Suddilive || Bhadravathi
ತೆಂಗಿನಮರ ಧಗ ಧಗ-Lightning Fire
ಭದ್ರಾವತಿಯಲ್ಲಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹತ್ತಿಕೊಂಡಿದೆ. ತಕ್ಷಣವೇ ಅಗ್ನಿಶಾಮಕ ದಳದವರ ಆಗಮನದಿಂದ ಬೆಂಕಿ ಆರಿಸಲಾಗಿದೆ.
ಇಂದು ಗುಡುಗು ಮಿಂಚು ಸಮೇತ ಭದ್ರಾವತಿಯಲ್ಲಿ ಸಾಧಾರಣ ಮಳೆಯಾಗಿದೆ. ಮಿಂಚೊಂದು ಭದ್ರಾವತಿ ವಿದ್ಯಾಮಂದಿರದ ಮೂರನೇ ತಿರುವಿನಲ್ಲಿರುವ ಮನೆಯ ಹಿಂಬದಿಯಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡೆದಿದೆ.
ಸಿಡಲು ಬಡಿದ ಪರಿಣಾಮ ತೆಂಗಿನ ಮರ ಹೊತ್ತಿಉರಿದಿದೆ. ತಕ್ಷಣವೇ ಅಗ್ಮಿಶಾಮಕದಳದ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಆಗಮನದಿಂದ ಬೆಂಕಿ ಆರಿಸಲಾಗಿದೆ.
Lightning Fire