ಸಬ್‌ರಿಜಿಸ್ಟಾರ್ ಕಚೇರಿ ಸ್ಥಳಾಂತರ ಬೇಡ : ವಕೀಲರ ಆಗ್ರಹ-Don't relocate the sub-registrar's office

Suddilive || Shivamogga

ಸಬ್‌ರಿಜಿಸ್ಟಾರ್ ಕಚೇರಿ ಸ್ಥಳಾಂತರ ಬೇಡ : ವಕೀಲರ ಆಗ್ರಹ-Don't relocate the sub-registrar's office: Lawyers' demand

Relicate, office


ಸಬ್‌ರಿಜಿಸ್ಟಾರ್ ಕಚೇರಿಯನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಬಾರದು ಎಂದು ವಕೀಲ ಕೆ.ಎಂ.ದೇವರಾಜ್ ಒತ್ತಾಯಿಸಿದರು.

ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಬ್‌ರಿಜಿಸ್ಟಾರ್ ಕಚೇರಿ ವಿನೋಬನಗರ ಪೊಲೀಸ್‌ಚೌಕಿ ಬಳಿ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ. ಆದರೆ ಈ ಕಚೇರಿಯನ್ನು ರೈತರಿಗಾಗಿಯೇ ಮೀಸಲಿರುವ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲಾಗುತ್ತಿದೆ. ಈಗಿರುವ ಕಟ್ಟಡದ ಬಾಡಿಗೆಗಿಂತ ದುಪ್ಪಟ್ಟು ಬಾಡಿಗೆ ನೀಡುವ ಎಪಿಎಂಸಿ ಆವರಣದಲ್ಲಿನ ಕಟ್ಟಡಕ್ಕೆ ಕಚೇರಿಯನ್ನು ಸ್ಥಳಾಂತರಿಸಲು ಹೊರಟಿರುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದರು.

ಎಪಿಎAಸಿ ಕಚೇರಿ ಮತ್ತು ಆವರಣ ರೈತರಿಗಾಗಿಯೇ ಮೀಸಲಿರುವ ಜಾಗ ಇದು ಅದಕ್ಕೆ ಸೀಮಿತವಾಗಿರಬೇಕು. ಆದರೆ ಸಬ್‌ರಿಜಿಸ್ಟಾರ್ ಕಚೇರಿ ಯನ್ನು ಈ ಆವರಣಕ್ಕೆ ಸ್ಥಳಾಂತರಿಸದೇ ಬೇರೆ ಎಲ್ಲಿಯಾದರೂ ಅನುಕೂಲವಾಗುವ ಸ್ಥಳಕ್ಕೆ ಬದಲಾಯಿಸಿದರೆ ಒಳ್ಳೆಯದು ಎಂದು ಹೇಳಿದರು.

ಈ ವಿಷಯಕ್ಕೆ ಸಂಬAಧಿಸಿದAತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಉಪನೊಂದಣಿ ಇಲಾಖೆಯ ಇನ್ಸ್ಪೆಕ್ಟರ್, ಜಿಲ್ಲಾಧಿಕಾರಿ, ಡಿಸ್ಟ್ರಿಕ್ ರಿಜಿಸ್ಟಾರ್ , ಸಬ್ ರಿಜಿಸ್ಟಾರ್ ಹಾಗೂ ಎಪಿಎಂಸಿ ಕಾರ್ಯದರ್ಶಿ ವಿರುದ್ದ ಕೆ.ರುದ್ರೇಶ್ ಮತ್ತು ೧೩ ಜನರು ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿದ್ದಾರೆ ಎಂದರು.

ಎಪಿಎAಸಿ ಆವರಣದಲ್ಲಿ ರೈತರ ಅಗತ್ಯತೆಗಳು ಹೊರತುಪಡಿಸಿ ಇನ್ಯಾವುದಕ್ಕೂ ಕೂಡ ಆ ಸ್ಥಳದಲ್ಲಿ ಅವಕಾಶ ಕಲ್ಪಿಸಬಾರದು ಎಂದ ಅವರು, ನಗರದಿಂದ ದೂರದಲ್ಲಿರುವ ಆಹಾರ ಇಲಾಖೆಯನ್ನು ಜನ ಸಾಮಾನ್ಯರಿಗೆ ಅನುಕೂಲವಾಗುವ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಟಿಯಲ್ಲಿ ವಕೀಲರಾದ ಚಂದ್ರಕಾಂತ್, ಮಂಜುನಾಥ್, ರಾಜಶೇಖರ್ ಇತರರು ಉಪಸ್ಥಿತರಿದ್ದರು.

Don't relocate the sub-registrar's office

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close