Suddilive || Shivamogga
ನಿಲ್ಲದ ಬಾಣಂತಿ ಸಾವು-Unrelenting maternal death
ರಾಜ್ಯಾದ್ಯಂತ ಬಾಣಂತಿ ಸಾವಿನ ಪ್ರಕರಣ ಸದ್ದು ಮಾಡುತ್ತಿರುವ ಬೆನ್ನಲ್ಲೇ ಶಿವನೊಗ್ಗದ ಮೆಗ್ಗಾನ್ ನಲ್ಲಿ ಇಂದು ಮತ್ತೊಂದು ಬಾಣಂತಿ ಸಾವು ತಲ್ಲಣ ಮೂಡಿಸಿದೆ.
ಮೂರು ದಿನಗಳ ಹಿಂದೆ ಟಿಪ್ಪುನಗರದ ರೇಷ್ಮ ಎಂಬ ಮಹಿಳ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಎರಡನೇ ಡೆಲಿವರಿಗೆ ಬಂದ ಮಹಿಳೆ ಮಗುವಿಗೆ ಜನ್ಮ ನೀಡಿದ್ದರು.
ದಿಡೀರ್ ನೇ ಮಹಿಳೆಗೆ ರಕ್ತಸ್ರಾವ ಉಂಟಾಗಿದೆ. ಇಂದು ಮಹಿಳೆ ಚಿಕಿತ್ಸೆ ಫಲಕಾರಿಯಾಗಿಸದೆ ಸಾವನ್ನಪ್ಪಿದ್ದಾರೆ. ಅಂಗಾಂಗ ವೈಫಲ್ಯದಿಂದ ರೇಷ್ಮ ಅಸುನೀಗಿರುವುದಾಗಿ ಹೇಳಲಾಗುತ್ತಿದೆ.
ಜ.4 ರಂದು ಎರಡನೇ ಹೆರಿಗೆಗೆ ಬಂದಿದ್ದ ಕವಿತ ಸಾವನ್ನಪ್ಪಿದ್ದರು. ಜ.26 ರಂದು ಹೊಸನಗರ ತಾಲೂಕಿನ ದುಬಾರೆತಟ್ಟಿಯ ಶಿಕ್ಷಕಿ ಅಶ್ವಿನಿ ಮೆಗ್ಗಾನ್ ನಲ್ಲಿ ಬಂದು ಹೆರಿಗೆಗೆ ದಾಖಲಾಗಿದ್ದರು. ಜ.28 ರಂದು ರಕ್ತಸ್ರಾವಗೊಂಡು ಸಾವನ್ನಪ್ಪಿದ್ದರು. ಫೆ.14 ರಂದು ಮಂಜುಳಾ ಎಂಬುವರು ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಈ ವರ್ಷ ಇದು ಐದನೇಯ ಬಾಣಂತಿ ಸಾವಾಗಿದೆ.
Unrelenting maternal death