ಜನಾಕ್ರೋಶ ಕಾರ್ಯಕ್ರಮದ ವೇಳೆ ಮಳೆರಾಯ ತಂದ ಹಲವು ಪಜೀತಿ!Janakrosha program!

Suddilive || Shivamogga

ಜನಾಕ್ರೋಶ ಕಾರ್ಯಕ್ರಮದ ವೇಳೆ ಮಳೆರಾಯ ತಂದ ಹಲವು ಪಜೀತಿ!Many blessings brought by the rain during the Janakrosha program!

Janakrosha, program

ಶಿವಮೊಗ್ಗದಲ್ಲಿ ಬಿಜೆಪಿಯ ಜನಾಕ್ರೋಶ ಯಾತ್ರೆಗೆ ಮಳೆರಾಯ ಅಡ್ಡಿಪಡಿಸಿದ್ದಾನೆ. ಆರಂಭಗೊಂಡ ಮಳೆಗೆ ಜನಾಕ್ರೋಶದ ವೇದಿಕೆಯ ಸುತ್ತಮುತ್ತ ಮಳೆರಾಯ ಪಚೀತಿಯನ್ನ ತಂದೊಡ್ಡಿದ್ದಾನೆ.  ಮಹಿಳೆಯ ತಲೆಯ ಮೇಲೆ ಮರದಕೊಂಬೆ ಬಿದ್ದರೆ, ಮತ್ತೊಂದು ಕಡೆ ಮುರಿದು ಬೀಳುತ್ತಿದ್ದ ಫ್ಲೆಕ್ಸನ್ನ ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 

ಆ ವಿಡಿಯೋ ಲಭ್ಯವಾಗಿದೆ. ವರ್ಣನ ಅಬ್ಬರಕ್ಕೆ ಬಿಜೆಪಿಯ ಜನಾಕ್ರೋಶ ಕಾರ್ಯಕ್ರಮಕ್ಕೆ ಅಡ್ಡಿ ಉಂಟಾಗಿದೆ.  ಗೋಪಿ ಸರ್ಕಲ್ ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ಅರ್ಧದಲ್ಲೇ ಮೊಟಕುಗೊಂಡಿದೆ.

ಮಹಿಳೆಯ ಮೇಲೆ ಮರದ ಕೊಂಬೆ ಬಿದ್ದಿದೆ. ವೇದಿಕೆಯ ಪಕ್ಕದಲ್ಲಿಯೇ ಇದ್ದ ಮರದ ಕೆಳಗೆ ಶೆಲ್ಟರ್ ಪಡೆಯಲು ಮುಂದಾದಾಗ ಮಹಿಳೆಯೋರ್ವರ ಮೇಲೆ ಮರದ ಕೊಂಬೆ ಬಿದ್ದಿದೆ. 

ಬೀಳುತ್ತಿದ್ದ ಜನಾಕ್ರೋಶ ಯಾತ್ರೆಯ ಫ್ಲೆಕ್ಸನ್ನು ಕಾರ್ಯಕರ್ತರು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ಈ ಹಿನ್ಬಲೆಯಲ್ಲಿ ಶಾಸಕ ಚೆನ್ನ ಬಸಪ್ಪರ ಭಾಷಣ ಮುಗಿಯುತ್ತಿದ್ದಂತೆ ವಿಜೇಂದ್ರ ಮಾತನಾಡಿ ಕಾರ್ಯಕ್ರಮವನ್ನ ಮೊಟಕುಗೊಳಿಸಲಾಯಿತು. ಇದರಿಂದಾಗಿ ನಿಗದಿತ ವೇಳಗಿಂತಲೂ ಮೊದಲೇ ಮುಗಿದ ಬಹಿರಂಗ ಸಭೆ ಮುಕ್ತಾಯಗೊಂಡಿದೆ. 


ಹೀಗೆ ಸಣ್ಣಪುಟ್ಟ ಅವಘಡದೊಂಡಿದೆ ಜನಾಕ್ರೋಶ ಸಮಾವೇಶ ಮುಕ್ತಾಯಗೊಂಡಿದೆ. ಒಂದು ವೇಳೆ3-30 ಕ್ಕೆ ಜನಾಕ್ರೋಶ ಯಾತ್ರೆ ನಡೆದಿದ್ದರೆ ಈ ಎಲ್ಲಾ ಕಾರ್ಯಕ್ರಮ ಸುಗಮವಾಗಿ ಮುಕ್ತಾಯಗೊಳ್ಳುತ್ತಿತ್ತು. ನಿಗದಿತ ಸಮಯಕ್ಕಿಂತ ಒಂದು ಗಂಟೆಗೂ ಅಧಿಕಹೊತ್ತು ತಡವಾಗಿ ಆರಂಭಗೊಂಡ ಪರಿಣಾಮ ಈ ಎಲ್ಲಾ ಅವಘಡಕ್ಕೆ ವೇದಿಕೆ ಸಾಕ್ಷಿಯಾಗಿದೆ. 

Janakrosha program

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close