Suddilive || Shivamogga
Rice of annabhagya yojana is being stolen ಅನ್ನಭಾಗ್ಯದ ಅಕ್ಕಿಗೆ ಕನ್ನ ಹಾಕುತ್ತಿರುವ ಖದೀಮರು.
ಬಡವರಿಗಾಗಿ ನೀಡುವ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಶಂಕೆ ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದೆ.
ಶಿವಮೊಗ್ಗದ ಭಾರತದ ಆಹಾರ ನಿಗಮದ ಗೋಡೌನ್ ನಿಂದ ತೆರಳಿದ ಲಾರಿ ತೀರ್ಥಹಳ್ಳಿಗೆ ಹೊರಟಿತ್ತು. ಹೊಸಹೊನ್ನಾಪುರದಲ್ಲಿ ಚಾಲಕರಿಂದಲೇ ಅಕ್ಕಿ ಕಳ್ಳಾಟ ನಡೆಯುತ್ತಿರುವ ದೃಶ್ಯ ಲಭಿಸಿದೆ. ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಹೊನ್ನಾಪುರ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ.
ಯಾರ ಭಯವಿಲ್ಲದೆ ಲಾರಿಯಿಂದ ಅಕ್ಕಿ ಇಳಿಸಿ ಕೊಡುತ್ತಿರುವ ದಂಧೆಕೋರರ ದೃಶ್ಯ ಲಭಿಸಿದೆ. ಅಕ್ರಮವಾಗಿ ಕಾಳಸಂತೆಯಲ್ಲಿ ಲಾರಿ ಚಾಲಕರು ಅಕ್ಕಿ ಮಾರುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಲಾರಿಯಿಂದ ಅಕ್ಕಿ ಇಳಿಸುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಗೋಡೌನ್ ನಿಂದ ನೇರವಾಗಿ ನ್ಯಾಯಬೆಲೆ ಅಂಗಡಿ ತಲುಪಬೇಕಾಗಿದ್ದ ಲಾರಿ, ನ್ಯಾಯಬೆಲೆ ಅಂಗಡಿ ತಲುಪದೇ ಯಾವುದೋ ಒಂದು ಅಂಗಡಿಗೆ ಅಕ್ಕಿ ಮೂಟೆ ಇಳಿಸಿಕೊಡುತ್ತಿರುವುದಾಗಿ ವಿಡಿಯೋದಲ್ಲಿ ಸೆರೆಯಾಗಿದೆ.
ಹಾಡುಹಗಲೇ ದಂಧೆಕೋರರ ಕೈಚಳಕಕ್ಕೆ ಹೇಳೋರಿಲ್ಲ ಕೇಳೋರಿಲ್ಲವೆಂಬಂತಾಗಿತ್ತು. ಆಹಾರ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿಲ್ವಾ ಈ ಕಳ್ಳಾಟ ಎಂಬ ಪ್ರಶ್ನೆ ಸಹ ಉದ್ಭವವಾಗಿತ್ತು. ಈಗ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿ ಅವಿನ್ ಸುದ್ದಿಲೈವ್ ಗೆ ಪ್ರತಿಕ್ರಿಯಿಸಿದ್ದು, 50 ಕೆಜಿ ಅಕ್ಕಿ ಚೀಲ ದುರುಪಯೋಗವಾಗಿರವ ಬಗ್ಗೆ ದೂರು ದಾಖಲಿಸುತ್ತಿರುವುದಾಗಿ ತಿಳುಸಿದ್ದಾರೆ.
ತುಂಗ ಟ್ರಾನ್ಸ್ ಪೋರ್ಟ್ ನ ಚಾಲಕರಿಂದ ಈ ಘಟನೆ ನಡೆದಿದೆ. ಈ ಒಪ್ಪಂದದ ಬಗ್ಗೆ ಪುನರ್ ಪರಿಶೀಲಿಸಲಾಗುವುದು ಎಂದು ಅಧಿಕಾರಿ ಅವಿನ್ ತಿಳಿಸಿದರು.