Suddilive || Shivamogga
20 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದ ಆರೋಪಿ-ಆರೋಪಿ ಎಂದು ಡಿಕ್ಲರೇಷನ್-Declaration that the accused has not appeared in court for 20 years
ಕಳೆದ 20 ವರ್ಷಗಳಿಂದ ನ್ಯಾಯಲಯಕ್ಕೆ ಹಾಜರಾಗದ ಆರೋಪಿಯನ್ನ ನ್ಯಾಯಾಲಯ ಆರೋಪಿ ಎಂದು ಡಿಕ್ಲೇರ್ಡ್ ಮಾಡಿದೆ.
ವಲಯ ಅರಣ್ಯಾಧಿಕಾರಿಗಳು, ಉಂಬಳೇಬೈಲು ವಲಯ ಕಚೇರಿಯಲ್ಲಿ ದಾಖಲಾದ ಅರಣ್ಯ ಮೊಕದ್ದಮೆ ಸಂಖ್ಯೆ 53/2005-06 ದಿ: 11-09-2005 (ಸಿ.ಸಿ.ನಂ 3477/2016) ರಲ್ಲಿ ಆರೋಪಿಯಾದ ಜಾವಿದ್, ಗೋಪಾಳ, ಶಿವಮೊಗ್ಗ ಇವರು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದ ಕಾರಣ 5ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು, ಜೆಎಂಎಫ್‌ಸಿ, ಶಿವಮೊಗ್ಗ ಇವರು ಏ.04 ರಂದು ಆರೋಪಿಯ ಉದ್ಘೋಷಣೆ ಹೊರಡಿಸಲು ಆದೇಶಿಸಿದ್ದು, ಸದರಿ ಆರೋಪಿಯು ಪತ್ತೆಯಾದಲ್ಲಿ ವಲಯ ಅರಣ್ಯಾಧಿಕಾರಿಗಳು, ಉಂಬಳೇಬೈಲು ವಲಯ ಇವರಿಗೆ ತಿಳಿಸಲು ಕೋರಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Declaration of accused