Suddilive || Shivamogga
ಮನೆಯಲ್ಲಿದ್ದ ಟ್ರಂಕ್ ಮನೆಹತ್ತಿರದ ಚಾನೆಲ್ ಬಳಿ ಅನಾಥವಾಗಿ ಪತ್ತೆ-Trunk theft -A trunk from the house was found near a canal near the house.
ಶಿವಮೊಗ್ಗದ ನವುಲೆಯ ಭೋವಿ ಕಾಲೋನಿಯಲ್ಲಿ ವಾಸವಾಗಿದ್ದ ರಾಜಕುಮಾರ್ ಬಿ ಎಂಬುವರ ಮನೆಯಲ್ಲಿದ್ದ ಟ್ರಂಕ್ ಕಳುವಾಗಿದ್ದು ಒಟ್ಟು 142 ಗ್ರಾಂ ಚಿನ್ನಾಭರಣ, 450 ಗ್ರಾಂ ಬೆಳ್ಳಿ ಮತ್ತು 15 ಲಕ್ಷ ರೂ ನಗದು ಹಾಗೂ ಅಮೂಲ್ಯ ದಾಖಲಾತಿಗಳು ಕಳುವಾಗಿರುವ ಬಗ್ಗೆ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನವುಲೆಯ ಭೋವಿ ಕಾಲೋನಿಯ ನಿವಾಸಿಯಾಗಿರುವ ರಾಜಕುಮಾರ್ ಅವರ ಟ್ರಂಕ್ ನಲ್ಲಿ ಜಮೀನಿನ ದಾಖಲಾತಿ, ಜಮೀನು ಮಾರಾಟದ ದಾಖಲಾತಿ, ಮುಂಗಡ ಹಣ, ಚಿನ್ನಾಭರಣಗಳು ಮತ್ತು ಬೆಳ್ಳಿ ವಸ್ತುಗಳನ್ನ ಇಟ್ಟಿದ್ದರು.
ಈ ಟ್ರಂಕ್ ಕಳುವಾಗಿದ್ದು ಇದು ಮನೆಯಿಂದ 150 ಮೀಟರ್ ದೂರದ ಚಾನೆಲ್ ನಲ್ಲಿ ಖಾಲಿ ಟ್ರಂಕ್ ಪತ್ತೆಯಾಗಿದೆ. ಇದರಿಂದ ಅನಾರೋಗ್ಯಕ್ಕೊಳಗಾದ ರಾಜಕುಮಾರ್ ನಂತರ ಸುಧಾರಿಸಿಕೊಂಡು ಘಟನೆಯ ಕುರಿತು ದೂರು ದಾಖಲಿಸಿದ್ದಾರೆ.
Trunk theft