ಗುಂಡಿಗೆ ಬಿದ್ದು ಬೈಕ್ ಸವಾರ ಸಾವು-died after falling into a pothole

Suddilive || Shivamogga

A young man has reportedly died after falling into a pothole dug into the road near Pesit College-ಗುಂಡಿಗೆ ಬಿದ್ದು ಬೈಕ್ ಸವಾರ ಸಾವು

Pathholes, died

ಪೆಸಿಟ್ ಕಾಲೇಜಿನ ಬಳಿ ರಸ್ತೆಗೆ ತೋಡಿದ ಗುಂಡಿಗೆ ಬಿದ್ದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಗುಡ್ಡದ ಹರಕೆರೆಯ ನಿವಾಸಿ ಜೋಬಿ ಪೌಲ್ ಎಂಬ ಯುವಕ ಸಾಗರ ರಸ್ತೆಯಲ್ಲಿರುವ ದಿನಸಿ ಅಂಗಡಿಯಲ್ಲಿ ಅಕ್ಕಿಯನ್ನ ಖರೀದಿಸಿ ವಾಪಾಸ್ ಹೋಗವಾಗ ಬೈಕ್ ನ ಬ್ಯಾಲೆನ್ಸ್ ತಪ್ಪಿ ರಸ್ತೆಯ ಗುಂಡಿಗೆ ಬಿದ್ದು ಜೀವ ಕಳೆದುಕೊಂಡಿರುವುದಾಗಿ ತಿಳಿದು ಬಂದಿದೆ. 


ಸಾಗರ ರಸ್ತೆಯಿಂದ ಪೆಸಿಟ್ ಕಾಲೇಜಿನ ಹಿಂಭಾಗದ ರಸ್ತೆಯಿಂದ ಗುಡ್ಡದ ಹರಕೆರೆಗೆ ಹೋಗುವಾಗ ಬೈಕ್ ಬ್ಯಾಲೆನ್ಸ್ ತಪ್ಪಿಯೋ ಅಥವಾ ಅಜಾಗರೂಕತೆಯ ಹಿನ್ನೆಲೆಯಲ್ಲಿ ಜೋಬಿ ಪೌಲ್ (45) ಸಾವನ್ನಪ್ಪಿದ್ದಾರೆ ಎಂದು ಅವರ ಸಹೋದರ ನೀಡಿದ ದೂರಿನಲ್ಲಿ ಉಲ್ಲೇಖವಾಗಿದೆ.

ಜೋಬಿಪೌಲ್ ಪೆಸಿಟ್ ಕಾಲೇಜಿನ ಹಿಂಭಾಗದಲ್ಲಿರುವ ಫಾದರ್ ಜೋಸ್ ಅವರ ಫಾರಂ ಹೌಸ್ ನಲ್ಲಿ ಕೆಲಸ ಮಾಡಿಕೊಂಡಿದ್ದು ಇವರು ಮೂಲತಃ ಕೇರಳದವರಾಗಿದ್ದಾರೆ. ಇವರಿಗೆ ಮದುವೆಯಾಗಿರಲಿಲ್ಲ. ಮಾ.16 ರಂದು ಕೇರಳದಿಂದ ಶಿವಮೊಗ್ಗಕ್ಕೆ ಬಂದಿದ್ದರು.‌

died after falling into a pothole

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close