Suddilive || Shivamogga
ಎಸ್ಪಿ ವಿರುದ್ಧ ಮಾಜಿ ಡಿಸಿಎಂ ಕೆಂಡಮಂಡಲ-Former DCM Kendamandala against SP
ಮೈದಾನ ವಿಚಾರದಲ್ಲಿ ಮಾಜಿ ಡಿಸಿಎಂ ಈಶ್ವರಪ್ಪ ಕೆಂಡಮಂಡಲರಾಗಿದ್ದಾರೆ. ಮನವಿ ನೀಡಿವ ವೇಳೆ ಎಸ್ಪಿ ಮಿಥುನ್ ಕುಮಾರ್ ಮೇಲೆ ಎಗುರಾಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ
ಎದುರಿನ ಮೈದಾನವನ್ನ ವಕ್ಫ್ ಆಸ್ತಿಯೆಂದು ಘೋಷಣೆ ಮಾಡಿಕೊಂಡಿರುವುದನ್ನ ವಿರೋಧಿಸಿ ಇಂದು ರಾಷ್ಡ್ರಭಕ್ತರ ಬಳಗದ ಸಂಸ್ಥಾಪಕ ಕೆ.ಎಸ್ ಈಶ್ವರಪ್ಪ ಮತ್ತು ಪುತ್ರ ಕಾಂತೇಶ್ ನೇತೃತ್ವದಲ್ಲಿ ಪ್ರತಿಭಟಿಸಲಾಗಿದೆ.
ಪ್ರತಿಭಟಿಸಿ ನಂತರ ಮನವಿ ಕೊಡುವ ವೇಳೆ ಸ್ಥಳಕ್ಕೆ ಆಗಮಿಸಿದ ಎಸ್ಪಿ ಮತ್ತು ಡಿಸಿ ಅವರಿಗೆ ಸಕ್ಕತ್ ಕ್ಲಾಸ್ ತೆಗೆದುಕೊಂಡರು. ಈ ವೇಳೆ ವಿಷಯ ಪ್ರಸ್ತಾಪಿಸಿದ ಈಶ್ವರಪ್ಪ ರೈಲ್ವೆ ಹಳಿಯನ್ನ ಬಳಸಿ ಪ್ರವೇಶವನ್ನ ನಿಷೇಧಿಸಲಾಗಿತ್ತು. ರೈಲ್ವೆ ಆಸ್ತಿಯನ್ನ ಬಳಸುವುದು ಕಾನೂನು ಬಾಹಿರ ತಾನೆ. ಅದನ್ನ ತಂದು ಗೂಟ ನೆಟ್ಟಿದ್ದಾರೆ ಎಂದರೆ ನೀವು ಏನು ಕತ್ತೆ ಕಾಯುತ್ತಿದ್ದೀರಾ? ಎಂದು ಕೆಂಡ ಮಂಡಲರಾದರು.
ನಿಮ್ಮ ಇಲಾಖೆ ಬದುಕಿದೆಯೋ ಸತ್ತಿದೆಯೋ, ರಕ್ಷಣೆಮಾಡಲು ಆಗದೆ ಇದ್ದ ಮೇಲೆ ಎಸ್ಪಿಯಾಕೆ ಆಗಿದ್ದೀರಿ? ರೈಲ್ವೆ ಇಲಾಖೆ ಆಸ್ತಿಯನ್ನ ಬಳಸಿದವರ ವಿರುದ್ಧ ಇದುವರೆಗೂ ಕ್ರಮಕೈಗೊಂಡಿಲ್ಲ ಯಾಕೆ? ನಾವು ದನ ಕಾಯೋಕೆ ಬಂದಿಲ್ಲ ಎಂದು ಗುಡುಗಿದರು.
ಮೈದಾನವನ್ನ ನಗರ ಪಾಲಕೆ ಆಸ್ತಿ ಎಂದು ಘೋಷಿಸಬೇಕು ಹಾಗೂ ಬೇಲಿ ಹಾಕಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಈಶ್ವರಪ್ಪ ಮನವಿಯಲ್ಲಿ ಒತ್ತಾಯಿಸಿದರು.
ಪ್ರತಿಭಟನಾ ವೇಳೆ ಗುಡಿಗಿದ ಕೆ.ಈ.ಕಾಂತೇಶ್ ನಮಾಜ್ ಮಾಡಲು ಬಿಡ್ತಾ ಇದ್ವಿ, ಕೊಟ್ಟಿದ್ದು ಜಾಗವನ್ನ ತೆಗೆದುಕೊಂಡ್ರೆ ನಮಾಜ್ ಮಾಡಲು ಅವಕಾಶ ಇಲ್ಲವೆಂದರೆ ಮುಂದಿನ ವರ್ಷದಿಂದ ಅದನ್ನೂ ಬಿಡೊಲ್ಲ ಎಂದು ಗುಡುಗಿದರು.