀಲ್ ಚಾಕು ಪತ್ತೆಯಾಗಿದೆ. ಈ ನಾಲ್ವರನ್ನ ವಶಕ್ಕೆ ಪಡೆದ ಜಯನಗರ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
bringing deadly weapons to court