Suddilive || Shivamogga
ಡಿಡಿಪಿಯು ಅಮಾನತ್ತಿಗೆ ದೇವೇಂದ್ರಪ್ಪ ಬಿಗಿಪಟ್ಟು-Devendrappa strongly demands DDPU suspension
ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿ c e t. ಪರೀಕ್ಷೆ ಬರೆಯಲು ಒತ್ತಡ ಹಾಕಿದ ಜಿಲ್ಲೆಯ ಡಿ.ಡಿ.ಪಿ.ಯುರನ್ನ ಹೊಣೆಗಾರಿಕೆಯನ್ನಾಗಿ ಮಾಡುವಂತೆ ಮತ್ತು ಅಮನತ್ತಿನಲ್ಲಿಡುವಂತೆ ಆಗ್ರಹಿಸಿ ಕೆಪಿಸಿಸಿ ಪ್ರಧಾನಕಾರ್ಯದರ್ಶಿ ದೇವೇಂದ್ರಪ್ಪ ಆಗ್ರಹಿಸಿದ್ದಾರೆ.
ನಿನ್ನೆ ದಿವಸ ಪಿಯುಸಿ ಪರೀಕ್ಷಾ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಜನಿವಾರ ತೆಗೆಸಿ ಪರೀಕ್ಷೆ ಬರೆಯುವಂತೆ ಕೆಲವು ಅಧಿಕಾರಿಗಳು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿಸಿರುವುದು ಸ್ಪಷ್ಟವಾಗಿದೆ. ಇಂತಹ ಪ್ರಕರಣವು ಒಂದು ಜನಾಂಗ ಮತ್ತು ಒಂದು ಧರ್ಮಕ್ಕೆ ವಿರೋಧವಾದ ಕೆಲಸವಾಗಿದೆ.
ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗುವಂತಗಿದೆ. ಸಿಇಟಿ ಪರೀಕ್ಷೆ ಅಥವಾ ಯಾವುದೇ ಪರೀಕ್ಷೆಯಲ್ಲಿ.. ಸರ್ಕಾರದಿಂದ ಈ ರೀತಿ ನಿಯಮಗಳಿರುವುದಿಲ್ಲ.. ಕೆಲವು ಪಿಯು ಬೋರ್ಡಿನ ಅಧಿಕಾರಿಗಳು ತಮ್ಮ ಸ್ವಯಂ ಪ್ರತಿಷ್ಠೆಗೋಸ್ಕರ. ಈ ರೀತಿ ನಿಯಮ ಉಲ್ಲಂಘನೆ ಮಾಡಿರುವುದು ಸರ್ಕಾರಕ್ಕೆ ಮುಜುಗರ ತರುವಂತಹ ಕೆಲಸವಾಗಿದೆ. ಅಧಿಕಾರಿಗಳು ಮಾಡುವ ಕೆಲಸಗಳು ಬೇಕಾದಷ್ಟಿದೆ.
ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಕೆಲಸವೆಂದರೆ ಮಿತಿಮೀರಿದ ಡೊನೇಷನ್... ಕಟ್ಟಡದ ಹೆಸರಿನಲ್ಲಿ ವಿದ್ಯಾರ್ಥಿಗಳ ಪೋಷಕರಿಂದ ಅಧಿಕ ಹಣ ವಸೂಲಿ.... ಕಾಲೇಜಲ್ಲಿ ಪಾಠ ಮಾಡದೆ ಅಕ್ರಮವಾಗಿ ಟ್ಯೂಷನ್ ಮಾಡುವುದು. ಸಿಇಟಿ ಮತ್ತು ನೀಟ್ ವಿದ್ಯಾರ್ಥಿಗಳ ಕೋಚಿಂಗ್ ಕೊಡುವ ಕೋರ್ಸ್.. ಹೆಸರಿನಲ್ಲಿ ಅಕ್ರಮ ತರಬೇತಿ ಕೇಂದ್ರ ಇನ್ನು ಹಲವಾರು ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಪೋಷಕರಿಂದ ಲಕ್ಷಾಂತರ ರೂಪಾಯಿ ಹಣ ವಸೂಲ್ಲಿ ಮಾಡುತ್ತಿರುವ ಉಪನ್ಯಾಸಕರು ಮತ್ತು ಕೆಲವು ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು.... ಒಂದು ಧರ್ಮದ ಒಂದು ಪ್ರಚೋದನಕಾರಿ... ಕೆಲಸಕ್ಕೆ ಕೈ ಹಾಕಿ ಸರ್ಕಾರವನ್ನು ಇರಿಸು ಮುರಿಸು ಮಾಡುವ ಕೆಲಸಕ್ಕೆ ಕೈ ಹಾಕಿರುವುದಕ್ಕೆ ದೇವೇಂದ್ರಪ್ಪ ಕಿಡಿಕಾರಿದ್ದಾರೆ.
ಅಧಿಕಾರಿಗಳ ಮೇಲೆ ಈ ಕೂಡಲೇ ಮಾನ್ಯ ಶಿಕ್ಷಣ ಸಚಿವರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
DDPU suspension